Dakshina Kannada: ನಾಗರಹಾವಿಗೆ ಡೀಸೆಲ್‌ ಎರಚಿದ ಕಾರ್ಮಿಕ! ವಾರ ಕಳೆಯುವಷ್ಟರಲ್ಲಿ ನಡೆಯಿತೊಂದು ಆಘಾತಕಾರಿ ಘಟನೆ!!!

Dakshina Kannada news person who poured Diesel on the snake at mulki

Dakshina Kannada :  ತುಳುನಾಡಿಗೂ ನಾಗಾರಾಧನೆಗೂ ಪುರಾಣ ಕಾಲದ ನಂಟು. ನಾಗದೈವದ ಕುರಿತಾದ ನಂಬಿಕೆಗೆ ಇನ್ನಷ್ಟು ಇಂಬು ನೀಡುವಂಥ ಘಟನೆಗಳೂ ನಡೆದಿವೆ. ಇಂದಿಗೂ ಇಂಥ ಪವಾಡಗಳು ನಡೆಯುತ್ತಿವೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಮಂಗಳೂರು ನಗರದ ಕಿನ್ನಿಗೋಳಿ ಎಂಬಲ್ಲಿ ಬಹುಮಹಡಿ ಕಟ್ಟಡದ ಪಕ್ಕದಲ್ಲಿ ನಾಗರ ಹಾವೊಂದು ಕಂಡು ಬಂದಿದ್ದು, ಇದನ್ನು ಕಂಡ ಕಟ್ಟಡದ ಕಾವಲುಗಾರ ನಾಗರ ಹಾವಿಗೆ ಡೀಸೆಲ್‌ ಎರಚಿದ್ದಾನೆ. ಕೂಡಲೇ ನಾಗರಹಾವು ಮೈ ಉರಿಯಿಂದ ಒದ್ದಾಡಿದೆ(Dakshina Kannada)

ಇದನ್ನು ಕಂಡ ಸ್ಥಳೀಯರು ಉರಗ ರಕ್ಷಕ ಯತೀಶ್‌ ಕಟೀಲು ಅವರಿಗೆ ಹೇಳಿದ್ದಾರೆ. ನಂತರ ಸ್ಥಳಕ್ಕೆ ಬಂದ ಉರಗ ತಜ್ಞ ಶ್ಯಾಂಪು ಹಾಕಿ ಅದನ್ನು ತೊಳೆದು ಸಹಜ ಸ್ಥಿತಿಗೆ ತಂದು ನಂತರ ಹಾವನ್ನು ಕಾಡಿಗೆ ಬಿಟ್ಟಿದ್ದಾರೆ. ಆದರೆ ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್‌ ಎರಚಿದ ಕಾರ್ಮಿಕ ಕೂಡಾ ನಾಗರಹಾವಿನಂತೆ ಮೈ ಉರಿಯಿಂದ ಬಳಲಲು ತೊಡಗಿದ್ದಾನೆ. ಇದನ್ನು ತಿಳಿದ ಕಾವಲುಗಾರನ ಸಂಬಂಧಿಕರು ಬಂದು, ಆತನನ್ನು ಆತನ ಊರಾದ ಉತ್ತರಕರ್ನಾಟಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದೀಗ ಆತ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಉರಗ ರಕ್ಷಕ ಯತೀಶ್‌ ಕಟೀಲು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ.

ಇದನ್ನೂ ಓದಿ: Pramod mutalik: ಚೈತ್ರಾ ಕುಂದಾಪುರ ಪರ ಬ್ಯಾಟ್ ಬೀಸಿದ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ !! ಭಾರೀ ಅಚ್ಚರಿ ಮೂಡಿಸಿದ ಹಿಂದೂ ಹುಲಿಯ ಹೇಳಿಕೆ.

Leave A Reply