Bank Money Deposit: ದೇಶದ ಮಹಿಳೆಯರ ಬಳಿ ಇರುವ ಹಣದ ಬಗ್ಗೆ ಶಾಕಿಂಗ್ ವರದಿ ನೀಡಿದ ಕೇಂದ್ರ ಸರ್ಕಾರ!

Share the Article

Bank Money Deposit: ಹೆಣ್ಣು ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ. ಎಲ್ಲಾ ವಿಷಯದಲ್ಲೂ ಸರಿ ಸಮಾನರು ಎಂದು ಇಂದಿಗೂ ನಿಯಮ ಇದೆ. ಆದ್ರೆ ನಿಮಗೆ ಗೊತ್ತಾ, ರಾಷ್ಟ್ರೀಯ ಅಂಕಿ-ಅಂಶ ಕಚೇರಿ ತನ್ನ ವರದಿ ಪ್ರಕಾರ ದೇಶದ ಬ್ಯಾಂಕ್‌ ಅಕೌಂಟ್‌ಗಳಲ್ಲಿರುವ 187 ಟ್ರಿಲಿಯನ್‌ ರೂಪಾಯಿ ಹಣದಲ್ಲಿ ಕೇವಲ 39 ಟ್ರಿಲಿಯನ್‌ ಹಣ ಮಾತ್ರ ಮಹಿಳೆಯರ ಪಾಲು (Bank Money Deposit) ಎಂದು ತೋರಿಸಿದೆ.

ಹೌದು, ದೇಶದಲ್ಲಿರುವ ಬ್ಯಾಂಕ್‌ ಅಕೌಂಟ್‌ಗಳಲ್ಲಿ ಒಟ್ಟು 187 ಲಕ್ಷ ಕೋಟಿ ರೂಪಾಯಿ ಹಣದಲ್ಲಿ ಮಹಿಳೆಯರ ಪಾಲು ಕೇವಲ 39 ಲಕ್ಷ ಕೋಟಿ ರೂಪಾಯಿ ಅಂದರೆ, ಶೇ 20.8ರಷ್ಟು ಎಂದು ತಿಳಿಸಿದೆ. 2024ರ ಮಾರ್ಚ್‌ ವೇಳೆಗೆ 2.52 ಬಿಲಿಯನ್‌ ಬ್ಯಾಂಕ್‌ ಅಕೌಂಟ್‌ಗಳ ಪೈಕಿ ಶೇ. 36.4ರಷ್ಟು ಅಕೌಂಟ್‌ಗಳು ಮಾತ್ರವೇ ಮಹಿಳೆಯರದ್ದಾಗಿದೆ ಎಂದಿದೆ.

ಅದರಲ್ಲೂ ನಗರ ಪ್ರದೇಶದ ಮಹಿಳೆಯರ ಬ್ಯಾಂಕ್‌ ಅಕೌಂಟ್‌ಗಳಲ್ಲಿ ಹೆಚ್ಚೂ ಕಡಿಮೆ ಹಣವೇ ಇಲ್ಲ ಅಂದರೆ ಇಲ್ಲಿನ ಮಹಿಳೆಯರ ಅಕೌಂಟ್‌ಗಳಲ್ಲಿ ಕೇವಲ 1.9 ಲಕ್ಷ ಕೋಟಿ ರೂಪಾಯಿ ಹಣವಿದೆ ಎಂದು ತಿಳಿಸಿದೆ. ಒಟ್ಟಾರೆ ದೇಶದ ಬ್ಯಾಂಕ್‌ ಅಕೌಂಟ್‌ಗಳ ಪೈಕಿ ಶೇ. 21ರಷ್ಟು ಹಣ ಮಾತ್ರ ಮಹಿಳೆಯರು ಹೊಂದಿದ್ದು, ಮಹಿಳೆಯ ಬ್ಯಾಂಕ್‌ ಅಕೌಂಟ್‌ಗಳ ಪ್ರಮಾಣವೂ ಸಮಾನುಪಾತದಲ್ಲಿಲ್ಲ ಎಂದು ಕೇಂದ್ರ ಸರ್ಕಾರ ವರದಿ ನೀಡಿದೆ.

ಅಲ್ಲದೆ ಮಹಿಳೆಯರ ಬಳಿ ಇರುವ 39 ಲಕ್ಷ ಕೋಟಿ ರೂಪಾಯಿ ಡೆಪಾಸಿಟ್‌ಗಳು ಇದು ಹಿಂದೂ ಅವಿಭಜಿತ ಕುಟುಂಬಗಳು, ರೈತರು, ವ್ಯಾಪಾರಿಗಳು, ವೃತ್ತಿಪರರು ಮತ್ತು ಸ್ವಯಂ ಉದ್ಯೋಗಿಗಳು, ವೇತನ ಮತ್ತು ವೇತನದಾರರು ಮತ್ತು ಇತರರ ಖಾತೆಗಳನ್ನು ಒಳಗೊಂಡಿದೆ.

ವಿಶೇಷ ಅಂದ್ರೆ ಗ್ರಾಮೀಣ ಮಹಿಳೆಯರ ಬಳಿಯೇ ಹೆಚ್ಚು ಹಣ ಇದೆಯಂತೆ. ಇದಕ್ಕೆ ಕಾರಣ  ಜನ್ ಧನ್ ಖಾತೆಗಳು ಎನ್ನಲಾಗಿದೆ. ಗ್ರಾಮೀಣ ಮತ್ತು ನಗರದ ಮಹಿಳೆಯರಿಗೆ ಹೋಲಿಸಿ ನೋಡಿದಾಗ ನಗರ ಪ್ರದೇಶಗಳಲ್ಲಿ, ಒಟ್ಟು ಠೇವಣಿಗಳಲ್ಲಿ ಕೇವಲ 16.5% ಅಥವಾ ₹ 1.9 ಲಕ್ಷ ಕೋಟಿ ಮಹಿಳೆಯರಿಗೆ ಸೇರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇದು 30% ಅಥವಾ 5.91 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.

3 Comments
  1. best cloud mining says

    I really appreciate this post. I have been looking everywhere for this! Thank goodness I found it on Bing. You have made my day! Thank you again

  2. cloud mining says

    I’m really enjoying the theme/design of your weblog. Do you ever run into any browser compatibility issues? A couple of my blog readers have complained about my site not working correctly in Explorer but looks great in Chrome. Do you have any advice to help fix this problem?

Leave A Reply

Your email address will not be published.