Vishakapatnam: ನಿದ್ರೆಯಲ್ಲಿದ್ದಾಗ ತನ್ನ ಹಲ್ಲಿನ ಸೆಟ್ಟನ್ನೇ ನುಂಗಿದ ವ್ಯಕ್ತಿ; ಮುಂದೇನಾಯ್ತು?

Vishakapatnam: ವಿಲಕ್ಷಣ ಘಟನೆಯೊಂದರಲ್ಲಿ, ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನಿದ್ರೆಯಲ್ಲಿ ತನ್ನ ಹಲ್ಲು ಸೆಟ್ಟನ್ನು ನುಂಗಿದ ಘಟನೆಯೊಂದು ನಡೆದಿದೆ. ಪರಿಣಾಮವಾಗಿ ಅವು ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದು, ಅನಂತರ ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಯ ವೈದ್ಯರು ಇದೀಗ ಡೆಂಟಲ್ ಸೆಟ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

52 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಹಲ್ಲು ಸೆಟ್‌ ಬಳಕೆ ಮಾಡುತ್ತಿದ್ದು, ಕಾಲಾನಂತರದಲ್ಲಿ ಸೆಟ್ ಸಡಿಲಗೊಂಡಿದೆ. ಆದರೆ ವ್ಯಕ್ತಿ ಮಲಗಿದ್ದಾಗ ಅಜಾಗರೂಕತೆಯಿಂದ ನುಂಗಿದ್ದು, ಹಲ್ಲಿನ ಸೆಟ್ ಬಲ ಶ್ವಾಸಕೋಶದ ಮಧ್ಯದ ವಿಭಾಗದಲ್ಲಿ ಸಿಕ್ಕಿಕೊಂಡಿದೆ.

ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ಗಳನ್ನು ಮಾಡಿದಾಗ, ಶ್ವಾಸಕೋಶದಲ್ಲಿ ದಂತ ಸೆಟ್ ಇರುವುದನ್ನು ವೈದ್ಯರು ಖಚಿತಪಡಿಸಿ, ಅದನ್ನು ತೆಗೆದುಹಾಕಲು ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಕಠಿಣವಾದ ಬ್ರಾಂಕೋಸ್ಕೋಪಿ ವಿಧಾನದ ಮೂಲಕ ತೆಗೆದು ಹಾಕಿದ್ದಾರೆ.

“ಹಲ್ಲಿನ ಸೆಟ್‌ನ ಎರಡೂ ಬದಿಗಳಲ್ಲಿ ತಂತಿ ಇದ್ದಿದ್ದು, ತೆಗೆದುಹಾಕುವ ಸಮಯದಲ್ಲಿ ಶ್ವಾಸಕೋಶಗಳಿಗೆ ಗಾಯವಾಗುವ ಗಮನಾರ್ಹ ಅಪಾಯವಿತ್ತು. ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತಿತ್ತು. ಅದೃಷ್ಟವಶಾತ್, ಅಪರೇಷನ್‌ ಯಶಸ್ವಿಯಾಗಿದೆ, ಬಾಯಿಯ
ಬಳಿ ಕೇವಲ ಸಣ್ಣ ಗಾಯಗಳು ಆಗಿದ್ದು, ತಕ್ಷಣವೇ ಚಿಕಿತ್ಸೆ ನೀಡಲಾಗಿದೆ, ”ಎಂದು ಡಾ ಭರತ್ ಹೇಳಿದ್ದಾರೆ.

Leave A Reply

Your email address will not be published.