Anand Mahindra- Praggnanandha: ಬಿಸಿನೆಸ್ ಟೈಕೂನ್ ಆನಂದ್ ಮಹೀಂದ್ರಾ ಯುವ ಚೆಸ್ ತಾರೆ ಪ್ರಜ್ಞಾನಂದನ ತಂದೆ ತಾಯಿಗೆ ನೀಡಿದ್ರು ಬಿಗ್ ಗಿಫ್ಟ್!!!
Sports news Anand Mahindra To Gift An Electric Car To Praggnanandhaa Parents
Anand Mahindra- Praggnanandha: ಅಜರ್ಬೈಜಾನ್ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಯುವ ಚೆಸ್ ತಾರೆ ಆರ್ ಪ್ರಜ್ಞಾನಂದ (Anand Mahindra- Praggnanandha) ರನ್ನರ್ಅಪ್ ಆಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್‌ಸೆನ್ (Magnus Carlsen) ಎದುರು ಸೋಲನ್ನಪ್ಪುವ ಮೂಲಕ ರನ್‌ಅಪ್ ಆಗಿದ್ದಾರೆ.
ಸದ್ಯ ಭಾರತದ ಯುವ ಚೆಸ್ ತಾರೆ ಆರ್ ಪ್ರಜ್ಞಾನಂದ ಅವರ ತಂದೆ ಮತ್ತು ತಾಯಿಗೆ ಬಿಸಿನೆಸ್ ಟೈಕೂನ್ ಆನಂದ್ ಮಹೀಂದ್ರಾ ಅವರು ಬಂಪರ್ ಗಿಫ್ಟ್ ಒಂದನ್ನು ನೀಡಿದ್ದಾರೆ. ಹೌದು, ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮಿ ಮತ್ತು ತಂದೆ ರಮೇಶ್ ಬಾಬು ಅವರಿಗೆ ಮಹೀಂದ್ರಾ ಎಕ್ಸ್‌ಯುವಿ 400 ಇವಿ (XUV4OO EV ) ಕಾರ್ ಗಿಫ್ಟ್ ನೀಡುವುದಾಗಿ ಪ್ರಕಟಿಸಿದ್ದಾರೆ.
18 ವರ್ಷದ ಭಾರತದ ಹುಡುಗನ ಸಾಧನೆಯನ್ನು ಪ್ರಧಾನಿ ಮೋದಿಯಿಂದ (Narendra modi) ಹಿಡಿದು ಪ್ರತಿಯೊಬ್ಬರು ಶ್ಲಾಘಿಸಿದ್ದರು. ಸಾಕಷ್ಟು ಜನರು ಈತನ ಸಾಧನೆಗೆ ಹಾಡಿ ಹೊಗಳಿದ್ದಾರೆ. ಅದರಂತೆ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಬಾಲಕನ ಸಾಧನೆಯನ್ನು ಕೊಂಡಾಡಿದ್ದರು.
ಉದ್ಯಮಿಯ ಟ್ವೀಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಹೆಚ್ಚಿನ ಜನರು ಪ್ರಜ್ಞಾನಂದಗೆ ಥಾರ್ ಕಾರ್ ಗಿಫ್ಟ್ ನೀಡುವಂತೆ ಮನವಿ ಮಾಡಿದ್ದರು. ಇದೀಗ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಆನಂದ ಮಹೀಂದ್ರಾ, ಪ್ರಜ್ಞಾನಂದನ ಬದಲಿಗೆ ಅವರ ಅಪ್ಪ-ಅಮ್ಮನಿಗೆ ಎಲೆಕ್ಟ್ರಿಕಲ್ ಎಕ್ಸ್‌ಯುವಿ 400 (electric SUV 400) ಕಾರ್ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಆತನ ಮನೆಯವರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ: Viral Video: ಮಹಿಳೆಯ ಕಾಲಿಗೆ ಸುತ್ತಿಕೊಂಡು ಮೂರು ಗಂಟೆ ಹೆಡೆ ಎತ್ತಿ ನಿಂತು ನೋಡಿದ ಹಾವು! ಅಷ್ಟಕ್ಕೂ ಆಕೆ ಮಾಡಿದ್ದೇನು?