Teeth whitening: ಇದೊಂದು ವಸ್ತು ಸಾಕು, ಹಲ್ಲಿನ ಹಳದಿ ಕಲೆ ತೊಲಗಿಸಿ ಫಳ, ಫಳ ಹೊಳೆಯುವಂತೆ ಮಾಡುತ್ತೆ !!

Teeth whitening: ಫಳ ಫಳ ಅಂತ ಬಿಳಿ ಹಲ್ಲು(White Teeth)ಬೇಕೆಂದು ಪ್ರತಿಯೊಬ್ಬರು ಬಯಸುವುದು ಸಹಜ. ಆದರೆ, ಹಳದಿ ಹಲ್ಲು (Yellow Teeth)ನಿಮ್ಮ ಸುಂದರ ನಗುವನ್ನು ಮರೆ ಮಾಚಲು ಮಾತ್ರವಲ್ಲದೇ ಮುಜುಗರ ಉಂಟು ಮಾಡಬಹುದು. ಹಳದಿ ಹಲ್ಲುಗಳನ್ನು(Teeth whitening) ಮುತ್ತುಗಳಂತೆ ಹೊಳೆಯುವಂತೆ ಮಾಡಲು ನೀವೂ ಕೆಲ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು!!

ಪ್ರತಿದಿನ ತಿನ್ನುವ ಆಹಾರದ ಕಣಗಳು ಹಲ್ಲುಗಳ ಮೇಲೆ ಸಂಗ್ರಹವಾಗುವುದರಿಂದ ಹಳದಿ ಹಲ್ಲುಗಳು ಉಂಟಾಗುತ್ತದೆ.. ಹಳದಿ ಹಲ್ಲುಗಳಿಂದ ಮಾತನಾಡುವಾಗ ಇಲ್ಲವೇ ಇತರರ ಮುಂದೆ ನಗುವಾಗ ಮುಜುಗರ ಉಂಟಾಗುತ್ತದೆ. ಸಿಹಿತಿಂಡಿಗಳನ್ನು ಅತಿಯಾಗಿ ಸೇವಿಸುವ ಜೊತೆಗೆ ಹಲ್ಲಿನ ಬಗ್ಗೆ ಸರಿಯಾದ ಕಾಳಜಿ ಮಾಡದೇ ಇರುವುದರಿಂದ ಹಲ್ಲುಗಳ ಮೇಲೆ ಹಳದಿ ಕಲೆಗಳು ಉಳಿದುಬಿಡುತ್ತದೆ. ಇದಕ್ಕಾಗಿ ನೀವು ಕೆಲವೊಂದು ಸಿಂಪಲ್ ಟಿಪ್ಸ್ ಬಳಸಿ

# ಅಡಿಗೆ ಸೋಡಾ ಮತ್ತು ನೀರು:
2 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಬೇಕು. ಈ ಪೇಸ್ಟ್ ಅನ್ನು ನಿಮ್ಮ ಹಲ್ಲುಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ. ನಿಮ್ಮ ಬಾಯಿಯನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ಪ್ರತಿ ರಾತ್ರಿ ಮಲಗುವ ಮೊದಲು ಮಾಡುತ್ತಾ ಬಂದರೆ ಹಲ್ಲಿನಲ್ಲಿರುವ ಹಳದಿ ಕಲೆಗಳು ಹೋಗುತ್ತವೆ.

# ಆಪಲ್ ಸೈಡರ್ ವಿನೆಗರ್ ಮತ್ತು ಬಿಸಿ ನೀರು:
ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಅದನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಈ ನೀರಿನಿಂದ ಚೆನಾಗಿ ಗಾರ್ಗಲ್ ಮಾಡಿ. ವಾರದಲ್ಲಿ ಒಂದು ಬಾರಿ ಇಲ್ಲವೇ ಎರಡು ಬಾರಿ ಈ ವಿಧಾನ ಬಳಸಿ.

# ಉಪ್ಪು ಮತ್ತು ನಿಂಬೆ ರಸ:
ಮೊದಲಿಗೆ, ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಬೆರೆಸಿಕೊಂಡು ಈ ಮಿಶ್ರಣದಿಂದ ಹಲ್ಲುಜ್ಜಿದರೆ ಹಲ್ಲಿನಲ್ಲಿರುವ ಹಳದಿ ಕಲೆಯನ್ನು ಸುಲಭವಾಗಿ ತೆಗೆಯಬಹುದು.

# ತುಳಸಿ ಎಲೆಗಳು ಮತ್ತು ಒಣಗಿದ ಕಿತ್ತಳೆ ಸಿಪ್ಪೆಗಳು:
ಮೊದಲಿಗೆ, 7 ತುಳಸಿ ಎಲೆಗಳನ್ನು ತೆಗೆದುಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಂಡು ಬಳಿಕ ಸ್ವಲ್ಪ ಪ್ರಮಾಣದ ಒಣಗಿದ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಕೂಡಾ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇವೆರಡನ್ನೂ ಬೆರೆಸಿಕೊಂಡು ಈ ಪೇಸ್ಟ್ ಅನ್ನು ನೇರವಾಗಿ ನಿಮ್ಮ ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ನೀರಿನಿಂದ ಬಾಯಿಯನ್ನು ಮುಕ್ಕಳಿಸಿ.ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಅನುಸರಿಸಿ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today
Leave A Reply

Your email address will not be published.