Julien Alfred: ಪುಟ್ಟ ದೇಶದ ಕ್ರೀಡಾಪಟುವಿನ ಐತಿಹಾಸಿಕ ಸಾಧನೆ – ಮೊದಲ ಹೆಜ್ಜೆಯಲ್ಲೇ ಚಿನ್ನದ ಪದಕ ಗೆದ್ದ ಭಾರೀ ಕಿಲಾಡಿ !
Julien Alfred: ಅದೊಂದು ಒಟ್ಟು 1,80,000 ಜನ ಸಂಖ್ಯೆ ಹೊಂದಿರುವ ಸೇಂಟ್ ಲೂಸಿಯಾ ಕೆರಿಬಿಯನ್ನಲ್ಲಿರುವ ಒಂದು ಸಣ್ಣ ದೇಶ. ಸಣ್ಣ ಎಂದರೆ ನಮ್ಮ ಬೆಂಗಳೂರುನಗರಕ್ಕಿಂತಲೂ ಚಿಕ್ಕದು. ಇದು ಉತ್ತರ ಅಮೆರಿಕಾ ಖಂಡದ ಪೂರ್ವ ಕೆರಿಬಿಯನ್ ದೇಶ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಬೇರೆ ಬೇರೆ ದೇಶದ ಕ್ರೀಡಾಪಡುಗಳು ಭಾಗವಹಿಸಿದಂತೆ ಈ ದೇಶದ ಓರ್ವ ಹುಡುಗಿ ಭಾಗವಹಿಸಿದ್ದಾಳೆ. ಶನಿವಾರದಂದು ನಡೆದ ಮಹಿಳೆಯರ 100 ಮೀಟರ್ ಓಟದಲ್ಲಿ ಅಮೆರಿಕಾದ “ಶಾ ಕ್ಯಾರಿ ರಿಚರ್ಡ್ಸನ್” ಕೂಡ ಓಡಿದ್ದಾಳೆ. ಈಕೆಯೇ ಚಿನ್ನ ಗೆಲ್ಲುತ್ತಾಳೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ ಆ ಚಿನ್ನದ ಪದಕ ಪಾಲಾಗಿದ್ದು ಆ ಸಣ್ಣ ದೇಶದ “ಜೂಲಿಯನ್ ಆಲ್ಫ್ರೆಡ್”ಗೆ. ವಿಶ್ವ ಭೂಪಟದಲ್ಲಿ ಈ ದೇಶವನ್ನು ಗುರುತಿಸಬೇಕಾದರೆ ಭೂತಗನ್ನಡಿಯ ಸಹಾಯ ಬೇಕು. ಅಂಥ ದೇಶದಿಂದ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದೇ ದೊಡ್ಡ ಸಾಧನೆ. ಈವರೆಗೆ ಯಾವ ಕ್ರೀಡಾಪಟುವು ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ದಾಖಲೆ ಇಲ್ಲ. ಆದರೆ ಜೂಲಿಯನ್ ಆಲ್ಫ್ರೆಡ್ ಸಾಧನೆ ನಿಜಕ್ಕೂ ಈ ದೇಶವನ್ನು ಗುರುತಿಸುವಂತೆ ಮಾಡಿದೆ. ಚಿನ್ನದ ಪದಕ ತಮ್ಮದಾಗಿಸಿಕೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಜೂಲಿಯನ್ ಆಲ್ಫ್ರೆಡ್ ಗೆ ಕೇವಲ 23 ವರ್ಷ. ಹನ್ನೆರಡು ವರ್ಷದವರೇ ತಮ್ಮ ತಂದೆಯನ್ನು ಕಳೆದುಕೊಂಡು ಕಷ್ಟದ ಜೀವನ ಕಂಡಿದ್ದಾರೆ. ನಂತರ ಅವರು ಬೆಳದದ್ದು ಅವರ ಚಿಕ್ಕಮ್ಮನ ಆಶ್ರಯದಲ್ಲಿ. ನಂತರ ಅವರ ಅದೃಷ್ಟ ಬದಲಾಗಿದ್ದು ಉಸೇನ್ ಬೋಲ್ಟ್ ಅವರ ದೇಶ ಜಮೈಕಾದಲ್ಲಿ ಓದಲು ಅವಕಾಶ ಸಿಕ್ಕಾಗ. ಆದರೆ 2018ರಲ್ಲಿ ಅವರು ಬ್ಯೂನಸ್ ಐರಿಸ್ನಲ್ಲಿ ಯೂತ್ ಒಲಿಂಪಿಕ್ಸ್ನಲ್ಲಿ ಸ್ಪರ್ಧೆಗೆ ಹೋದಾಗ ಚಿಕ್ಕಮ್ಮನನ್ನು ಕಳೆದುಕೊಂಡರು. ಅವರು ಬೆಳ್ಳಿಯ ಪದಕದೊಂದಿಗೆ ಮನೆಗೆ ಬಂದರೆ ಚಿಕ್ಕಮ್ಮ ಸಾವನ್ನಪ್ಪಿದ್ದರು. ಇದರಿಂದ ಆಘಾತಕ್ಕೊಳಗಾದ ಅವರು 2 ವರ್ಷಗಳ ಕಾಲ ಅಥ್ಲೆಟಿಕ್ಸ್ನ ಕಡೆ ಗಮನ ಕೊಡಲಿಲ್ಲ.
ನಂತರ ಅವರು ಕಮ್ ಬ್ಯಾಕ್ ಮಾಡಿ ಆ ಪುಟ್ಟ ದೇಶ ಸೇಂಟ್ ಲೂಸಿಯಾ ಇವರು ಗೆದ್ದಿರುವ ಚಿನ್ನದ ಪದಕದಿಂದಾಗಿ ಒಲಿಂಪಿಕ್ ಪದಕ ಪಟ್ಟಿಯಲ್ಲಿ 33ನೇ ಸ್ಥಾನಕ್ಕೆ ಏರಿದೆ. 140 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶ ಭಾರತ ಮೂರು ಕಂಚಿನ ಪದಕಗಳೊಂದಿಗೆ 54ನೇ ಸ್ಥಾನದಲ್ಲಿದೆ. ಸೇಂಟ್ ಲೂಸಿಯಾ ಕೆಳಗೆ ಈಗ ಭಾರತ ಅಲ್ಲದೆ ಡೆನ್ಮಾರ್ಕ್ (49) ಮತ್ತು ಪೋಲೆಂಡ್ (45) ಯುರೋಪಿಯನ್ ರಾಷ್ಟ್ರಗಳು ಕೆಳಗಿವೆ.
Hi are using WordPress for your site platform? I’m new to the blog world but I’m trying to get started and set up my own. Do you need any html coding knowledge to make your own blog? Any help would be greatly appreciated!