Parliament : ಸಂಸತ್ ನಲ್ಲಿ ಬಿದ್ದು ಬಿಜೆಪಿ ಸಂಸದನಿಗೆ ಗಾಯ – ರಾಹುಲ್ ಗಾಂಧಿ ತಳ್ಳಿದ್ದೆಂದು ಆರೋಪ !!

Parliament : ಲೋಕಸಭೆಯಲ್ಲಿ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿರುವ ವೇಳೆ ಬಿಜೆಪಿ ಸಂಸದರು(BJP MP)ಒಬ್ಬರು ಬಿದ್ದು ಗಾಯಗೊಂಡಿದ್ದಾರೆ. ಆದರೆ ಇದೀಗ ಅಚ್ಚರಿಯೆಂಬಂತೆ ಇವರನ್ನು ರಾಹುಲ್ ಗಾಂಧಿ(Rahul Gandhi ) ಯವರೇ ತಳ್ಳಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿದೆ.

ಹೌದು, ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆಯ ಮಧ್ಯೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಬಿದ್ದು ಗಾಯಗೊಂಡಿದ್ದಾರೆ. ಇವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಳ್ಳಿದರು ಎಂದು ಆರೋಪಿಸಲಾಗಿದೆ.

ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ಸಂಸದರೊಬ್ಬರನ್ನು ತಳ್ಳಿದರು, ನಂತರ ಅವರು ನನ್ನ ಮೇಲೆ ಬಿದ್ದರು” ಎಂದು ಸಾರಂಗಿ ಹೇಳಿದರು. ಈ ಘಟನೆ ನಾನು ಬೀಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.