The Best Whisky In the World: ಇಡೀ ಪ್ರಪಂಚದ ‘ದಿ ಬೆಸ್ಟ್ ವಿಸ್ಕಿ’ ನಮ್ಮ ಭಾರತದ್ದು ಅಂದ್ರೆ ನಂಬ್ತೀರಾ ?!! ಹಾಗಿದ್ರೆ ಯಾವುದದು ??

marketing news indri becomes the best whisky in the world wins best in show double gold at whiskies of the world awards

Best whiskey: ಮದ್ಯ (Liquor)ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋಯಿಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ.ಆದರೆ, ನಿಮಗೆ ವಿಶ್ವದ ಬೆಸ್ಟ್ ವಿಸ್ಕಿ ಯಾವುದು ಗೊತ್ತಾ?

ಮದ್ಯಪಾನ ಮಾರುಕಟ್ಟೆಯಲ್ಲಿ ವಿಸ್ಕಿ ಪ್ರಿಯರಿಗೆ ಭಾರತೀಯ ಬ್ಯಾಂಡ್‌ಗಳು ಹೆಚ್ಚು ಪ್ರಿಯವಾಗುತ್ತವೆ. ವೆಸಿಂಗಲ್ ಮಾಲ್ಟ್ಗಳು ಮತ್ತು ಬೆಂಡ್ಸ್‌ಗಳು ಹೀಗೆ ವಿಸ್ಕಿಯು(Whiskey)ದೊಡ್ಡ ಶ್ರೇಣಿಯನ್ನು ಒಳಗೊಂಡಿದೆ. ಭಾರತೀಯ ಮಾಲ್ ವಿಸ್ಕಿಯೊಂದು ಇತ್ತೀಚಿಗೆ ವಿಶ್ವದ ಅತ್ಯುತ್ತಮ ವಿಸ್ಕಿ (World Whiskey)ಎಂಬ ಹೊಸ ದಾಖಲೆ ನಿರ್ಮಿಸಿದೆ. ಇಂದ್ರಿ ಎಂಬ ಹೆಸರಿನ ವಿಸ್ಕಿ ದಾಖಲೆ ಬರೆದಿದೆ.ಪಿಕ್ಕಾಡಿಲಿ ಡಿಸ್ಟಿಲರೀಸ್‌ನಿಂದ ಸ್ವದೇಶಿ ಬ್ರಾಂಡ್ ಇಂದ್ರಿ ತನ್ನ ಪ್ರಯಾಣವನ್ನು ಇಂದ್ರಿ-ಟ್ರಿನಿ ಎಂಬ ಭಾರತದ ಮೊದಲ ಟ್ರಿಪಲ್-ಬ್ಯಾರೆಲ್ ಸಿಂಗಲ್ ಮಾಲ್ಸ್‌ನೊಂದಿಗೆ ಪ್ರಾರಂಭ ಮಾಡಿದೆ.

ಇಂದ್ರಿಯ ದೀಪಾವಳಿ ವಿಶೇಷ ಕಲೆಕ್ಟರ್ಸ್ 2023ನೇ ಆವೃತ್ತಿಯಲ್ಲಿ ಇತ್ತೀಚೆಗೆ ಪ್ರತಿಷ್ಠಿತ ವಿಸ್ಕಿಸ್ ಆಫ್ ಧಿ ವರ್ಲ್ಡ್ ಅವಾರ್ಡ್ಸ್ ನಲ್ಲಿ ಉನ್ನತ ಗೌರವ ಪಡೆದಿದೆ. ವಿಸ್ಕಿಸ್ ಆಫ್ ದಿ ವರ್ಲ್ಡ್ ಅವಾರ್ಡ್ಸ್‌ನಲ್ಲಿ ಬೆಸ್ಟ್ ಇನ್ ಶೋ ಡಬಲ್ ಗೋಲ್ಡ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಈ ವಿಸ್ಕಿ ಬ್ಯಾಂಡ್‌ಗಳು ವಿಶಿಷ್ಟವಾದ ಪ್ರಾದೇಶಿಕ ಸುವಾಸನೆ ಹಾಗೂ ಅರೊಮ್ಯಾಟಿಕ್ ಪ್ರೊಫೈಲ್ ಗಳನ್ನು ಒಳಗೊಂಡಿದೆ. 2021 ರಲ್ಲಿ ಶುರುವಾದ ಈ ಬ್ರಾಂಡ್ 14 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಬಾಚಿಕೊಂಡಿದೆ.ಈ ವಿಸ್ಕಿ ಸಾಂಪ್ರದಾಯಿಕವಾಗಿ ತನ್ನ ವಿಭಿನ್ನ ವೈಶಿಷ್ಟ್ಯ ಮತ್ತು ಪರಂಪರಾಗತ ರುಚಿಯಿಂದ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಹೀಗಾಗಿ, ಈ ವಿಸ್ಕಿ ಜಗತ್ತಿನ ಮನ್ನಣೆ ಪಡೆದುಕೊಂಡಿದೆ.

Leave A Reply

Your email address will not be published.