Paris Olympics: ನೋಡಲು ಅತೀ ಸುಂದರವಾಗಿದ್ದಾಳೆಂದು ಒಲಿಂಪಿಕ್ಸ್​ನಿಂದ​ ಬ್ಯೂಪಿಫುಲ್ ಲೇಡಿ ಸ್ಪರ್ಧಿ ಔಟ್ !!

Paris Olympics: ನೋಡಲು ಅತೀ ಸುಂದರವಾಗಿದ್ದಾಳೆಂದು ಪರಾಗ್ವೆಯ ಈಜುಗಾರ್ತಿ ಲುವಾನಾ ಅಲೊನ್ಸೊ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಿಂದ ಹೊರ ಹಾಕಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಹೌದು, 2024ರ ಪ್ಯಾರಿಸ್ ಒಲಂಪಿಕ್ಸ್(Paris Olympics) ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗ್ಲಾಮರ್​ಗೆ ಹೆಸರುವಾಸಿಯಾದ 20 ವರ್ಷದ ಈಜುಗಾರ್ತಿ ಲುವಾನಾ ಅಲೊನ್ಸೊ(Luana Alonso) ನೋಡಲು ತುಂಬಾ ಸುಂದರವಾಗಿದ್ದಾಳೆ, ಇತರ ಆಟಗಾರರ ಗಮನ ಸೆಳೆದು ಮನಸ್ಸನ್ನು ಕನಲಿಸುತ್ತಾಳೆಂದು ಆಕೆಯನ್ನು ಮರಳಿ ತನ್ನ ದೇಶಕ್ಕೆ ಕಳುಹಿಸಲಾಗಿದೆಯಂತೆ!!

ಅಂದಹಾಗೆ ಜುಲೈ 27ರಂದು ನಡೆದ ಮಹಿಳೆಯರ 100 ಮೀಟರ್ ಬಟರ್​​ಫ್ಲೈ ಸ್ಪರ್ಧೆಯಲ್ಲಿ ಲುವಾನಾ ಸೆಮಿಫೈನಲ್​ಗೆ ಪ್ರವೇಶಿಸಲು ವಿಫಲಳಾದಳು. ಆ ಬಳಿಕ ಕ್ರೀಡಾಗ್ರಾಮದಲ್ಲೇ ಉಳಿದಿದ್ದ ಲುವಾನಾ, ಅನೈತಿಕವಾಗಿ ವರ್ತಿಸಿದ್ದರಂತೆ. ಅಲ್ಲದೆ ಈಕೆಯ ಕಣ್ಣುಕುಕ್ಕುವ ಸೌಂದರ್ಯದ ಬಗ್ಗೆ ಸ್ಪರ್ಧಿಗಳು ವ್ಯವಸ್ಥಾಪಕರಿಗೆ ದೂರನ್ನೂ ನೀಡಿದ್ದರು ಎನ್ನಲಾಗಿದೆ. ಅಧಿಕಾರಿಗಳು ಆಟಗಾರರ ದೂರಿನ ಬಗ್ಗೆ ಗಮನ ಹರಿಸಿದಾಗ, ಕ್ರೀಡಾಪಟು ಲುಆನಾ ಅವರ ಸೌಂದರ್ಯವು ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಇದು ಆಟಗಾರರ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.

ಇದರೊಂದಿಗೆ ಈಕೆ ಹೇಳದೆ ಕೇಳದೆ ಕ್ರೀಡಾ ಗ್ರಾಮದಿಂದ ಹೊರಗೆ ಹೋಗಿದ್ದಳು ಎಂಬ ಆರೋಪವೂ ಕೇಳಿಬಂದಿದೆ. ದಿ ಸನ್ ಪ್ರಕಾರ, ತನ್ನ ತಂಡದ ಸದಸ್ಯರನ್ನು ಬೆಂಬಲಿಸಲು ಕ್ರೀಡಾ ಗ್ರಾಮದಲ್ಲಿ ಉಳಿಯುವ ಬದಲಿಗೆ ಪ್ಯಾರಿಸ್​​​​​ನ ಡಿಸ್ನಿಲ್ಯಾಂಡ್ ನೋಡಲು ಪಲಾಯನ ಮಾಡಿದ್ದರು. ಹೀಗಾಗಿ ಒಲಿಂಪಿಕ್ಸ್​ ಆಯೋಜಕರು ಕ್ರೀಡಾಗ್ರಾಮ ತೊರೆಯುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.