MUDA Scam: ಮುಡಾ ಪ್ರಕರಣ: ಸಾಕ್ಷಿ ತಿರುಚಿದ ಆರೋಪ ಮೇಲೆ ಮತ್ತೊಂದು ದೂರು ದಾಖಲು

Share the Article

Complaint filed: ಸಿಎಂ ಸಿದ್ದರಾಮಯ್ಯ ಪತ್ನಿಗೆ ಸಂಬಂಧಿಸಿದ ‘ಮುಡಾ’ ಹಗರಣ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇದೀಗ ಮತ್ತೊಂದು ದೂರು ದಾಖಲಾಗಿದೆ. ಮುಡಾ ಹಗರಣ ಸಂಬಂಧ ದೂರುದಾರರಲ್ಲಿ ಒಬ್ಬರಾದ ಪ್ರದೀಪ್ ಕುಮಾರ್ ಅವರು ಇದೀಗ ಇಡಿಗೆ ದೂರು ನೀಡಿದ್ದಾರೆ. ಸಿಎಂ ಪುತ್ರ ಯತೀಂದ್ರ ಅವರ ಹೆಸರೂ ಕೂಡ ಇದರಲ್ಲಿ ಒಳಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಕ್ಷ್ಯ ನಾಶದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳು ಪಾಲುದಾರರಾಗಿದ್ದಾರೆಂದು ಪ್ರದೀಪ್ ಆರೋಪಿಸಿದ್ದಾರೆ. ಅಧಿಕಾರಿಗಳ ಮೇಲೂ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸಿಎಂ ಪತ್ನಿ ಮುಡಾ ನಿವೇಶಗಳನ್ನು ಹಿಂತುರುಗಿಸಿದ ಬೆನ್ನಲ್ಲೇ ಈ ಆರೋಪಗಳು ಕೇಳಿ ಬಂದಿವೆ. ಹಾಗೆ ಮುಡಾ ನಿವೇಶನಗಳನ್ನು ಹಿಂದಕ್ಕೆ ಪಡೆಯಲು ಒಪ್ಪಿಗೆ ಕೂಡ ಸೂಚಿಸಿದೆ.

ಇಡಿ ನೋಟಿಸ್ ನಿರಾಕರಿಸಿದ ಸಚಿವ ಭೈರತಿ ಸುರೇಶ್
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ, ಇದಕ್ಕೆ ಉತ್ತರ ನೀಡಿದ ಸಚಿವರು “ಇದು ಸುಳ್ಳು ಸುದ್ದಿ, ನನಗ್ಯಾಕೆ ನೋಟಿಸ್ ಕೊಡ್ತಾರೆ? ಸುಮ್ಮನೆ ತೋಜೋವಧೆ ಮಾಡಬೇಡಿ” ಎಂದು ಹೇಳಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವರ ನಿವಾಸಕ್ಕೆ ಹೋಗಿ ನೋಟಿಸ್ ನೀಡಿದ್ದಾರೆ” ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

Leave A Reply

Your email address will not be published.