Bangalore: ಕೌಟುಂಬಿಕ ಕಲಹ; ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

Bangalore: ಕೌಟುಂಬಿಕ ಕಲಹದಿಂದ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ನಂತರ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ತಾಯಿ ಕುಸುಮಾ (35), ಮಕ್ಕಳಾದ ಶ್ರೀಯಾನ್ (6), ಚಾರ್ವಿ (1.5) ಎಂದು ಗುರುತಿಸಲಾಗಿದೆ.
ಕೊಡಿಗೇಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ದಂಪತಿಗಳಾದ ಸುರೇಶ್ ಮತ್ತು ಕುಸುಮಾ ವಾಸವಿದ್ದರು. ಕೌಟುಂಬಿಕ ಕಲಹ ಉಂಟಾದ ಕಾರಣ ಮೊದಲಿಗೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ, ನಂತರ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್‌ನೋಟ್ ದೊರಕಿದ್ದು, ನಮ್ಮ ಸಾವಿಗೆ ನಾವೇ ಕಾರಣವೆಂದು ಬರೆಯಲಾಗಿದೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.