Pramod Muthalik: ಮೂರ್ತಿ ಭಗ್ನ ಮಾಡಿದವರ ಕೈ ಕತ್ತರಿಸಬೇಕು: ಕ್ರಿಶ್ಚಿಯನ್ ಶಾಲೆಗಳಲ್ಲಿ ದಸರಾ ರಜೆ ಉಲ್ಲಂಘನೆ – ಪ್ರಮೋದ್ ಮುತಾಲಿಕ್ ಆಕ್ರೋಶ

Pramod Muthalik: ಹುಬ್ಬಳ್ಳಿ(Hubli) ದತ್ತ ಮೂರ್ತಿ ಭಗ್ನ ವಿಚಾರವಾಗಿ ಧಾರವಾಡದಲ್ಲಿ ಶ್ರೀರಾಮಸೇನೆ(Shri Ramasene) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್(Pramod mutalik) ಆಕ್ರೋಶ ವ್ಯಕ್ತಪಡಿಸಿ, ಇದು ರಾಕ್ಷಸಿ ಸ್ವರೂಪ ಕೃತ್ಯ. ಯಾರೇ ಮಾಡಿದರೂ ಅವರಿಗೆ ದತ್ತಾತ್ರೇಯ ಶಾಪ ಕೊಡ್ತಾರೆ. ಆ ಕೃತ್ಯ ಮಾಡಿದವರು ಸರ್ವನಾಶ ಆಗುತ್ತಾರೆ ಎಂದರು.

ತಪ್ಪಿತಸ್ಥರ ಬಂಧನ ಆಗಬೇಕು. ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಹು-ಧಾ ಪೊಲೀಸ್ ಆಯುಕ್ತರನ್ನು ಆಗ್ರಹಿಸುತ್ತೇನೆ ಎಂದರು. ಇಲ್ಲದೇ ಹೋದಲ್ಲಿ ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಮೂರ್ತಿ ಭಗ್ನ ಮಾಡಿದವರ ಕೈ ಕತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಿಂದ ದಸರಾ ರಜೆ ಉಲ್ಲಂಘನೆ ಮಾಡಲಾಗಿದೆ ಎಂದು ಮುತಾಲಿಕ್ ಆರೋಪ ಮಾಡಿದ್ದಾರೆ. ದಸರಾ ರಜೆ ಕರ್ನಾಟಕದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಆದರೆ ಕ್ರಿಶ್ಚಿಯನ್ ಶಾಲೆಗಳಲ್ಲಿ ದಸರಾ ರಜೆ ಉಲ್ಲಂಘನೆ ಆಗುತ್ತಿವೆ. ಕ್ರಿಶ್ಚಿಯನ್ ಶಾಲೆಗಳು ನಡೆಯುತ್ತಿವೆ. ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದರು.
ಹಿಂದೂ ಸಂಸ್ಕೃತಿ ಅಪಮಾನ, ಅವಮಾನ, ಅವಹೇಳನ ಮಾಡುವ ಪ್ರವೃತ್ತಿ ಇದು. ರಾಷ್ಟ್ರೀಯತೆ ಮತ್ತು ನಮ್ಮ ಸಂಪ್ರದಾಯದ ಕಡೆಗಣಿಸುತ್ತ ಬಂದಿದ್ದಾರೆ. ಅಂಬೇಡ್ಕರ್, ಗಾಂಧೀಜಿ ಫೋಟೋ ಸಹ ಇಡುವುದಿಲ್ಲ. ರಾಷ್ಟ್ರೀಯತೆ ಹಿನ್ನೆಲೆಯಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಬಳೆ, ಕುಂಕುಮ ಧರಿಸುವಂತಿಲ್ಲ, ಹೂವು ಮೂಡಿಯುವಂತಿಲ್ಲ. ಕಾಲ್ಗೆಜ್ಜೆ ಹಾಕುವಂತಿಲ್ಲ ಅನ್ನುತ್ತಾರೆ. ಅವಮಾನಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ನಾಡಹಬ್ಬ ದಸರಾ. ಮನೆಯಲ್ಲಿ ಪೂಜೆ ಮಾಡೋ ವೇಳೆ ಪರೀಕ್ಷೆ ಇಟ್ಟಿದ್ದಾರೆ. ಸರ್ಕಾರದ ಆಜ್ಞೆ ಉಲ್ಲಂಘನೆ ಮಾಡಿದ್ದಾರೆ. ಈ ಅವಧಿಯಲ್ಲಿ ಶಾಲೆ ನಡೆಸಿರುವವರ ಮಾನ್ಯತೆ ರದ್ದು ಮಾಡಬೇಕು. ಅನುದಾನ ವಾಪಸ ಪಡೆಯಬೇಕು. ಸಂಬಂಧಿಸಿದವರ ಬಂಧನ ಮಾಡಬೇಕು. ಬ್ರಿಟಿಷ್ ಕಾಲದ ಕ್ರಿಶ್ಚಿಯನ್ ರಜೆ ರದ್ದು ಮಾಡಬೇಕು. ಕ್ರಿಶ್ಚಿಯನ್ ಶಾಲೆಗಳಲ್ಲಿ ಇರೋದು ಹೆಚ್ಚು ಹಿಂದೂಗಳೇ. ಹೀಗಾಗಿ ಕ್ರಿಸ್‌ಮಸ್ ರಜೆ ರದ್ದು ಮಾಡಬೇಕು. ಬ್ರಿಟಿಷ್ ಕಾಲದ ಈ ರಜೆ ಪದ್ಧತಿ ಹೋಗಬೇಕು ಎಂದು ಆಗ್ರಹಿಸಿದರು
