Mahalakshmi-Ravindar: ‘ಮಹಾ’ ಸುಳ್ಳು ಹೇಳಿ ನನ್ನನ್ನು ವರಿಸಿದ ; ನಾನು ಸಂಪೂರ್ಣ ಮೋಸ ಹೋದೆ – ಕೊನೆಗೂ ಸ್ಫೋಟಿಸಿದ ರವೀಂದರ್- ಮಹಾಲಕ್ಷ್ಮೀ ಸಂಬಂಧ

Mahalakshmi-Ravindar said I was completely cheated

Mahalakshmi-Ravindar: ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindar chandrasekaran And Mahalakshmi)ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುವ ಮಂದಿಯೇ ಹೆಚ್ಚು. ಹೀಗಿದ್ದರೂ ಕೂಡ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಜಾಲಿಯಾಗಿತ್ತು.

ಚೆನ್ನೈನ ಬಾಲಾಜಿ ಗಾಬಾ ತಮ್ಮ ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬುವವರಿಗೆ ರವೀಂದರ್‌ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ನಂಬಿಸಿದ್ದರಂತೆ. ಹೀಗಾಗಿ, ರವಿಂದರ್ ಮಾತು ನಂಬಿದ ವ್ಯಕ್ತಿ 16 ಕೋಟಿ ಹಣವನ್ನು ಹೂಡಿಕೆ ಕೂಡ ಮಾಡಿದ್ದರಂತೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಹೇಳಿ ನಕಲಿ ದಾಖಲೆಗಳ ಮೂಲಕ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಾಲಾಜಿ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಉದ್ಯಮಿ ರವೀಂದರ್‌ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು.
ಪತ್ನಿಯನ್ನು ಸದಾ ಹಾಡಿ ಹೊಗಳುತ್ತಿದ್ದ ರವೀಂದರ್‌, ಪತ್ನಿ ಮೇಲಿನ ತಮ್ಮ ಪ್ರೀತಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಪತ್ರಗಳ ಮೂಲಕ ಅಭಿವ್ಯಕ್ತ ಪಡಿಸುಟ್ಟಿದ್ದದ್ದು ಗೊತ್ತಿರುವ ಸಂಗತಿ. ಹೀಗಿರುವಾಗಲೇ ವಂಚನೆ ಕೇಸ್‌ನಲ್ಲಿ ರವೀಂದರ್‌ ಬಂಧನವಾಗುತ್ತಿದ್ದಂತೆ ಮಹಾಲಕ್ಷ್ಮೀ ವರಸೆ ಬದಲಿಸಿದ್ದಾರೆ. ರವೀಂದರ್‌ ಜೈಲು ಪಾಲಾಗಿದ್ದರಿಂದ ಪತ್ನಿ ಮಹಾಲಕ್ಷ್ಮೀ ಒತ್ತಡಕ್ಕೆ ಒಳಗಾಗಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ.

ಪತಿ ರವೀಂದರ್‌ ಜೈಲು ಪಾಲಾದ ಬಳಿಕ ಇತ್ತ ಮಹಾಲಕ್ಷ್ಮೀ ಪತಿಗೆ ಜಾಮೀನು ಕೊಡಿಸುವ ನಿಟ್ಟಿನಲ್ಲಿ ಹರಸಾಹಸ ಪಟ್ಟರು ಕೂಡ ಅರ್ಜಿ ತಿರಸ್ಕೃತಗೊಂಡಿದೆ. ಪತಿ ಜೈಲು ಸೇರಿದ ಮೇಲೆ ಸೋಷಿಯಲ್‌ ಮೀಡಿಯಾದಲ್ಲಿ ಅಷ್ಟು ಆಕ್ಟೀವ್ ಆಗಿರದ ಮಹಾಲಕ್ಷ್ಮೀ ನಾಲ್ಕೈದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ರವೀಂದರ್‌ ಬಗ್ಗೆ ಮೌನ ಮುರಿದಿದ್ದಾರೆ.”ಮದುವೆಗಿಂತ ಮೊದಲು ನನಗೆ ಈ ವಿಚಾರ ಗೊತ್ತಿರಲಿಲ್ಲ. ಈ ವಿಚಾರಗಳನ್ನೂ ರವೀಂದರ್‌ ನನ್ನ ಮುಂದೆ ಹೇಳಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ, ನನ್ನನ್ನು ಮೋಸ ಮಾಡಿ ಮದುವೆಯಾಗಿದ್ದಾನೆ” ಎಂದು ಮಹಾಲಕ್ಷ್ಮೀ, ಪತಿ ರವೀಂದರ್‌ ಬಗ್ಗೆ ತಮ್ಮ ಆಪ್ತ ವಲಯದ ಮುಂದೆ ಹೇಳಿಕೊಂಡಿದ್ದಾರೆ ಎಂದು ತಮಿಳಿನ ಕೆಲ ವೆಬ್‌ಸೈಟ್‌ಗಳು ವರದಿ ಮಾಡಿದೆ.

 

 

Leave A Reply

Your email address will not be published.