Harsha Richhariya: ಬಿಕ್ಕಿ ಬಿಕ್ಕಿ ಅಳುತ್ತಾ ಮಹಾಕುಂಭದಿಂದ ಹೊರ ನಡೆದ ಸುಂದರ ಸಾಧ್ವಿ ಹರ್ಷ ರಿಚಾರಿಯಾ !! ಅಯ್ಯೋ ದೇವರೇ ನಡುವಲ್ಲಿ ಈಕೆಗೆ ಆಗಿದ್ದೇನು?

Harsha Richhariya: ಉತ್ತರ ಪ್ರದೇಶದ ಪ್ರಯಾದ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಅಟ್ರಾಕ್ಷನ್ ಆಗಿದ್ದ ಸುಂದರ ಸಾಧ್ವಿ ಹರ್ಷ ಆಚಾರಿಯಾ ಇದೀಗ ಕಣ್ಣೀರು ಹಾಕುತ್ತಾ ಮಹಾ ಕುಂಭದಿಂದ ಹೊರ ಬಂದಿದ್ದಾರೆ.
ಹೌದು, 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಜೃಂಭಣೆಯಿಂದ ನೆರವೇರುತ್ತಿದೆ. ಲಕ್ಷಗಟ್ಟಲೆ ಭಕ್ತಾದಿಗಳು, ಸಾಧು-ಸಂತರು ಇದರಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. ಅಲ್ಲದೆ ಈ ಕುಂಭಮೇಳವು ಅನೇಕ ವಿಶೇಷತೆಗಳಿಗೆ ಕಾರಣವಾಗಿದೆ. ಹಲವು ವಿಶೇಷತೆಗಳನ್ನು ಮೆರೆಯುವಂತಹ ಸಾಧು ಸಂತರು, ನಾಗಸಾಧುಗಳು ಇದರಲ್ಲಿ ಕಂಡು ಬರುತ್ತಿದ್ದಾರೆ. ಇದರಡೆಯಲ್ಲಿ ಬಹಳ ಪ್ರಮುಖ ಆಕರ್ಷಣೆಯಾಗಿ ಕಂಡುಬಂದದ್ದು ಸುರಸುಂದರಿಯಾದ ಸಾಧ್ವಿ ಹರ್ಷ ರಿಚಾರಿಯಾ(Harsha Richhariya). ಆದರೆ ಈ ಸಾಧ್ವಿ ಇದೀಗ ಬಿಕ್ಕಿ ಬಿಕ್ಕಿ ಅಳುತ್ತಾ ಕುಂಭಮೇಳದಿಂದ ಹೊರ ಬಂದಿದ್ದಾರೆ. ರಿಚಾರಿಯಾ ಅಚಾನಕ್ ಕುಂಭಮೇಳವನ್ನು ಅರ್ಧದಲ್ಲಿಯೇ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಅಳುತ್ತಾ ಗಂಭೀರ ಆರೋಪ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.
ಬಿಕ್ಕಿ ಬಿಕ್ಕಿ ಅಳುತ್ತಿರುವ ರಿಚಾರಿಯಾ:
ವೈರಲ್ ಸಾಧ್ವಿ ಹರ್ಷ ರಿಚಾರಿಯಾ ತಮ್ಮ ವಿಡಿಯೋದಲ್ಲಿ, ‘ನಾಚಿಕೆ ಆಗಬೇಕು ಆ ಜನಕ್ಕೆ, ನಾನು ಇಲ್ಲಿ ಮಹಾಕುಂಭದಲ್ಲಿ ಇರೋಕೆ ಬಿಡಲಿಲ್ಲ. ಈ ಕುಂಭಮೇಳ ನಮ್ಮ ಜೀವನದಲ್ಲಿ ಒಮ್ಮೆ ಬರುತ್ತೆ, ನೀವು ಅದನ್ನ ನನ್ನಿಂದ ಕಸಿದುಕೊಂಡಿದ್ದೀರಿ. ಈಗ ನಾನು ಏನೋ ದೊಡ್ಡ ತಪ್ಪು ಮಾಡಿದಂಗೆ ಅನಿಸುತ್ತಿದೆ. ನನ್ನದು ಯಾವ ತಪ್ಪೂ ಇಲ್ಲದಿದ್ದರೂ ನನ್ನ ಮೇಲೆ ಟೀಕೆ ಮಾಡ್ತಿದ್ದಾರೆ. ಇನ್ನು ಇಲ್ಲಿ ನಿಲ್ಲೋಕೆ ಆಗಲ್ಲ’ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿವಾದ:
ಮಹಾಕುಂಭಮೇಳ ಆರಂಭದಿಂದಲೂ ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿದ್ದಾರೆ. ವೈರಲ್ ವಿಡಿಯೋದಲ್ಲಿ ಹರ್ಷ ರಿಚಾರಿಯಾ ಸಾಧ್ವಿ ರೂಪದಲ್ಲಿದ್ದಾರೆ. ಆಗ, ಮಹಿಳಾ ವರದಿಗಾರ್ತಿಯೊಬ್ಬರು ಇಷ್ಟು ನೀವು ಸುಂದರಿಯಾಗಿದ್ದರೂ ಏಕೆ ಸಾಧ್ವಿ ಆಗಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ಹರ್ಷಾ ರಿಚಾರಿಯಾ, ಧರ್ಮದ ಜೊತೆ ಇದ್ದಾಗ ನೆಮ್ಮದಿ ಸಿಗುತ್ತದೆ. ನಾನೀಗ 30 ವರ್ಷದವಳು, ಕಳೆದ 2 ವರ್ಷದ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದೇನೆ’ ಎಂದಿದ್ದರು. ಈ ವಿಡಿಯೋ ವೈರಲ್ ಆದ ನಂತರ ಟ್ರೋಲ್‌ರ್‌ಗಳು ಸಾಧ್ವಿ ಹರ್ಷಾ ಅವರನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.
ಯಾರು ಈ ಹರ್ಷ ರಿಚಾರಿಯಾ?
ಈ ಸುಂದರ ಸಾದ್ವಿ ಹರ್ಷ ರಿಚಾರ್ಯ ಉತ್ತರಖಂಡ ಮೂಲದವಳು. ವಯಸ್ಸು 30. ಇವರ ತಂದೆ ತಾಯಿ ಭೋಪಾಲ್ ನಲ್ಲಿ ವಾಸವಾಗಿದ್ದಾರೆ. ತಂದೆ ಕೆಲಸ ಬಿಟ್ಟಿದ್ರೆ ತಾಯಿ ಬುಟಿಕ್ ನಡೆಸ್ತಾರೆ. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಶುರು ಮಾಡಿದ್ದ ಹರ್ಷ ಆರು ವರ್ಷಗಳ ನಂತ್ರ ಆಧ್ಯಾತ್ಮಿಕದತ್ತ ಒಲವು ತೋರಿಸಿದ್ದರು. ನಿರೂಪಕಿಯಾಗಿ ಕೆಲಸ ಮಾಡ್ತಿದ್ದ ಹರ್ಷ, ಕಳೆದ ಎರಡು ವರ್ಷಗಳಿಂದ ಮಾಡೆಲಿಂಗ್ ಮತ್ತು ನಿರೂಪಣೆಯಿಂದ ದೂರವಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಂ ನಲ್ಲಿ ಸುಮಾರು ಹನ್ನೆರಡು ಲಕ್ಷ ಫಾಲೋವರ್ಸ್ ಇದ್ದಾರೆ. ಸಧ್ಯ ತನ್ನನ್ನು ಆಚಾರ್ಯ ಮಹಾಮಂಡಲೇಶ್ವರನ ಶಿಷ್ಯೆ ಎಂದು ಹೇಳಿಕೊಂಡಿದ್ದಾರೆ. ಸಧ್ಯ ಕಂಡು ಕೇಳರಿಯದ ಜನಸಾಗರದ ಮಧ್ಯೆ, ರಿಚಾರಿಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದ್ದಾರೆ.
ಹರ್ಷ ರಿಚಾರಿಯಾ ಸಾದ್ವಿಯಾಗಲು ಕಾರಣ?
ಕಂಟೆಂಟ್ ಕ್ರಿಯೇಟರ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿಯೂ ಮಿಂಚಿದ್ದ ಹರ್ಷ ರಿಚಾರಿಯಾ ಅವರು ಇಂದು ಆಧ್ಯಾತ್ಮದ ಕಡೆಗೆ ವಾಲಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿರುವುದಂತೂ ಸತ್ಯ. ಈ ಕುರಿತಾಗಿ ಹರ್ಷ ಅವರೇ ಮಾತನಾಡಿದ್ದು ‘ನಾನು ಇರುವುದೆಲ್ಲವನ್ನು ಬಿಟ್ಟು ಈ ಹಾದಿಯನ್ನು ಅಪ್ಪಿಕೊಂಡಿದ್ದೇನೆ. ನಾನು ಆಂತರಿಕ ಶಾಂತಿಗಾಗಿ ಸಾಧ್ವಿಯ ಜೀವನವನ್ನು ಆರಿಸಿದೆ ಎಂದು ವಿವರಿಸಿದ್ದಾರೆ. ನನಗೆ 30 ವರ್ಷ ವಯಸ್ಸಾಗಿದ್ದು, ಕಳೆದ ಎರಡು ವರ್ಷಗಳಿಂದ ಸಾಧ್ವಿಯಾಗಿ ಬದುಕುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ಸಾದ್ವಿಯಾಗಲು ಪ್ರಮುಖ ಕಾರಣ ಮನಃಶಾಂತಿ ಮತ್ತು ಹೊಸ ಅಸ್ಮಿತೆ ಎಂದಿದ್ದಾರೆ. ಈ ಕಾರಣಕ್ಕಾಗಿಯೇ, ಎಲ್ಲವನ್ನು ಬಿಟ್ಟು ನಾನು ಸಾಧ್ವಿಯಾಗಿ ಪರಿವರ್ತನೆಗೊಂಡಿದ್ದೇನೆ ಎನ್ನುತ್ತಾರೆ. ಜೊತೆಗೆ ಹರ್ಷ ರಿಚಾರಿಯ ಪ್ರಕಾರ, ಅವರು ಸಾಧ್ವಿಯಾಗುವ ಮೂಲಕ ಸನಾತನ ಧರ್ಮವನ್ನು ನಿರಂತರವಾಗಿ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗುತ್ತಾರಂತೆ. ಶಾಂತಿಗಾಗಿ ಸಾಧ್ವಿಯಾಗುವ ನಿರ್ಧಾರ ಕೈಗೊಂಡಿದ್ದಾರಂತೆ.
Comments are closed.