Viral video: ಚಾಯ್ ವಾಲಾನಿಗೇ ಚಾಯ್ ತಂದು ಕೊಟ್ಟ ರೋಬೋ – ವೈರಲ್ ಆಯ್ತು ವಿಡಿಯೋ !

robot bringing tea to the Prime Minister has gone viral.

Viral video: ಇದು ಟೆಕ್ನಾಲಜಿ ಯುಗ. ಜಗತ್ತು ಮುಂದುವರಿಯುತ್ತಿದೆ‌. ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ. ಈ ಹಿಂದೆ ಮಾಧ್ಯಮಗಳಲ್ಲಿ AI ನ್ಯೂಸ್ ರೀಡರ್ ಗಳ ಹವಾ ಇತ್ತು. ಇದೀಗ ರೊಬೋಟ್ ಸುದ್ದಿ ಸದ್ದು ಮಾಡುತ್ತಿದೆ. ಹೌದು, ಇದೀಗ ರೋಬೋ ಚಾಯ್ ವಾಲಾನಿಗೇ ಚಾಯ್ ತಂದು ಕೊಟ್ಟಿದೆ. ಸದ್ಯ ಈ ವಿಡಿಯೋ ವೈರಲ್ (viral video) ಆಗಿದೆ.

ಪ್ರಧಾನಿ ನರೇಂದ್ರ ಮೋದಿ (Narendra modi) ಬುಧವಾರ ಗುಜರಾತ್‌ ನ (Gujarat) ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರೋಬೊಟ್ ಪ್ರಧಾನ ಮಂತ್ರಿಗೆ ಚಹಾ ತಂದು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋವನ್ನು ಮೋದಿ ಅವರು ಟ್ವಿಟರ್ (ಎಕ್ಸ್‌) ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರದರ್ಶನದಲ್ಲಿ ವಿವಿಧ ರೋಬೋಟ್ ಸ್ಟಾಲ್‌ಗಳಲ್ಲಿ ಹಲವಾರು ರೋಬೋಟಿಕ್ ಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ. ಹಾಗೇ ರೋಬೋಟ್ ಪ್ರಧಾನಿ ಮತ್ತು ಸಿಎಂಗೆ ಚಹಾವನ್ನು ನೀಡಿದೆ‌.

ರೋಬೋಟ್ (robot) ಇಂಜಿನಿಯರ್‌ಗಳು ಪಿಎಂ ಮೋದಿಯವರಿಗೆ ರೋಬೋಟ್‌ಗಳು ಹೇಗೆ ಜೀವನದ ವಿವಿಧ ಹಂತಗಳಲ್ಲಿ ಶಕ್ತರಾಗಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ. ನೈಸರ್ಗಿಕ ವಿಕೋಪಗಳು ಅಥವಾ ಅಗ್ನಿ ಅವಘಡಗಳ ಸಂದರ್ಭದಲ್ಲಿ ಮಾನವರಿಗೆ ರೋಬೋಟ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ನೋಡಿದ್ದಾರೆಂದು ಈ ಕ್ಲಿಪ್ ತೋರಿಸಿದೆ.

 

ಇದನ್ನು ಓದಿ: RBI New Rule: RBI ನಿಂದ ಬಂತೊಂದು ಹೊಸ ನಿಯಮ- ಕೂಡಲೇ ಇದೊಂದು ಕೆಲಸ ಮಾಡಿ , ಇಲ್ಲಾಂದ್ರೆ ನಿಮ್ಮ ಬ್ಯಾಂಕ್ ಖಾತೆ ಸ್ಥತಗಿತಗೊಳ್ಳೋದು ಪಕ್ಕಾ !!

Leave A Reply

Your email address will not be published.