Dinesh gundu rao: ‘ಬಾಣಂತಿಯರ ಸಾವು ಪ್ರತಿ ವರ್ಷ ಕಾಮನ್ ಬಿಡ್ರಿ’ – ಆರೋಗ್ಯ ಸಚಿವರಿಂದ ವಿವಾದಾತ್ಮಕ ಸ್ಟೇಟ್ಮೆಂಟ್

Dinesh Gundu Rao: ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದೇ ಮಾದರಿಯಲ್ಲಿ ಬೆಳಗಾವಿಯಲ್ಲೂ ನಡೆದಿದೆ ಎನ್ನಲಾಗಿದ್ದು, ಆದ್ರೆ ಬಾಣಂತಿಯರ ಸರಣಿ ಸಾವಿನ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

 

ಹೌದು, ಬೆಳಗಾವಿ ಅಧಿವೇಶನಕ್ಕೆ ಬಂದಿರುವ ಸಚಿವ ದಿನೇಶ್‌ ಗುಂಡೂರಾವ್‌ ಅವರು ಬಾಣಂತಿಯರ ಸಾವು ಪ್ರಕರಣಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಆಸ್ಪತ್ರೆಗಳಲ್ಲಿ ಪ್ರತಿ ವರ್ಷ ಬಾಣಂತಿಯರ ಸಾವಾಗುತ್ತವೆ. ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಇದ್ದೇ ಇರುತ್ತೆ. ಅದನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಬಾಣಂತಿಯರ ಸಾವಿಗೆ ವೈದ್ಯಕೀಯ ಕಾರಣ ಎನ್ನಲು ಸಾಧ್ಯವಿಲ್ಲ. ಈ ಸಾವುಗಳ ಹಿಂದಿನ ಸತ್ಯಾಂಶಗಳನ್ನು ನಾವು ಚರ್ಚಿಸುತ್ತೇವೆ. ಆದರೆ ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಈ ಸಾವು ಪ್ರಕರಣಗಳಿಗೆ ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ. ವ್ಯವಸ್ಥೆಗಳನ್ನ ಸರಿಪಡಿಸುತ್ತಿದ್ದೇವೆ. ಸರ್ಕಾರ ಮೆಡಿಕಲ್‌ ಮಾಫಿಯಾಗೆ ಸಿಲುಕಿದೆಯಾ ಎಂಬ ವಿಚಾರವಾಗಿ, ಆರೋಗ್ಯ ಇಲಾಖೆ ಬಗ್ಗೆಯೂ ಮಾತನಾಡುತ್ತೇವೆ. ಬಳ್ಳಾರಿ ಆಸ್ಪತ್ರೆಯ ಕೇಸ್‌ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ದಿನೇಶ್‌ ಹೇಳಿದ್ದಾರೆ.

Leave A Reply

Your email address will not be published.