BPL Card: ಬಡತನ ರೇಖೆ ಮೇಲಿರುವ 40 ಲಕ್ಷಕ್ಕೂ ಬಿಪಿಎಲ್‌ ಕಾರ್ಡ್​​ದಾರರಿಗೆ ಬಿಗ್ ಶಾಕ್!

BPL Card: ರಾಜ್ಯದಲ್ಲಿ BPL ಕಾರ್ಡ್ ಬಗ್ಗೆ ಮಹತ್ವ ಮಾಹಿತಿ ಒಂದು ಬೆಳಕಿಗೆ ಬಂದಿದೆ. ಹೌದು, ಮಾಹಿತಿ ಪ್ರಕಾರ ಬಡತನ ರೇಖೆ ಮೇಲಿರುವರು ಸಹ ಬಿಪಿಎಲ್ ಕಾರ್ಡ್ (BPL Card) ಬಳಕೆ ಮಾಡುತ್ತಿರುವುದು ಪತ್ತೆಯಾಗಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್‌ ಕಾರ್ಡ್‌ದಾರರಾರು ಇರುವುದು ಪತ್ತೆಯಾಗಿದೆ. ಅದರಲ್ಲೂ ವಿಶೇಷ ಅಂದ್ರೆ ಈ ಪಟ್ಟಿಯಲ್ಲಿ ಶೇ 20ರಷ್ಟು ಬಿಪಿಎಲ್ ಕಾರ್ಡ್‌ಗಳು ಬೆಂಗಳೂರಿನಲ್ಲಿಯೇ ಇರುವುದು ಪತ್ತೆಯಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಶ್ರೀಮಂತರು ಕೂಡಾ ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆಗಳು, ವಸತಿ ಯೋಜನೆಗಳಂತಹ ನಾನಾ ಸರಕಾರಿ ಸೌಲಭ್ಯಗಳ ಬಳಕೆ ಮಾಡಲು ನಿಯಮ ಮೀರಿ ಕಾರ್ಡ್ ಬಳಕೆಯನ್ನು ಮಾಡುತ್ತಿದ್ದಾರೆ. ಸದ್ಯ ಅನರ್ಹ ಬಿಪಿಎಲ್ ಕಾರ್ಡ್​​​ದಾರರಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್ ವಿತರಣೆ ವೇಳೆ ಮತ್ತಷ್ಟು ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್‌, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್‌ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಈಗಾಗಲೇ ಆಹಾರ ಇಲಾಖೆಗೆ ಕಾರ್ಡುದಾರರ ಹೆಸರಿನಲ್ಲಿ ಪರಿಶೀಲನೆ ನಡೆಸಿದ್ದು, ಕಾರ್ಡ್​​ದಾರರಲ್ಲಿ ವಾಹನಗಳು ಇವೆಯಾ, ಫಲಾನುಭವಿಗಳ ಹೆಸರಲ್ಲಿ ಭೂಮಿ ಎಷ್ಟಿದೆ, ಸರಕಾರಿ ನೌಕರಿ, ಸರಕಾರಿ ಪ್ರಾಯೋಜಿತ ಇಲಾಖೆ, ನಿಗಮ ಮಂಡಳಿಯಲ್ಲಿ ಕೆಲಸ ಇದೆಯೇ, ಎಂದು ಈ ಎಲ್ಲಾ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅಲ್ಲದೇ ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಸಾಥ್ ನೀಡಿದ್ದು, ಇದೀಗ ಶೇ 40 ರಷ್ಟು ಅನರ್ಹರು ಪತ್ತೆಯಾಗಿದ್ದಾರೆ.

ಮುಖ್ಯವಾಗಿ BPL ಕಾರ್ಡ್ ಪಡೆಯಲು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತಲೂ ಹೆಚ್ಚಿರಬಾರದು. ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಇರಬಾರದು. ಐಟಿ ರಿಟರ್ನ್ ಪಾವತಿಸುವವರು ಆಗಿರಬಾರದು. ಹಳ್ಳಿಯಲ್ಲಿ 3 ಹೆಕ್ಟೇರ್‌ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು ಆಗಿರಬಾರದು. ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಇರಬಾರದು. ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿರಬಾರದು, ಈ ಮಾನದಂಡಗಳನ್ನು ಮೀರಿ ಒಂದು ವೇಳೆ BPL ಕಾರ್ಡ್ ಹೊಂದಿದ್ದಲ್ಲಿ ಶೀಘ್ರದಲ್ಲಿ ಅಂತಹ ಪಡಿತರ ಚೀಟಿಯನ್ನು ಕ್ಯಾನ್ಸಲ್ ಮಾಡಲಾಗುವುದು ಜೊತೆಗೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಂಬ ಮಾಹಿತಿ ಕೂಡಾ ಇದೆ.

Gruhalakshmi Scheme: ಮಹಿಳೆಯರ ಗಮನಕ್ಕೆ: 11ನೇ ಕಂತಿನ ಹಣವು ಈ 28 ಜಿಲ್ಲೆಗಳಲ್ಲಿ ಮೊದಲು ಬಿಡುಗಡೆಯಾಗಲಿದೆ! ಇಲ್ಲಿದೆ ಡಿಟೇಲ್ಸ್!!

Leave A Reply

Your email address will not be published.