Indian Coast Guard Mangalore:ಸಮುದ್ರದ ಮಧ್ಯೆ ಮೀನುಗಾರನಿಗೆ ಹೃದಯಾಘಾತ : ಸಂಜೀವಿನಿಯಂತೆ ಬಂದ ಕಾವಲು ಪಡೆ

Indian Coast Guard Mangalore: ಮಂಗಳೂರಿನಲ್ಲಿ(Mangalore)ಕಡಲಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾದ (Heart Attack)ಘಟನೆ ನಡೆದಿದ್ದು, ಈ ಸಂದರ್ಭ ಕೋಸ್ಟ್ ಗಾರ್ಡ್ ಸಿಬ್ಬಂದಿ (Indian Coast Guard Mangalore)ತುರ್ತು ಕರೆಗೆ ಓಗೊಟ್ಟು ಆಳ ಸಮುದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ ಅಪರೂಪದ ಘಟನೆ ವರದಿಯಾಗಿದೆ.

 

ಪಣಂಬೂರು ಕಡಲ ತೀರದಿಂದ ಸುಮಾರು 36 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವಸಂತ ಎನ್ನುವ ಮೀನುಗಾರರೊಬ್ಬರು ಬೇಬಿ ಮೇರಿ-4 ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಸಮುದ್ರಕ್ಕೆ ತೆರಳಿದ್ದರು. ಈ ಸಂದರ್ಭ ಅವರಿಗೆ ಎದೆನೋವು ಕಾಣಿಸಿಕೊಂಡು ಸಹಜ ಉಸಿರಾಟಕ್ಕೆ ಸಮಸ್ಯೆಯಾಗಿತ್ತು. ಹೀಗಾಗಿ, ಮತ್ತೊಂದು ಮೀನುಗಾರಿಕಾ ಕಾರ್ಮಿಕರು ಕೋಸ್ಟ್ ಗಾರ್ಡ್ ಪಡೆಯನ್ನು ಸಂಪರ್ಕಿಸಿ ತುರ್ತು ನೆರವಿಗೆ ಮನವಿ ಸಲ್ಲಿಸಿದ್ದಾರೆ.

 

ತುರ್ತು ಕರೆಗೆ ಸ್ಪಂದಿಸಿದ ಕರಾವಳಿ ರಕ್ಷಣಾ ಪಡೆಯ ದೋಣಿ ಇಂಟರ್ ಸೆಪ್ಟರ್ ಸಿ- 446 ಮೂಲಕ ಸಮೀಪದ ದೋಣಿಯಲ್ಲಿದ್ದ ಸಮಸ್ಯೆಗೀಡಾದ ಸ್ಥಳಕ್ಕೆ ತೆರಳಿ ಅಧಿಕಾರಿಗಳು ವಸಂತ ಅವರ ಆರೋಗ್ಯ ತಪಾಸಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆ ಬಳಿಕ, ಸಮಸ್ಯೆ ಉಂಟಾದ ಮೀನುಗಾರನನ್ನು ಪಣಂಬೂರಿನ ಬಂದರಿನ ದಕ್ಕೆಗೆ ಕರೆತರಲಾಗಿತ್ತು. ಬೋಟ್ ಮಾಲೀಕರಿಗೆ ಈ ವಿಚಾರವನ್ನು ಗಮನಕ್ಕೆ ತಂದು, ಮೀನುಗಾರನನ್ನು ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.