Nostradamus prediction: 2025 ಕ್ಕೆ ಭಾರತದಿಂದ ಮತ್ತೊಬ್ಬ ವಿಶ್ವನಾಯಕನ ಉದಯ – ಫ್ರೆಂಚ್‌ ಜ್ಯೋತಿಷಿ ʼನಾಸ್ಟ್ರಾಡಾಮಸ್ʼ ಅವರಿಂದ ರೋಚಕ ಭವಿಷ್ಯ!! ಯಾರದು?

Nostradamus prediction: 16 ನೇ ಶತಮಾನದ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್( Nostradamus prediction)ಅವರು 2025 ರಲ್ಲಿ ಭಾರತದಿಂದ ವಿಶ್ವ ನಾಯಕನ ಉದಯವಾಗುತ್ತದೆ ಇಂದು ಸ್ಪೋಟಕ ಭವಿಷ್ಯ ನೋಡಿದಿರುವುದು ಇದೀಗ ಬಯಲಾಗಿದೆ.

ಹೌದು, 16 ನೇ ಶತಮಾನದ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅವರು ಈ ಹಿಂದೆ ಅನೇಕ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದು ಅವುಗಳಲ್ಲಿ ಹಲವು ನಿಜವಾಗಿದ್ದವು. ಹಿಟ್ಲರ್ ನ ಉದಯ, 9/11 ದಾಳಿ ಮತ್ತು ಕೋವಿಡ್ -19 ರ ಕುರಿತು ಮೊದಲೇ ಅವರು ಭವಿಷ್ಯ ನುಡಿದಿದ್ದು ಅದೆಲ್ಲವೂ ನಿಜವಾಗಿತ್ತು. ಹೀಗಾಗಿ ಜನರು ಅವರನ್ನು ನಂಬುತ್ತಾರಲ್ಲದೇ ಅವರ ಮುಂದಿನ ಭವಿಷ್ಯವಾಣಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲಗಳಾಗಿರುತ್ತಾರೆ. ಇದೀಗ ಅವರೇ ಭಾರತದಿಂದ ಮತ್ತೊಬ್ಬ ವಿಶ್ವ ನಾಯಕನ ಜನನವಾಗುತ್ತದೆ ಎಂದು ಹೇಳಿರುವುದು ತಿಳಿದುಬಂದಿದೆ.

ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಪ್ರಕಾರ ಭಾರತದಲ್ಲಿ ಒಬ್ಬ ಹೊಸ ವಿಶ್ವ ನಾಯಕನ ಉದಯವಾಗುತ್ತದೆ ಎಂದು ಹೇಳಲಾಗಿದೆ. ಹೆಸರು ಇನ್ನೂ ನಿಗೂಢವಾಗಿದ್ದರೂ, ಗೊಂದಲದ ಸಮಯದಲ್ಲಿ ಜಾಗತಿಕ ಶಾಂತಿ ಮತ್ತು ನಾಯಕತ್ವದಲ್ಲಿ ಈ ವ್ಯಕ್ತಿಯ ಪ್ರಮುಖ ಪಾತ್ರ ಮತ್ತು ಸಂಭಾವ್ಯ ಮೂರನೇ ವಿಶ್ವಯುದ್ಧವನ್ನು ಅವರ ಸಹಾಯದಿಂದ ತಪ್ಪಿಸಬಹುದು ಎಂದು ಊಹಿಸಲಾಗಿದೆ.

ನಾಸ್ಟ್ರಡಾಮಸ್ ಈ ನಾಯಕನನ್ನು ಸಮುದ್ರಗಳಿಂದ ಸುತ್ತುವರಿದ ಪ್ರದೇಶದಲ್ಲಿ ಜನಿಸಿದವನು ಎಂದು ವಿವರಿಸಿದ್ದು, ಇದು ಭಾರತದ ಭೌಗೋಳಿಕತೆಯ ಬಗ್ಗೆ ಸುಳಿವು ನೀಡುತ್ತದೆ. ಈ ವ್ಯಕ್ತಿಯು ನಿರ್ಣಾಯಕ ಸಮಯದಲ್ಲಿ ಹೊರಹೊಮ್ಮುತ್ತಾರೆ. ಜಗತ್ತು ಸವಾಲುಗಳನ್ನು ಎದುರಿಸಿದಾಗ ಭರವಸೆ ಮತ್ತು ನಿರ್ದೇಶನವನ್ನು ನೀಡುತ್ತಾರೆ ಎನ್ನಲಾಗಿದೆ. ಅಲ್ಲದೆ ಬುದ್ಧಿವಂತಿಕೆ ಮತ್ತು ನಾಯಕತ್ವದೊಂದಿಗೆ, ಅವರು ಜಾಗತಿಕ ಸವಾಲುಗಳ ಸಮಯದಲ್ಲಿ ಶಾಂತಿಯನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.