ಬಿಗ್ ಬಾಸ್ ಸೀಸನ್-10ರ ಮನೆ ಹೇಗಿರಲಿದೆ ಗೊತ್ತಾ? ಈ ಸಲದ ದೊಡ್ಮನೆ ಗಮ್ಮತ್ತೇನು?
Bigg Boss Kannada Season 10: ಬಿಗ್ ಬಾಸ್ ರಿಯಾಲಿಟಿ ಶೋ ಸಕತ್ ಮನೋರಂಜನೆ ಕೊಡುವ ಶೋ ಎಂದರೆ ಖಂಡಿತಾ ತಪ್ಪಾಗಲಾರದು. ಯಾಕೆಂದರೆ ಬಿಗ್ ಬಾಸ್ ಶೋ ಗೆ ಹಲವಾರು ಭಾಷೆಗಳಲ್ಲಿ ಅಪಾರ ಬೇಡಿಕೆ ಮತ್ತು ಅಭಿಮಾನಿಗಳನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ .
ಇದೀಗ ಕನ್ನಡದಲ್ಲಿ ಜನಪ್ರಿಯ ಬಿಗ್ ಬಾಸ್ ಕನ್ನಡದ 10ನೇ ( Bigg Boss Kannada Season 10)ಸೀಸನ್‌ಗೆ ತಯಾರಿ ಪ್ರಾರಂಭವಾಗಿದೆ. ಬನ್ನಿ ಏನೆಲ್ಲಾ ತಯಾರಿ ನಡೆದಿದೆ ಮತ್ತು ಹೇಗೆ ತಯಾರಿ ನಡೆಯುತ್ತಿದೆ ಎಂದು ಸ್ವಲ್ಪ ನಿಮಗೂ ಹೇಳ್ತೀವಿ. ಇನ್ನು ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಬಿಗ್ ಬಾಸ್ ಮನೆಯನ್ನು ಯಾವ ರೀತಿ ರೆಡಿ ಮಾಡಿದ್ದಾರೆ ನೋಡೋಣ.
ಈಗಾಗಲೇ ಕಿಚ್ಚ ಸುದೀಪ್ ಹುಟ್ಟು ಹಬ್ಬದ ದಿನ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿತು. ಪ್ರೋಮೋದಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಕಾಣಿಸಿಕೊಂಡಿಲ್ಲವಾದರೂ, ಪ್ರಮುಖ ಹೈಲೈಟ್ ಎಂದರೆ ಬಿಗ್ ಬಾಸ್ ಧ್ವನಿ.
“ನಮಸ್ತೆ ಕರ್ನಾಟಕ! ನೀವೆಲ್ಲರೂ ಹೇಗಿದ್ದೀರಿ? ನೀವು ನನ್ನನ್ನು ಕಳೆದುಕೊಂಡಿದ್ದೀರಾ? ಈ ಬಾರಿ ದೃಷ್ಟಿ ಬಲವಾಗಿದೆ. ಆಟವು ಪ್ರಾರಂಭವಾಗಲಿದೆ. ಆದರೆ ಈ ಬಾರಿ, ಏನೋ ವಿಶೇಷ.” ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಹೌದು, ಪ್ರತಿ ಬಾರಿ ಏನಾದರೂ ಒಂದು ವಿಶೇಷತೆಗಳಿಂದಲೇ ಬಿಗ್ ಬಾಸ್ ಶುರುವಾಗುತ್ತದೆ. ಇನ್ನು ಪ್ರೋಮೋ ಆಗಿ “ಈ ಬಾರಿಯ ಬಿಗ್ ಬಾಸ್ ಸಂಥಿಂಗ್ ಸ್ಪೆಷಲ್!!! ನೀವು ಇಷ್ಟಪಡುವ ವಿಶೇಷವೇನು?” ಎಂಬ ಶೀರ್ಷಿಕೆಯ ಜೊತೆ ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ಪ್ರೋಮೋವನ್ನು ಅವರು ಹಂಚಿಕೊಂಡಿದ್ದಾರೆ.
ಇದೀಗ ನೀವು ಕಾಯುತ್ತಿರುವ ಬಿಗ್ ಬಾಸ್‌ನ ಮನೆಯ ಹೊಚ್ಚ ಹೊಸ ಥೀಮ್, ಲಿವಿಂಗ್ ಏರಿಯಾ, ಡೈನಿಂಗ್, ಕಿಚನ್ ಏರಿಯಾ ಹೀಗೆ ಮನೆಯ ಪ್ರತಿ ಮೂಲೆ ಮೂಲೆಯೂ ಏನಾದರೊಂದು ವಿಶೇಷತೆಯಿಂದ ಕೂಡಿರುತ್ತೆ. ಮನೆಯ ವಾತಾವರಣ ಒಂದು ಸಂದೇಶ ಸಾರುವಂತಿರುತ್ತೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಮನೆ ಕೂಡ ವಿಶೇಷವಾಗಿರಲಿದೆ.
ಆದರೆ ಬಿಗ್ ಬಾಸ್ 10 ರಿಯಾಲಿಟಿ ಶೋನ ಪ್ರೀಮಿಯರ್ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.