Darshan: ಜೈಲು ಸೇರಿ 61 ದಿನವಾದ್ರೂ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ? ಇದರ ಹಿಂದೆ ಮಹತ್ವದ ಕಾರಣ

Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy Murder Case) ನಟ ದರ್ಶನ್‌ ಜೈಲು ಪಾಲಾಗಿ ಬರೋಬ್ಬರಿ 61 ದಿನಗಳು ಕಳೆದಿದೆ. ಈ ಬೆನ್ನಲ್ಲೇ ದರ್ಶನ್(Drshan) ಜೈಲಿನಿಂದ ಹೊರ ಬರೋದೆ ಡೌಟು ಅನ್ನೋ ಮಾತುಗಳು ಕೇಳಿ ಬರ್ತಿದೆ. ಆದರೆ ಅಚ್ಚರಿ ಏನಂದ್ರೆ ಇಷ್ಟು ದಿನಗಳು ಕಳೆದರೂ ದರ್ಶನ್ ಅಥವಾ ಅವರ ಕುಟುಂಬದವರು ಇನ್ನೂ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ ಎಂಬುದು. ಹಾಗಿದ್ರೆ ಯಾಕೆ ಇನ್ನೂ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ? ಅದರ ಹಿಂದಿರುವ ಕಾರಣ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಹೌದು, ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ತನಿಖೆ ಶುರುವಾಗಿ 61 ದಿನ ಕಳೆದ್ರು ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ ಅನ್ನೋ ಮಾತು ಕೂಡ ಕೇಳಿ ಬಂದಿದ್ದು ಅದಕ್ಕೆ ಕಾರಣ ಕೂಡ ಇದೆ. ದರ್ಶನ್ ಒಂದು ವೇಳೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇ ಆದರೆ ಆರೋಪಿಗೆ ಯಾವ ಕಾರಣಕ್ಕೆ ಜಾಮೀನು ನೀಡಬೇಕು ಅನ್ನೋದನ್ನ ನ್ಯಾಯಾಲಯಕ್ಕೆ ತಿಳಿಸಬೇಕು.. ಇದು ಸಾಧ್ಯವಾಗಬೇಕಾದ್ರೆ ತನಿಖೆಯ ಮಾಹಿತಿ ಗೊತ್ತಿರಬೇಕು. ಆದ್ರೆ ಚಾರ್ಜ್ ಶೀಟ್ ಸಲ್ಲಿಕೆಗು ಮುಂಚಿತವಾಗಿ ತನಿಕಾಧಿಕಾರಿಯು ತನಿಖೆಯ ಗೌಪ್ಯತೆ ಕಾಪಾಡಿಕೊಂಡಿರ್ತಾರೆ.

ತನಿಖೆಯ ಯಾವುದೇ ಮಾಹಿತಿಗಳು ಕೂಡ ಆರೋಪಿಗಳಿಗೆ ಲಭ್ಯ ಆಗೋದಿಲ್ಲ ಹಾಗಾಗಿ ಜಾಮೀನು ಅರ್ಜಿ ಸಲ್ಲಿಕೆಗೆ ಆರೋಪಿಗಳು ಮುಂದಾಗಿಲ್ಲ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಅದು ಪಬ್ಲಿಕ್ ಡೊಮೈನ್ ಗೆ ಬರುತ್ತೆ.. ಪ್ರತಿ ಆರೋಪಿಗಳಿಗೆ ಚಾರ್ಜ್ ಶೀಟ್ ಪ್ರತಿ ನೀಡಲಾಗುತ್ತೆ.. ಆಗ ಅದನ್ನು ಆರೋಪಿಗಳು ಬಳಸಿಕೊಂಡು ಜಾಮೀನಿನ ಮೊರೆ ಹೋಗಬಹುದು. ಸದ್ಯ ನಟ ದರ್ಶನ್ ಗೆ 90 ದಿನದವರೆಗೆ ಜೈಲೇ ಗತಿಯಾಗಿದ್ದು 90 ದಿನ ಬಳಿಕ ಭವಿಷ್ಯ ಏನು ಅನ್ನೋದು ನಿರ್ಧಾರವಾಗಲಿದೆ.

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸೇರಿ 17 ಜನ ಜೈಲಿನಲ್ಲಿ ದಿನ ದೂಡ್ತಿದ್ದು ಅವರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಹರಸಾಹಸ ನಡೆಸ್ತಿದ್ದಾರೆ. 90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ರೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇಲ್ಲದಿದ್ರೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ವಿಫಲವಾಗಿದ್ದಾರೆ ಅನ್ನೋ ಕಾರಣ ನೀಡಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಬಹುದು.

ತಪ್ಪು ಸಾಭೀತಾದರೆ ಏನಾಗುತ್ತದೆ?
ಪೊಲೀಸರು ಸಾಕ್ಷ್ಯ ಕಲೆಹಾಕಿ 90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ.. ಪ್ರಕರಣದ ವಿಚಾರಣೆಗೆ ಪೊಲೀಸರು ವಿಶೇಷ ಕೋರ್ಟ್ ಮನವಿ ಮಾಡಿಕೊಂಡಿದ್ದು.. ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಶುರುವಾದ್ರೆ ನಟ ದರ್ಶನ್ ಗೆ ಜಾಮೀನು ಸಿಗೋದೆ ಅನುಮಾನವಾಗಿದ್ದು… ಆರೋಪಿ ಸಾಬೀತಾದರೆ ಜೀವಾವಧಿ ಶಿಕ್ಷೆಗು ಗುರಿಯಾಗಬಹುದು ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

1 Comment
  1. tlover tonet says

    You are a very capable person!

Leave A Reply

Your email address will not be published.