Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ- ದರ್ಶನ್ ಮನೆಯ ಸಿಸಿಟಿವಿಯಿಂದ ಬಯಲಾಯ್ತು ಹೊಸ ರೋಚಕ ಸತ್ಯ !!
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder Case) ದರ್ಶನ್ ಜೈಲು ಪಾಲಾಗಿ ಸುಮಾರು 2 ತಿಂಗಳು ಕಳೆಯುತ್ತಾ ಬರುತ್ತಿದೆ. ಆದರೂ ದರ್ಶನ್(Darshan) ಗೆ ಬಿಡುಗಡೆಯ ಭಾಗ್ಯವಂತೂ ಸಧ್ಯಕ್ಕಿಲ್ಲ ಅನಿಸುತ್ತೆ. ಆದರೆ ಈ ನಡುವೆ ಅನೇಕ ಸತ್ಯಗಳು ಹೊರಬರುತ್ತಿವೆ.
ಹೌದು, ದರ್ಶನ್ ಗ್ಯಾಂಗ್ ಅಂದರ್ ಆದಾಗಲಿಂದಲೂ ಸಾಕ್ಷಿ ನಾಶಕ್ಕೆ ತುಂಬಾ ಪ್ರಯತ್ನಿಸುತ್ತಿದೆ. ಆದರೀಗ ಇದರ ನಡುವೆಯೂ ಸಿಐಡಿ ಸೈಬರ್ ತಜ್ಞರು ದರ್ಶನ್ ಮನೆಯ ಸಿಸಿಟಿವಿ ದೃಶ್ಯಗಳನ್ನು ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರಮುಖ ಆರೋಪಿಗಳ ಚಲನವಲನದ ಜೊತೆಯಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನದ ಓಡಾಟ ಸಹ ಈ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂದಹಾಗೆ ಪೊಲೀಸರು ರಿಟ್ರೀವ್ ಮಾಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೊಲೆ ನಡೆದ ದಿನ ದರ್ಶನ್ ಸೇರಿ ಆರೋಪಿಗಳು ಹೊರಗೆ ಬಂದು ಹೋಗಿರುವುದು ಪತ್ತೆಯಾಗಿದೆ. ಜೂನ್ 8 ರಿಂದ ಜೂನ್ 10ರವರೆಗೆ ಕೊಲೆಯ ಆರೋಪಿಗಳ ಚಲನವಲನ ಈ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳು ಮಾತ್ರವಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನಗಳ ಓಡಾಟ ಕೂಡ ಸೆರೆಯಾಗಿದೆ. ಹಾಗಾಗಿ ಪೊಲೀಸರು ಸಿಸಿಟಿವಿ ವಿಡಿಯೋ ರಿಟ್ರೀವ್ ಮಾಡಿ ಪಂಚನಾಮೆ ಮಾಡಿದ್ದಾರೆ.
ಇನ್ನು ಈಗಾಗಲೇ ಪೊಲೀಸರು ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಢವಢವ ಶುರುವಾಗಿದೆ. ರೇಣುಕಾ ಸ್ವಾಮಿ ಬಳಸಿದ್ದ ಮೊಬೈಲ್ನಲ್ಲಿದ್ದ ಮಾಹಿತಿಗಳು ಕೂಡ ಪೊಲೀಸರಿಗೆ ಲಭ್ಯವಾಗಿದೆ.