Ujire: ಉಜಿರೆ ಸುರ್ಯ ದೇವಸ್ಥಾನದಲ್ಲಿ ರಾಕಿಬಾಯ್ ಯಶ್ : ಟಾಕ್ಸಿಕ್ ಸಿನಿಮಾ ತಂಡ ಸಮೇತ ದೇವರ ದರ್ಶನ
Ujire: ಬೆಳ್ತಂಗಡಿ ತಾಲೂಕಿನ ಉಜಿರೆಯ ಸುರ್ಯದಲ್ಲಿರುವ ಸದಾಶಿವ ರುದ್ರ ದೇವಸ್ಥಾನಕ್ಕೆ ಇಂದು ನಟ ಯಶ್ ತನ್ನ ಕುಟುಂಬ ಹಾಗೂ ಅವರ ಮುಂದಿನ ಬಹು ನಿರೀಕ್ಷೆಯ ಸಿನಿಮಾ ಟಾಕ್ಸಿಕ್ ನಿರ್ದೇಶಕರೊಂದಿಗೆ ಭೇಟಿ ನೀಡಿದ್ದಾರೆ. ಯಶ್ ಜೊತೆ ಪತ್ನಿ ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಐರಾ ಹಾಗೂ ಯಥರ್ವ್ ದೇವರ ದರ್ಶನ ಪಡೆದು, ಸುರ್ಯ ಸದಾಶಿವ ರುದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಕೂಡ ಯಶ್ ದಂಪತಿ ಜೊತೆಗೆ ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್ ಬಗ್ಗೆ ಕನ್ನಡಿಗರಿಗೆ ಮಾತ್ರವಲ್ಲ ದೇಶ-ವಿದೇಶದ್ಲೂ ಭಾರಿ ಕುತೂಹಲ ಮೂಡಿದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಕಾಯುತ್ತಿದ್ದಾರೆ. ಇನ್ನೇನು ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಅದಕ್ಕೂ ಮುನ್ನ ನಟ ಯಶ್ ಅವರು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲು ಹೋಗಿದ್ದಾರೆ. ಸುರ್ಯ ದೇವಸ್ಥನ ನಂತರ ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ.
ಟಾಕ್ಸಿಕ್ ಶೂಟಿಂಗ್ ಗೂ ಪ್ರಾರಂಭಕ್ಕೂ ಮೊದಲು ರಾಕಿಂಗ್ ಸ್ಟಾರ್ ಯಶ್ ಟೆಂಪಲ್ ರನ್ ಆರಂಭಿಸಿದ್ದಾದ್ದಾರೆ. ಇದೇ ಅಗಸ್ಟ್ 8 ರಿಂದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರಿನ ಎಚ್ ಎಮ್ ಟಿ ಕಾರ್ಖಾನೆಯಲ್ಲಿ ಮೊದಲ ಹಂತದ ಶೂಟಿಂಗ್ಗೆ ಕ್ಲಾಪ್ ಮಾಡಲಾಗುವುದು ಎಂದು ಮಾಹಿತಿ ದೊರಕಿದೆ. ಈಗಾಗಲೇ ಎಚ್ ಎಮ್ ಟಿಯಲ್ಲಿ ಶೂಟಿಂಗ್ಗಾಗಿ ಅದ್ದೂರಿ ಸೆಟ್ ಹಾಕಲಾಗಿದೆ. ಆದಷ್ಟು ಬೇಗ ರಾಕಿ ಬಾಯ್ ಅಭಿಮಾನಿಗಳನ್ನು ಟಾಕ್ಸಿಕ್ ಗುಂಗಿನಿಂದ ಹೊರತರಲಿ.