ಇತ್ತೀಚೆಗೆ ಎಲ್ಲಾ ಕಡೆ ಹೋದರೂ ಒಂದು ಹಾಡು ಸಾಕಷ್ಟು ಕೇಳಿ ಬರುತ್ತಿದೆ. ಅದೇ ʼನಾನು ನಂದಿನಿ ಬೆಂಗ್ಳೂರು ಬಂದೀನಿʼ. ವಾಸ್ತವ ಪರಿಸ್ಥಿತಿಗೆ ಹತ್ತಿರವಾಗುವಂತೆ ಮಾಡಿದ ಈ ಹಾಡು ನಿಜಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದರೂ ಇದೇ ಹಾಡು. ಈ ಹಾಡಿನ ರೀಲ್ಸ್ ಕೂಡಾ ಮಾಡಿ ಆಗಿದೆ. ಹಾಗೆನೇ ಟ್ರೋಲ್ಸ್, ಮೀಮ್ಸ್‌ಗಳಿಗೂ ಕಮ್ಮಿಯಿಲ್ಲ.
ಈಗ ಇದೇ ಹಾಡಿಗೆ ನಾಗವಲ್ಲಿ ಹಾಡನ್ನು ಸಿಂಕ್ ಮಾಡಲಾಗಿದ್ದು, ನಿಜಕ್ಕೂ ಇದನ್ನು ನೋಡಿದ ಜನ ಹೊಟ್ಟೆಹುಣ್ಣಾಗುವಂತೆ ಮಾಡಿದೆ. ವಿಷ್ಣುವರ್ಧನ್, ರಮೇಶ್, ಸೌಂದರ್ಯ ಅವರು ಅಭಿನಿಯಿಸಿರುವ ತುಣುಕನ್ನು ಇಲ್ಲಿ ತೋರಿಸಲಾಗಿದೆ. ಇದಕ್ಕೆ ನಾನು ನಂದಿನಿ ಹಾಡನ್ನು ಬಳಸಲಾಗಿದೆ. ಕೆಲವರಂತೂ ಈ ಎಡಿಟಿಂಗ್ ನೋಡಿ ಬೆಂಕಿ ಎಡಿಟಿಂಗ್ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆ ಮಾಡುವವರಿಗೆ ವಿಕ್ಕಿಯವರ ಪರಿಚಯ ಇರಬಹುದು. ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿ ವಿಕ್ಕಿ (Vicky). ಇವರು ಇದೇ ರೀತಿ ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಕೂಡ ವಿಕ್ಕಿಯವರ ವೀಡಿಯೋ ನೋಡಿ ವಾವ್ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.
https://www.instagram.com/p/CxQxm7nyAsj/?utm_source=ig_embed&utm_campaign=embed_video_watch_again