ದಾಸವಾಳವನ್ನು ಈ ರೀತಿ ಬಳಸಿ ನಿಮ್ಮ ಕೂದಲನ್ನು ದಟ್ಟವಾಗಿ ಬೆಳೆಸಿ!

Hibiscus for thick hair: ನಮ್ಮ ಮನೆಯ ಹೂದೋಟದಲ್ಲಿರುವ ದಾಸವಾಳ ನೋಡಲು ಮಾತ್ರ ಸುಂದರವಾದ ಹೂವಲ್ಲ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ನಿಮ್ಮ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಈ ಹೂವು ರಾಮಬಾಣವಾಗಿದೆ. ಹೌದು, ನಿಮ್ಮ ತಲೆ ಕೂದಲು ಉದುರುವಿಕೆಯನ್ನು ತಡೆಯುವುದರಿಂದ ಹಿಡಿದು ಕೂದಲಿಗೆ ಉತ್ತಮ ಹೊಳಪು ನೀಡುವಲ್ಲಿ ದಾಸವಾಳ ಪಾತ್ರ (Hibiscus for thick hair) ತುಂಬಾ ಮಹತ್ವ ಆಗಿದೆ. ಮುಖ್ಯವಾಗಿ ತಲೆ ಕೂದಲಿನ ಭಾಗದಲ್ಲಿ ಕಲ್ಮಶಗಳನ್ನು ದೂರ ಮಾಡಿ ತಲೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ.

 

ಮುಖ್ಯವಾಗಿ ದಾಸವಾಳವು ವಿಟಮಿನ್ ಸಿ, ಅಮೈನೋ ಆಮ್ಲಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಉದ್ದ ಮತ್ತು ಹೊಳೆಯುವ ಕೂದಲನ್ನು ಪಡೆಯಲು ದಾಸವಾಳವನ್ನು ವಿವಿಧ ರೀತಿಯಲ್ಲಿ (Hibiscus For Hair Care)ಬಳಸಬಹುದು. ಆದರೆ ನೀವು ಈ ಹೂವನ್ನು ಕೂದಲಿಗೆ ಯಾವ ರೀತಿ ಬಳಸಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.

 

ಇದಕ್ಕಾಗಿ ನೀವು ಕೆಲವು ದಾಸವಾಳ ಹೂಗಳನ್ನು 20 ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಅದೇ ನೀರಿನ ಜೊತೆ ದಾಸವಾಳ ಹೂಗಳ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳು ಹಾಗೆ ಬಿಡಬೇಕು. ಆನಂತರದಲ್ಲಿ ಶಾಂಪೂ ಹಾಕಿ ಸ್ನಾನ ಮಾಡಿಕೊಳ್ಳಬಹುದು.

 

ಕೂದಲು ಬೆಳವಣಿಗೆಗೆ ಎಣ್ಣೆ ಮಸಾಜ್ ಬಹಳ ಮುಖ್ಯ. ದಾಸವಾಳದ ಎಣ್ಣೆಯು ಆರೋಗ್ಯಕರ ಕೂದಲು ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಈ ಎಣ್ಣೆಯನ್ನು ಬಳಸಿ ವಾರಕ್ಕೆ ಎರಡು ಬಾರಿ ಕೂದಲಿಗೆ ಮಸಾಜ್ ಮಾಡಿ. ಈಗ ದಾಸವಾಳದ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

 

ದಾಸವಾಳದ ಎಣ್ಣೆ ಗಾಗಿ, 10 ದಾಸವಾಳದ ಹೂವುಗಳು ಮತ್ತು 10 ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ. ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಪ್ಯಾನ್ ಅನ್ನು ಒಲೆಯ ಮೇಲೆ ಬಿಸಿ ಮಾಡಿ, ಒಂದು ಕಪ್ ತೆಂಗಿನ ಎಣ್ಣೆ ಎಣ್ಣೆಯನ್ನು ಹಾಕಿ ಬಿಸಿಮಾಡಿ. ಬಿಸಿಯಾದಾಗ, ರುಬ್ಬಿದ ಪೇಸ್ಟ್ ಅನ್ನು ಸೇರಿಸಿ. ಈ ಮಿಶ್ರಣವನ್ನು 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿ. ಈಗ ದಾಸವಾಳದ ಎಣ್ಣೆ ರೆಡಿ. ಸಿದ್ದಪಡಿಸಲಾದ ಈ ಎಣ್ಣೆಯನ್ನು ಬಳಸಿ ತಲೆಗೆ ಮಸಾಜ್ ಮಾಡಿ ಮತ್ತು 30 ನಿಮಿಷಗಳ ನಂತರ ಗಿಡಮೂಲಿಕೆಗಳ ಶಾಂಪೂ ಬಳಸಿ ತೊಳೆಯಿರಿ. ಉಳಿದ ಎಣ್ಣೆಯನ್ನು ಮರುಬಳಕೆ ಮಾಡಬಹುದು.

 

ಹೈಬಿಸ್ಕಸ್ ಶಾಂಪೂ ತಯಾರಿಕೆ : ದಾಸವಾಳದ ಹೂವು ಮತ್ತು ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ. 5 ಹೂವುಗಳಿಗೆ 15 ಎಲೆಗಳನ್ನು,ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ದಾಸವಾಳದ ಹೂ ಮತ್ತು ಎಲೆಗಳನ್ನು ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ. ನಂತರ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಇದನ್ನು ಶಾಂಪೂ ಆಗಿ ಬಳಸಿ.

 

ಹೈಬಿಸ್ಕಸ್ ಹೇರ್ ಪ್ಯಾಕ್ಗಾಗಿ, 5 ದಾಸವಾಳದ ಹೂವುಗಳು ಮತ್ತು ದಾಸವಾಳದ ಎಲೆಗಳನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಈ ಪೇಸ್ಟ್ ಕೂದಲಿಗೆ ಹಚ್ಚಿಕೊಳ್ಳಿ. 2 ರಿಂದ 3 ಗಂಟೆಗಳ ಕಾಲ ಬಿಡಿ, ಮುಂದೆ ದಾಸವಾಳದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡಲು ವಾರಕ್ಕೆ ಎರಡು ಬಾರಿ ಹೀಗೆ ಮಾಡಿ.

 

ಈ ರೀತಿಯಾಗಿ ನೀವು ನೈಸರ್ಗಿಕವಾಗಿ ತಯಾರು ಮಾಡಿದ ದಾಸವಾಳ ಎಣ್ಣೆ, ಶಾಂಪೂ, ಹೇರ್ ಪ್ಯಾಕ್ ಅನ್ನು ಕೂದಲಿಗೆ ಅಪ್ಲೈ ಮಾಡುವ ಮೂಲಕ ಕ್ರಮೇಣ ಕೂದಲ ಬೆಳವಣಿಗೆ ವೇಗವಾಗಿ ಮತ್ತು ದಪ್ಪವಾಗಿ ಬೆಳೆಯಲು ಸಹಾಯ ಆಗುತ್ತದೆ.

ಇದನ್ನೂ ಓದಿ :ನಿಗೂಢ ಮರಣ ಬಾಗಿಲು ಮುಚ್ಚಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಸಾವು

Leave A Reply