Thripura: ನವರಾತ್ರಿಗೆ ದೇಣಿಗೆ ಕೇಳಿದ್ದಕ್ಕೆ ಮುಸ್ಲಿಮರಿಂದ ಹಿಂದೂ ಅಂಗಡಿ-ಮನೆ ಮೇಲೆ ದಾಳಿ, ಓರ್ವ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ !!
Thripura: ನವರಾತ್ರಿ ಪ್ರಯುಕ್ತ ಓರ್ವ ಮುಸಲ್ಮಾನರಿಗೆ ದೇಣಿಗೆ ಕೇಳಿದ್ದಕ್ಕೆ ಅಲ್ಲಿಯ ಮುಸಲ್ಮಾನರೆಲ್ಲರೂ ಸೇರಿ ಹಿಂದುಗಳ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿರುವಂತಹ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹೌದು, ಉತ್ತರ ತ್ರಿಪುರ(Thripura) ಜಿಲ್ಲೆಯಲ್ಲಿನ ಕದಮತಾಲಾದಲ್ಲಿನ ಸಾರ್ವಜನಿಕ ದುರ್ಗಾ ಪೂಜಾ ಆಯೋಜಕರು ನವರಾತ್ರಿ ಪ್ರಯುಕ್ತ ಅಕ್ಟೋಬರ್ ೬ ರಂದು ಓರ್ವ ಮುಸಲ್ಮಾನರಿಗೆ ದೇಣಿಗೆ ಕೇಳಿದ್ದಕ್ಕೆ ಅಲ್ಲಿಯ ಮುಸಲ್ಮಾನರೆಲ್ಲರೂ ಸೇರಿ ಹಿಂದುಗಳ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವಿಗಿಡಾಗಿದ್ದಾನೆ ಮತ್ತು ೧೭ ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸರಕಾರವು ನಿಷೇದಾಜ್ಞೆ ಜಾರಿಗೊಳಿಸಿದೆ.
ಅಷ್ಟಕ್ಕೂ ನಡೆದದ್ದೇನು?
ಕದಮತಾಲಾದಲ್ಲಿನ ಒಂದು ಸಾರ್ವಜನಿಕ ದುರ್ಗಾ ಪೂಜೆಯ ಆಯೋಜಕರು ಅಸ್ಸಾಮಿಗೆ ಹೋಗುತ್ತಿದ್ದ ಓರ್ವ ಮುಸಲ್ಮಾನ ಚಾಲಕನಿಗೆ ದೇಣಗಿ ಕೇಳಿದ್ದರು. ಆಗ ಅವರ ನಡುವೆ ವಾಗ್ವಾದ ನಡೆಯಿತು. ಚಾಲಕನ ಸಮರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಅಲ್ಲಿ ಸೇರಿದರು ಮತ್ತು ಅವರು ದುರ್ಗಾ ಪೂಜೆಯ ಆಯೋಜಕರ ಮನೆಯ ಮೇಲೆ ಮತ್ತು ಮನೆಯಲ್ಲಿನ ಸದಸ್ಯರ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಹಿಂದುಗಳ ಎರಡು ಮನೆಗಳು ಮತ್ತು ಒಂದು ಬ್ಯೂಟಿ ಪಾರ್ಲರ್ ಅನ್ನು ಕೂಡ ಧ್ವಂಸಗೊಳಿಸಲಾಯಿತು. ಅಲ್ಲದೆ ಈ ದಾಳಿಯಲ್ಲಿ ಓರ್ವ ವ್ಯಕ್ತಿಯ ಬರ್ಬರ್ ಹತ್ಯೆ ನಡೆಸಲಾಗಿದೆ, ಹಾಗೂ ೧೭ ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.