Chhatarpur: ಮೊದಲ ರಾತ್ರಿ ಹಾಲಿನಲ್ಲಿ ಪತಿಗೆ ಮತ್ತು ಬರುವ ಔಷಧಿ ಹಾಕಿ, ಲಕ್ಷಾಂತರ ದುಡ್ಡು, ಚಿನ್ನಾಭರಣ ದೋಚಿದ ವಧು

Chhatarpur: ನವವಿವಾಹಿತ ವಧು ಒಬ್ಬಳು ವರನಿಗೆ ಹಾಲಿನಲ್ಲಿ ಮತ್ತು ಬರುವ ಔಷಧ ನೀಡಿ ಪ್ರಜ್ಞಾಹೀನಗೊಳಿಸಿ, ಮದುವೆಯ ಮೊದಲ ರಾತ್ರಿಯಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿದ್ದಾಳೆ. ಛತ್ತರ್‌ಪುರ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಕುಲವಾರ ಗ್ರಾಮದ ರಾಜ್‌ದೀಪ್ ರಾವತ್ ವಿವಾಹವು ಚರಖಾರಿ ನಿವಾಸಿ ಖುಷಿ ತಿವಾರಿ ಅವರೊಂದಿಗೆ ಡಿಸೆಂಬರ್ 12 ರಂದು ಧನುಷ್ಧಾರಿ ದೇವಸ್ಥಾನದಲ್ಲಿ ಪೂರ್ಣ ಸಂಪ್ರದಾಯಗಳೊಂದಿಗೆ ನೆರವೇರಿತು. ಮದುವೆಯ ನಂತರ ಸಂತಸದ ವಾತಾವರಣ ಮನೆಯಲ್ಲಿತ್ತು ಆದರೆ ಮದುವೆಯ ರಾತ್ರಿ ಹಾಲಿನಲ್ಲಿ ಮತ್ತಿನ ಔಷಧ ಬೆರೆಸಿ ಮದುಮಗಳು ವರನಿಗೆ ಕುಡಿಸಿದ್ದಾಳೆ.
ಮದುವೆ ರಾತ್ರಿ ಹಾಸಿಗೆ ಮೇಲೆ ಹಾಲು ಕುಡಿದು ವರ ರಾಜದೀಪ್ ಪ್ರಜ್ಞೆ ತಪ್ಪಿದ್ದು, ಇದೇ ವೇಳೆ ವಧು ಖುಷಿ ಮನೆಯಲ್ಲಿಟ್ಟಿದ್ದ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಸಂಗ್ರಹಿಸಿ ರಾತ್ರೋರಾತ್ರಿ ಓಡಿ ಹೋಗಿದ್ದಾಳೆ. ಬೆಳಿಗ್ಗೆ ವರನ ತಾಯಿ ಕೋಣೆಗೆ ಬಂದಾಗ, ತನ್ನ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ವಧುವಿನ ಸುಳಿವು ಇರಲಿಲ್ಲ.
ರಾಜದೀಪ್ ಅವರ ತಂದೆ ಅಶೋಕ್ ರಾವತ್ ಮಧ್ಯವರ್ತಿ ಪಪ್ಪು ರಜಪೂತ್ ಅವರಿಗೆ ಮದುವೆಗಾಗಿ 1.5 ಲಕ್ಷ ರೂ.ನೀಡಿದ್ದರು. ಖುಷಿ ಜೊತೆಗೆ ಆಕೆಯ ಸಹೋದರ ಛೋಟು ತಿವಾರಿ, ಸ್ನೇಹಿತ ವಿನಯ್ ತಿವಾರಿ ಮತ್ತು ಮಧ್ಯವರ್ತಿ ಪಪ್ಪು ರಜಪೂತ್ ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯ ನಂತರ ಎಲ್ಲರೂ ಖುಷಿಯನ್ನು ಬಿಟ್ಟು ತಮ್ಮ ತಮ್ಮ ಊರಿಗೆ ಹೋಗಿದ್ದಾರೆ.
ಬೆಳಿಗ್ಗೆ, ಪ್ರಜ್ಞೆ ತಪ್ಪಿದ ವರನನ್ನು ನೌಗಾಂವ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಛತ್ತರ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ನೆರವಿನಿಂದ ರಾಜ್‌ದೀಪ್ ಚೇತರಿಸಿಕೊಳ್ಳುತ್ತಿದ್ದಾನೆ.
ವರನ ತಂದೆ ಅಶೋಕ್ ರಾವತ್ ಅವರು ಖುಷಿ ತಿವಾರಿ, ಆಕೆಯ ಸಹೋದರ ಛೋಟು ತಿವಾರಿ, ಸ್ನೇಹಿತ ವಿನಯ್ ತಿವಾರಿ ಮತ್ತು ಮಧ್ಯವರ್ತಿ ಪಪ್ಪು ರಜಪೂತ್ ವಿರುದ್ಧ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.