Bangalore: ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

Bangalore: ಕೊರೊನಾ ನಂತರ ಚೀನಾದಲ್ಲಿ ಹೊಸ ವೈರಸೊಂದು ತಾಂಡವಾಡುತ್ತಿದ್ದು, ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಮಲೇಷಿಯಾದಲ್ಲಿ ಕೂಡಾ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮೊದಲ HMPV ವೈರಸ್‌ ಪ್ರಕರಣವು ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ. ಜ್ವರ ಬಂದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿದಾಗ HMPV ವೈರಸ್‌ ಪತ್ತೆಯಾಗಿದೆ.

HMPV ಮೊದಲ ಪ್ರಕರಣ ವರದಿಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಮತ್ತಷ್ಟು ಅಲರ್ಟ್‌ ಆಗಿದೆ. ಈ ವೈರಸ್‌ಗೆ ಯಾರೂ ಹೆದರುವ ಅಗತ್ಯವಿಲ್ಲ. ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ. ಆತಂಕದ ಪರಿಸ್ಥಿತಿ ಇಲ್ಲ, ಮಕ್ಕಳು ಹಾಗೂ ಹಿರಿಯರು ಹೆಚ್ಚು ಕಾಳಜಿ ವಹಿಸಿ ಎಂದು ಸೂಚಿಸಲಾಗಿದೆ.

ಶೀತ, ಜ್ವರ, ಕೆಮ್ಮು, ಉಸಿರಾಟ ತೊಂದರೆಯಂತಹ ಸಮಸ್ಯೆಗಳು ಕಾಣಿಸಿಕೊಂಡ ಕೂಡಲೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ಚಳಿಗಾಲದಲ್ಲಿ ಈ ರೀತಿ ವೈರಸ್‌ ಕಾಣಿಸುವುದು ಸಾಮಾನ್ಯ. ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ಆರೋಗ್ಯ ಇಲಾಖೆ ಹೇಳಿದೆ.

Comments are closed.