Dr.Bro; ರಾಮ ಜನ್ಮಭೂಮಿಯಲ್ಲಿ ಪ್ರತ್ಯಕ್ಷರಾದ ಡಾ.ಬ್ರೋ!!!

ಕರ್ನಾಟಕದ ಮಂದಿ ಕೊಂಡಾಡುವ ಅನೇಕ ಯೂಟ್ಯೂಬರ್‌ಗಳಲ್ಲಿ ಡಾ.ಬ್ರೋ ಕೂಡಾ ಒಬ್ಬರು. ವಿದೇಶಗಳಿಗೆ ಹೋಗಿ ನಮ್ಮದೇ ಮನೆಯ ಮಗನೇ ನಮಗೆ ಅಲ್ಲಿಗೆ ವಿಶೇಷಗಳ ಕುರಿತು ವರ್ಣನೆ ಮಾಡುತ್ತಿದ್ದನೇನೋ ಎನ್ನುವ ರೀತಿ ವಿವರಣೆ ನೀಡುವ ಪರಿಗೆ ನಮ್ಮ ಮನೆ ಅಜ್ಜಿ ಕೂಡಾ ಮಾರು ಹೋಗಿದ್ದಾರೆ.
ಅಂತಹ ಡಾ.ಬ್ರೋ ಕೆಲವು ಸಮಯಗಳಿಂದ ನಾಪತ್ತೆಯಾಗಿದ್ದಾರೆಂದು ವರದಿ ಬಂದಿತ್ತು. ಏಕೆಂದರೆ ಡಾ.ಬ್ರೋ ಅವರ ಅಭಿಮಾನಿಗಳಿಗೆ ಅವರ ಯೂಟ್ಯೂಬ್ ಚಾನೆಲ್‌ನಿಂದ ಏನೂ ಅಪ್ಲೋಡ್ ಆಗಿಲ್ಲ ಎನ್ನುವ ಚಿಂತೆ ಕಾಡಿತ್ತು. ಡಾ.ಬ್ರೋ ಅವರ ಆತ್ಮೀಯ ಯೂಟ್ಯೂಬರ್‌ಗಳು ಅವರಿಗೆ ನಾಪತ್ತೆಯಾಗಿಲ್ಲ ಚೆನ್ನಾಗಿದ್ದಾರೆ ಎನ್ನುತ್ತಾ ವೀಡಿಯೋ ಮಾಡಿದ ಮೇಲೆ ಅಭಿಮಾನಿಗಳಿಗೆ ಸಮಾಧಾನ ಆಗಿತ್ತು.
ಇದೀಗ ಯೂಟ್ಯೂಬರ್ ಡಾ.ಬ್ರೋ ಪ್ರತ್ಯಕ್ಷರಾಗಿದ್ದು, ತಮ್ಮ ಯೂಟ್ಯೂಬ್‌ನಲ್ಲಿ ವೀಡಿಯೋ ಬಿಟ್ಟಿದ್ದಾರೆ. ಅದುವೇ ಅಯೋಧ್ಯೆ ದರ್ಶನ. ಬನ್ನಿ ಅವರೇನಂದರು ನೋಡ್ಕೊಂಡು ಬರುವ.