Dasara : 2024ರ ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್- ಅ. 3 ರಿಂದ ಅದ್ಧೂರಿ ಆರಂಭ, ಸರ್ಕಾರದಿಂದ ಘೋಷಣೆ
Dasara 2024: ಶ್ರಾವಣ ಮಾಸ ಶುರುವಾಗಿದೆ. ಇನ್ನು ಕೆಲವೆ ತಿಂಗಳಲ್ಲಿ ನಾಡ ಹಬ್ಬ ದಸರಾವನ್ನು ಆಚರಿಸಲು ರಾಜ್ಯದ ಜನರು ಕಾತರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2024ರ ವಿಶ್ವವಿಖ್ಯಾತ ದಸರಾ(Dasara 2024) ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ 3ರಿಂದ ಅ.12ರವರೆಗೆ ಕರ್ನಾಟಕ ದಸರಾ ಮಹೋತ್ಸವ ಆಚರಿಸಲಿದೆ ಎಂದು ತಿಳಿಸಿದೆ.
ಹೌದು, ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ(Vidhanasoudha) ಸಮ್ಮೇಳನ ಸಭಾಂಗಣದಲ್ಲಿ ಇಂದು “ದಸರಾ ಮಹೋತ್ಸವ -2024″ರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ, ರೂಪುರೇಷೆಗಳ ಕುರಿತು ಚರ್ಚಿಸಿದ್ದಾರೆ. ಸಭೆ ಬಳಿಕ ಸಿದ್ದರಾಮಯ್ಯ(CM Siddaramaiah) ಅವರು ‘ವಿಶ್ವವಿಖ್ಯಾತ ದಸರಾ ಮಹೋತ್ಸವ 2024 ಅಕ್ಟೋಬರ್ 3ರಿಂದ ಅ.12ರವರೆಗೆ ನಡೆಯಲಿದೆ ಎಂದು ಘೋಷಣೆ ಹೊರಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ”ಸಭೆಯಲ್ಲಿ ಸರ್ಕಾರವು ಅದ್ಧೂರಿ ಮೈಸೂರು ದಸರಾ ಆಚರಣೆಗೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ಅ.3 ರಿಂದ 12 ರವರೆಗೆ ದಸರಾ ಮಹೋತ್ಸವ ಜರುಗಲಿದೆ. ಅಂದು ಬೆಳಗ್ಗೆಯೇ ನಾಡದೇವತೆ ತಾಯಿ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಅಧಿಕೃತವಾಗಿ ದಸರಾ ಉದ್ಘಾಟನೆಗೊಳ್ಳಲಿದೆ. ದಸರಾವನ್ನು ಯಾರು ಉದ್ಘಾಟನೆ ಮಾಡಬೇಕು ಎಂಬುದರ ತೀರ್ಮಾನ ಮಾಡಲು ಸಬೆಯಲ್ಲಿ ಸರ್ವಾನುಮತದಿಂದ ನನಗೆ ಅಧಿಕಾರ ಕೊಟ್ಟಿದ್ದಾರೆ. ಕಾರ್ಯಕಾರಿ ಸಮಿತಿ ಮಾಡಿ ಅಲ್ಲಿ ಕೆಲ ನಿರ್ಣಯ ಮಾಡ್ತಾರೆ. ಈ ಬಾರಿ ಅದ್ಧೂರಿ, ಆಕರ್ಷಣೆ ಯಾಗಿ ದಸರಾ ಆಚರಣೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಅಲ್ಲದೆ ದಸರಾ ಉದ್ಘಾಟನೆ ದಿನದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ ಆಗಲಿವೆ. ದೀಪಾಲಂಕಾರ, ಕುಸ್ತಿ, ಯುವ ಸಂಭ್ರಮ, ಯುವ ದಸರಾ, ಕ್ರೀಡೆಗಳು ಅಂದೇ ಪ್ರಾರಂಭ ಆಗಲಿದೆ. ದಸರಾ ಉದ್ಘಾಟನೆ ಆದ ದಿನವೇ ವಸ್ತುಪ್ರದರ್ಶನ ಉದ್ಘಾಟನೆ ಆಗಬೇಕು, ಖಾಲಿ ಮಳಿಗೆಗಳು ಇರಬಾರದು, ವಸ್ತುಪ್ರದರ್ಶನದಲ್ಲಿ ಸರ್ಕಾರದ ಸಾಧನೆಗಳ ಪ್ರದರ್ಶನ ಮಾಡಬೇಕು ಅಂತಾ ಸೂಚನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.
ಮುಖ್ಯಮಂತ್ರಿ @siddaramaiah ಅವರು ಇಂದು "ದಸರಾ ಮಹೋತ್ಸವ -2024" ರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ, ರೂಪುರೇಷೆಗಳ ಕುರಿತು ಚರ್ಚಿಸಿದರು.
ಉಪಮುಖ್ಯಮಂತ್ರಿ @DKShivakumar, ಸಚಿವರಾದ @CMahadevappa, @thekjgeorge, @HKPatilINC, ಕೆ. ವೆoಕಟೇಶ್, ಮುಖ್ಯಮoತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮೈಸೂರು, ಚಾಮರಾಜನಗರ,… pic.twitter.com/wsKvKIX3x6
— CM of Karnataka (@CMofKarnataka) August 12, 2024