Tumkur: ದೂರು ನೀಡಲು ಬಂದ ಮಹಿಳೆಯ ಜೊತೆಯೇ Dysp ರಾಸಲೀಲೆ; ವೀಡಿಯೋ ವೈರಲ್‌

ತುಮಕೂರು: ಡಿವೈಎಸ್‌ಪಿ ಒಬ್ಬರು ದೂರು ನೀಡಲೆಂದು ಬಂದ ಮಹಿಳೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.

ಪಾವಗಡ ಮೂಲದ ಮಹಿಳೆ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ದೂರು ನೀಡಲು ಬಂದಿದ್ದು, ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ರಾಸಲೀಲೆ ಮಾಡಿರುವ ವೀಡಿಯೋ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಡಿವೈಎಸ್‌ಪಿ ರಾಮಚಂದ್ರಪ್ಪ ತಲೆಮರೆಸಿಕೊಂಡಿರುವ ಕುರಿತು ವರದಿಯಾಗಿದೆ.

ಮಹಿಳೆ ದೂರು ನೀಡಿದ್ದ ಕಾರಣ ವಿಚಾರಿಸುವ ಸಲುವಾಗಿ ಮಹಿಳೆಯನ್ನು ಡಿವೈಎಸ್‌ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಆತ ಮಹಿಳೆಯನ್ನು ಪುಸಲಾಯಿಸಿದ್ದು, ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ಮಾಡಿದ್ದಾನೆ.

ಡಿವೈಎಸ್‌ಪಿ ರಾಮಚಂದ್ರಪ್ಪ ಬಲವಂತಾಗಿ ಮಹಿಳೆ ಜೊತೆ ನಡೆದುಕೊಳ್ಳುತ್ತಿರುವುದನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

Comments are closed.