ಉಡುಪಿ: ಶ್ರೀಲಕ್ಷ್ಮೀವರತೀರ್ಥತೀರ್ಥ ಶ್ರೀಪಾದರ 6ನೇ ವರ್ಷದ ಆರಾಧನೆ; ಕೇಮಾರು ಮಠದಲ್ಲಿ ವಿಶೇಷ ಪೂಜೆ, ಪುಷ್ಪಾರ್ಚನೆ

ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 6ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀರಾಘವೇಂದ್ರ ಮಠದ ಸನ್ನಿಧಾನದಲ್ಲಿ ಬಹು ವೈಭವದಿಂದ ಜರಗಿತು.

ಶ್ರೀಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಕುಟುಂಬಿಕರಿಂದ ಈ ಸಮಾರಂಭವು ಶಾಸ್ತ್ರೋಕ್ತವಾಗಿ ಆಯೋಜನೆಗೊಂಡಿತ್ತು.

ಪ್ರಾತಃಕಾಲದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮವನ್ನು ವೇದಮೂರ್ತಿ ಶ್ರೀನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಶ್ರೀಗಣೇಶ ನಡೆಸಿಕೊಟ್ಟರು.ತದನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ.ಲಾತವ್ಯಆಚಾರ್ಯರು ನೆರವೇರಿಸಿದರು.ಅಪರಾಹ್ನ ಅನ್ನಸಂತರ್ಪಣೆ ಜರಗಿತು.

ಈ ಶುಭಸಂದರ್ಭದಲ್ಲಿ ಶ್ರೀರಾಯರಮಠದ ಶ್ರೀಜಯತೀರ್ಥ ಆಚಾರ್ಯ, ಅಪ್ಪಣ್ಣಆಚಾರ್ಯ,ಸೊಂಡೂರುಪ್ರಹ್ಲಾದಆಚಾರ್ಯ,
ಶ್ರೀಪಿ.ವೃಜನಾಥ ಆಚಾರ್ಯ,ಶ್ರೀರಘುರಾಮಕೃಷ್ಣ ಬಲ್ಲಾಳ್ ಚಿಟಪಾಡಿ, ಸಾಯಿರಾಧಾ ಸಂಸ್ಥೆಯ ಶ್ರೀಮನೋಹರ ಶೆಟ್ಟಿ, ಶ್ರೀವಿಕಾಸ ಶೆಟ್ಟಿ ವಳಕಾಡ್,ಚೆನ್ನೈನ ಶ್ರೀರಾಜಗೋಪಾಲ್, ಶ್ರೀಪಾದರ ಪೂರ್ವಾಶ್ರಮದ ಸಹೋದರರು,ಶ್ರೀನಾಗೇಶ ವಿ.ಆಚಾರ್ಯ ಸುರತ್ಕಲ್, ಶ್ರೀಅಕ್ಷೋಭ್ಯ ಆಚಾರ್ಯ, ಶ್ರೀಅವನೀಶ ಬಲ್ಲಾಳ್ ಚಿಟಪಾಡಿ,ಶ್ರೀವಿಶಾಲ ಆಚಾರ್ಯ,ಶ್ರೀಶಂಕರನಾರಾಯಣ ಹೊಳ್ಳ ಕುಂದಾಪುರ, ಹಾಗೂ ಇನ್ನೂ ಅನೇಕ ಮಹನೀಯರು ಶ್ರೀಪಾದರ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಮಾರು ಶ್ರೀಸಾಂದೀಪನಿ ಮಠದ ಆಶ್ರಮದಲ್ಲಿ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯನ್ನು ಆಯೋಜಿಸಿದ್ದರು.

Leave A Reply

Your email address will not be published.