Bike: ಅಪ್ಪ ಬೈಕ್ ಕೊಡಿಸಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಯುವಕ!

Bike: ಯುವಕನೊಬ್ಬ ಹಲವು ದಿನಗಳಿಂದ ಬೈಕ್ ಕೊಡಿಸುವಂತೆ ತನ್ನ ತಂದೆಯ ಬಳಿ ಕೇಳಿದ್ದ. ಆದ್ರೆ ಅಪ್ಪ ಬೈಕ್ (Bike) ಕೊಡಿಸಲಿಲ್ಲ ಎಂದು ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

 

ಆತ್ಮಹತ್ಯೆಗೆ ಶರಣಾದ ಯುವಕನನ್ನು ವಿಕಾಸ್.ಆರ್ (20) ಎಂದು ಗುರುತಿಸಲಾಗಿದೆ. ಹಣದ (Money) ಅಡಚಣೆಯಿಂದ ಪೋಷಕರಿಗೆ ಬೈಕ್ ಕೊಡಿಸಲು ಆಗಿರಲಿಲ್ಲ. ಆದರೆ ಇದೀಗ ಮಗ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಹಲವು ದಿನಗಳಿಂದ ಬೈಕ್ ಕೊಡಿಸದ ವಿಚಾರಕ್ಕೆ ಯುವಕ ಮಾನಸಿಕವಾಗಿ ಕುಗ್ಗಿ ತಂದೆ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದ. ಮನೆಯವರ ಜೊತೆ ಮಾತನಾಡುವುದು ಮತ್ತು ಸರಿಯಾಗಿ ಊಟ ಮಾಡುವುದನ್ನು ಸಹ ಬಿಟ್ಟಿದ್ದ. ಮನೆ ತೊರೆದು ಒಂದು ವಾರದಿಂದ ಕುಂಕುವ ಗ್ರಾಮದ ಸಂಬಂಧಿಕರ ಮನೆಯಲಿದ್ದ. ಕೊನೆಗೆ ಅಲ್ಲೇ ಆತ ವಿಷ ಸೇವಿಸಲು ನಿರ್ಧಾರ ಮಾಡಿದ್ದಾನೆ.

ತಕ್ಷಣ ಗ್ರಾಮಸ್ಥರು ಆತನನ್ನು ನ್ಯಾಮತಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಮತ್ತು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿ ಆತನ ಉಸಿರು ನಿಂತಿದೆ ಎಂದು ವೈದ್ಯರು ತಿಳಿಸಿದ್ದಾರೆ.

Leave A Reply

Your email address will not be published.