Khushboo Sundar: ಕೇರಳದ ದೇವಾಲಯದಲ್ಲಿ ನಟಿ ಖುಷ್ಬೂ ಕಾಲು ತೊಳೆದು ಪೂಜೆ ಮಾಡಿದ ಅರ್ಚಕರು – ವೈರಲ್ ಆಯ್ತು ಫೋಟೋ

National news actress kushboo Sundar invited naari Pooja in Thrissur vishnumaya temple

Khushboo Sundar: ನಟಿ ಖುಷ್ಬೂ (Khushboo Sundar) ಅವರು ಸಿನಿಮಾದ (Film) ಜೊತೆಗೆ ರಾಜಕೀಯ (Politics) ದಲ್ಲಿ ಕಮಲ ಪಾಳಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕನ್ನಡದ ರಣಧೀರ, ಅಂಜದ ಗಂಡು, ಯುಗಪುರುಷ ಸಿನಿಮಾಗಳ ಜೊತೆಗೆ ಪರಭಾಷೆಗಳಲ್ಲೂ ನಟಿಸಿರುವ ಖುಷ್ಬೂ ಅನೇಕ ಅಭಿಮಾನೀ ಬಳಗವನ್ನು ಹೊಂದಿದ್ದಾರೆ.

ಬಹುಭಾಷಾ ನಟಿ ಖುಷ್ಬೂ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಖುಷ್ಬೂಗೆ ಸಿನಿಮಾ ರಾಜಕೀಯ ಮಾತ್ರವಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅದೇ ರೀತಿ ಇತ್ತೀಚೆಗೆ ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಖುಷ್ಬೂ ಅವರಿಗೆ ನಾರಿ ಪೂಜೆ ಮಾಡಲಾಗಿದೆ.

ನಟಿ ಖುಷ್ಬೂ ಅವರಿಗೆ ನಾರಿ ಪೂಜೆ ಮಾಡಿದ್ದು ಯಾಕೆ ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಕೇರಳದಲ್ಲಿ ಹಲವು ಕಡೆ ಮಹಿಳೆಯರನ್ನು ದೇವಿಯೆಂದು ಪರಿಗಣಿಸಿ ಪೂಜೆ ಮಾಡುವ ಪದ್ಧತಿಯಿದೆ. ಇದೇ ರೀತಿ ಇಲ್ಲಿನ ತ್ರಿಶೂರ್‌ನಲ್ಲಿರುವ ವಿಷ್ಣುಮಯ ದೇವಸ್ಥಾನದಲ್ಲಿ ಕೂಡ ಮಹಿಳೆಯರನ್ನು ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಹೀಗಾಗಿ ಖುಷ್ಬೂ ಅವರನ್ನು ದೇವಿಗೆ ಪೂಜೆ ಸಲ್ಲಿಸುವಂತೆ ಕಾಲು ತೊಳೆದು ಸಂಪ್ರದಾಯದಂತೆ ಪೂಜೆಯನ್ನು ಮಾಡಲಾಗಿದ್ದು, ಇದನ್ನು ನಾರಿ ಪೂಜೆ ಎಂದು ಕರೆಯಲಾಗುತ್ತದೆ. ಇದು ದೇವಸ್ಥಾನ ನೀತಿಯಾಗಿದ್ದು, ಈ ಬಾರಿ ಖುಷ್ಬೂ ಅವರ ಕಾಲು ತೊಳೆದು, ದೇವಿಗೆ ಪೂಜೆ ಸಲ್ಲಿಸುವಂತೆ ನಾರಿ ಪೂಜೆಯನ್ನು ಮಾಡಲಾಗಿದೆ. ಈ ಫೋಟೊಗಳನ್ನು ಖುಷ್ಬೂ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಖುಷ್ಬೂ ನಾರಿ ಪೂಜೆಯ ಬಳಿಕ ಪೋಸ್ಟ್ ಮಾಡಿದ್ದು, “ದೇವರಿಂದ ಆಶೀರ್ವಾದ ದೊರೆತಿದ್ದು, ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ತಮ್ಮನ್ನು ಕರೆದಿದ್ದು ನನ್ನ ಪಾಲಿನ ಸೌಭಾಗ್ಯ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿಗೆ ಕರೆಯಲಾಗುತ್ತದೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿದ್ದಕ್ಕೆ ಧನ್ಯವಾದ.” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಮೇಲೆ – ಕೆಳಗಿನದೆಲ್ಲಾ ವಿಡಿಯೋ ಮಾಡಿಕೊಂಡ !! ಕೇಳಿದಕ್ಕೆ ಏನು ಹೇಳಿದ ಗೊತ್ತಾ ?! ಅಚ್ಚರಿಯ ಘಟನೆ ತೆರೆದಿಟ್ಟ ಖ್ಯಾತ ನಟಿ !!

Leave A Reply

Your email address will not be published.