Aryan to Anaya: ಖ್ಯಾತ ಕ್ರಿಕೆಟರ್ ಮಗ ಈಗ ಹೆಣ್ಣಾಗಿ ಬದಲಾವಣೆ; ಆರ್ಯನ್ ಈಗ ಅನಾಯಾ
Aryan to Anaya: ಭಾರತದ ಮಾಜಿ ಕ್ರಿಕೆಟಿಗ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಪುತ್ರನ ಬಗ್ಗೆ ಇಂಟರೆಸ್ಟಿಂಗ್ ವಿಷಯವೊಂದು ಬೆಳಕಿಗೆ ಬಂದಿದೆ. ಅರ್ಯನ್ ಬಂಗಾರ್ ಇದೀಗ ಲಿಂಗ ಪರಿವರ್ತನೆ ಮಾಡಿ ಅನಾಯ ಬಂಗಾರ್ ಆಗಿದ್ದಾನೆ. ಮಾಜಿ ಕ್ರಿಕೆಟಿಗನ ಮಗ ಈಗ ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾನೆ ಮತ್ತು ಆರ್ಯನ್ ತನ್ನ ಹೆಸರನ್ನು ಅನಯಾ ಎಂದು ಬದಲಾಯಿಸಿಕೊಂಡಿದ್ದಾನೆ.
ಆರ್ಯನ್ ಈಗ ಹುಡುಗಿಯಾಗಿ, ಅಂದರೆ ಆರ್ಯನ್‌ನಿಂದ ಅನಯಾಗೆ ಬದಲಾಗುತ್ತಿರುವ ಖುಷಿಯಲ್ಲಿದ್ದಾರೆ. ಆರ್ಯನ್ ಅನಾಯಾ ಆಗಿರುವ ವೀಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ 10 ತಿಂಗಳಲ್ಲಿ ತನ್ನ ಪ್ರಯಾಣವು ವಿಭಿನ್ನವಾಗಿತ್ತು ಮತ್ತು ಅದರ ಕಾರ್ಯವಿಧಾನವನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ.
ನನಗೆ ಅನಯಾ ಆಗಿದ್ದು ಖುಷಿ ತಂದಿದೆ. ಹೊಸ ಹೆಸರು, ಹೊಸ ಐಡೆಂಟಿಟಿ ಸಿಕ್ಕಿದೆ ಎನ್ನುತ್ತಾರೆ ಆರ್ಯನ್. ಆರ್ಯನ್ ಪ್ರಸ್ತುತ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಕಂಟ್ರಿ ಕ್ಲಬ್ ಕ್ರಿಕೆಟ್ ಟೀಮ್‌ಗೆ ಆಡುತ್ತಿದ್ದರು. ಟ್ರಾನ್ಸ್ ಮಹಿಳೆಯರು ದೇಶೀಯ ಕ್ರಿಕೆಟ್ ಆಡುವುದನ್ನು ನಿಷೇಧ ಮಾಡುವ ನಿರ್ಧಾರವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 2025 ತೆಗೆದುಕೊಂಡಿದೆ. ಪುರುಷರು ಪ್ರೌಢಾವಸ್ಥೆಯನ್ನು ದಾಟಿದ ನಂತರ ಮಹಿಳೆಯಾಗಿ ಬದಲಾದರೆ ಅಗ್ರ ಎರಡು ಹಂತಗಳಲ್ಲಿ ಕಾಣಿಸಿಕೊಳಲ್ಲು ಅರ್ಹರಿರುವುದಿಲ್ಲ ಎಂದು ಮಂಡಳಿ ಹೇಳಿದೆ.
View this post on Instagram
“ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ನನ್ನ ಜೀವನದ ಒಂದು ಭಾಗ. ಬೆಳೆಯುತ್ತಿರುವಾಗ, ನನ್ನ ತಂದೆ ದೇಶ ಮತ್ತು ತರಬೇತುದಾರನನ್ನು ಪ್ರತಿನಿಧಿಸುವುದನ್ನು ನಾನು ನೋಡಿದ್ದೇನೆ. ನಾನು ಅವರ ಹೆಜ್ಜೆಗಳನ್ನು ಅನುಸರಿಸಲು ಕನಸು ಕಾಣಲು ಪ್ರಾರಂಭಿಸಿದೆ. ಅವರ ಉತ್ಸಾಹ, ಶಿಸ್ತು ಮತ್ತು ಸಮರ್ಪಣೆ ನನಗೆ ತುಂಬಾ ಸ್ಪೂರ್ತಿದಾಯಕವಾಗಿದೆ. ಕ್ರಿಕೆಟ್ ನನ್ನ ಪ್ರೀತಿ, ನನ್ನ ಮಹತ್ವಾಕಾಂಕ್ಷೆ ಮತ್ತು ನನ್ನ ಭವಿಷ್ಯವಾಯಿತು. ನನ್ನ ಕೌಶಲ್ಯಗಳನ್ನು ಗೌರವಿಸಲು ನಾನು ನನ್ನ ಇಡೀ ಜೀವನವನ್ನು ಕಳೆದಿದ್ದೇನೆ. ಮುಂದೊಂದು ದಿನ ನನಗೂ ಅವರಂತೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತೆ. ನನ್ನ ಉತ್ಸಾಹ ಮತ್ತು ನನ್ನ ಪ್ರೀತಿಯಾಗಿರುವ ಕ್ರೀಡೆಯನ್ನು ನಾನು ತೊರೆಯಬೇಕಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ ಇಲ್ಲಿ ನಾನು ನೋವಿನ ವಾಸ್ತವವನ್ನು ಎದುರಿಸುತ್ತಿದ್ದೇನೆ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಎಚ್‌ಆರ್‌ಟಿ)ಗೆ ಒಳಗಾಗುವ ಮೂಲಕ ನಾನು ಟ್ರಾನ್ಸ್ ಮಹಿಳೆಯಾದ ನಂತರ ನನ್ನ ದೇಹವು ಬಹಳಷ್ಟು ಬದಲಾಗಿದೆ. ನಾನು ಒಮ್ಮೆ ಅವಲಂಬಿಸಿದ್ದ ನನ್ನ ಸ್ನಾಯುವಿನ ದ್ರವ್ಯರಾಶಿ, ಶಕ್ತಿ, ಸ್ನಾಯುವಿನ ಸ್ಮರಣೆ ಮತ್ತು ಅಥ್ಲೆಟಿಕ್ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತಿದ್ದೇನೆ. ಇಷ್ಟು ದಿನ ಪ್ರೀತಿಸಿದ ಆಟ ನನ್ನಿಂದ ದೂರವಾಗುತ್ತಿದೆ. ಕ್ರಿಕೆಟ್‌ನಿಂದ ನಾನು ದೂರ ಸರಿಯುತ್ತಿರುವ ಕುರಿತು ಅನಯಾ ಬರೆದುಕೊಂಡಿದ್ದಾರೆ.
ಅನಯಾ (ಆರ್ಯನ್) ತಂದೆ ಸಂಜಯ್ ಬಂಗಾರ್ ಅವರು ಕೋಚಿಂಗ್ ಹುದ್ದೆಯಲ್ಲಿ ದೀರ್ಘಕಾಲದವರೆಗೆ ಟೀಮ್ ಇಂಡಿಯಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಂಜಯ್ 2014 ರಿಂದ 2019 ರವರೆಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದರು. ಅವರು ಟೀಮ್ ಇಂಡಿಯಾ ಪರ 12 ಟೆಸ್ಟ್ ಮತ್ತು 15 ODI ಪಂದ್ಯಗಳನ್ನು ಆಡಿದ್ದಾರೆ.
ಬಂಗಾರ್ ಅವರು ಐಪಿಎಲ್ 2022 ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು. ಸಂಜಯ್ ಬಂಗಾರ್ ನಂತರ ಪಂಜಾಬ್ ಕಿಂಗ್ಸ್ ಜೊತೆಗೆ IPL 2023 ಋತುವಿಗಾಗಿ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
ಹಾರ್ಮೋನ್ ರೂಪಾಂತರ ಎಂದರೆ ದೇಹದಲ್ಲಿನ ಹಾರ್ಮೋನುಗಳ ಪ್ರಮಾಣದಲ್ಲಿ ಬದಲಾವಣೆ. ಹಾರ್ಮೋನುಗಳು ದೇಹದ ರಾಸಾಯನಿಕ ಸಂದೇಶವಾಹಕಗಳಾಗಿವೆ. ಈ ಗ್ರಂಥಿಗಳು ಅಂತಃಸ್ರಾವಕ ವ್ಯವಸ್ಥೆಯಲ್ಲಿ ರೂಪುಗೊಳ್ಳುತ್ತವೆ ಮತ್ತು ರಕ್ತದ ಮೂಲಕ ದೇಹದ ಭಾಗಗಳನ್ನು ತಲುಪುತ್ತವೆ. ಹಾರ್ಮೋನುಗಳು ಅಂಗಗಳಿಗೆ ಏನು ಮಾಡಬೇಕು ಮತ್ತು ಯಾವಾಗ ಮಾಡಬೇಕು ಎಂಬ ಸಂದೇಶಗಳನ್ನು ಕಳುಹಿಸುತ್ತವೆ.
kxldsd