UPI Payment: ಯುಪಿಐ ಪೇಮೆಂಟ್ಸ್ ನಲ್ಲಿ ಹೊಸ ವಿಧಾನ: ಇನ್ಮುಂದೆ ಹಣ ಪಾವತಿಗೆ ಯುಪಿಐ ಪಿನ್ ಬೇಕಾಗಿಲ್ಲ!

UPI Payment: ಈಗಿನ ಕಾಲದಲ್ಲಿ ಯುಪಿಐ ಪೇಮೆಂಟ್ಸ್ (UPI Payment) ಮಾಡುವವರೇ ಹೆಚ್ಚು. ಯುಪಿಐ ಪೇಮೆಂಟ್ಸ್ ಮೂಲಕ  ಹಣ ವ್ಯವಹಾರವನ್ನು ಮೊಬೈಲ್ ಮುಖೇನವೇ ಮಾಡಬಹುದು. ಆದ್ರೆ ಇನ್ಮುಂದೆ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವ ಉದ್ದೇಶದಿಂದ ಇದೀಗ ಯುಪಿಐ ಪೇಮೆಂಟ್ ವಿಧಾನ ಬದಲಾಗಿದೆಯಂತೆ.

ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್‌ ಯುಪಿಐ ಮೂಲಕ ಪಾವತಿ ವಿಧಾನವನ್ನು ಬದಲಾಯಿಸುವ ತಯಾರಿ ನಡೆಯುತ್ತಿದೆ. ಈ ಬದಲಾವಣೆ ಜಾರಿಯಾದರೆ,ಯುಪಿಐ ಮೂಲಕ ಪಾವತಿ ಮಾಡುವ ಸಂಪೂರ್ಣ ವಿಧಾನವೇ ಬದಲಾಗುತ್ತದೆ. ಅಂದರೆ UPI ಪಾವತಿಗಳಿಗೆ ಬಯೋಮೆಟ್ರಿಕ್ ದೃಢೀಕರಣವನ್ನು ಪ್ರಾರಂಭಿಸಲು NPCI ಹಲವಾರು ಸ್ಟಾರ್ಟ್‌ಅಪ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಸದ್ಯ ಮನಿಕಂಟ್ರೋಲ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ವ್ಯವಸ್ಥೆಯ ಮೂಲಕ ಬಳಕೆದಾರರು ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಮತ್ತು ಐಫೋನ್‌ನಲ್ಲಿ ಫೇಸ್ ಐಡಿಯನ್ನು ಬಳಸಿಕೊಂಡು ಯುಪಿಐ ಪಾವತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಒಂದು ವೇಳೆ ಹೊಸ ವ್ಯವಸ್ಥೆಯನ್ನು NPCI ಜಾರಿಗೊಳಿಸಿದರೆ, ಅಸ್ತಿತ್ವದಲ್ಲಿರುವ ನಾಲ್ಕು ಅಥವಾ ಆರು ಅಂಕಿಯ UPI ಪಿನ್ ವ್ಯವಸ್ಥೆ ಚೇಂಜ್ ಆಗುತ್ತದೆ. ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು

ಫಿಂಗರ್‌ಪ್ರಿಂಟ್‌ಗಳಂತಹ ಬಯೋಮೆಟ್ರಿಕ್ಸ್ ಸೇರಿದಂತೆ ಪಿನ್ ಮತ್ತು ಪಾಸ್‌ವರ್ಡ್ ಹೊರತುಪಡಿಸಿ ಇತರ ಆಯ್ಕೆಗಳನ್ನು ಅನ್ವೇಷಿಸಲು ಆರ್‌ಬಿಐ ಸೂಚಿಸಿದೆ. ಆರ್ ಬಿಐನ ಸೂಚನೆಯಂತೆ ಹೊಸ ವಿಧಾನ ಶೀಘ್ರವಾಗಿ ಅನುಷ್ಠಾನಕ್ಕೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬದಲಾವಣೆ ಯಾವಾಗಿಂದ ಜಾರಿ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಇದು ಕಾರ್ಯರೂಪಕ್ಕೆ ಬಂದರೆ ಪೇಮೆಂಟ್ ಮಾಡುವುದು ಸುಲಭವಾಗುತ್ತದೆ ಮತ್ತು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.

Leave A Reply

Your email address will not be published.