Dakshina Kannada: ನರಿಮೊಗರು : ಬಾವಿಗೆ ಬಿದ್ದು ಕಾಡುಕೋಣ ಮೃತ್ಯು

Dakshina Kannada news A wild buffalo fell into a well and died in Narimogaru

Dakshina Kannada : ಕಾಡುಕೋಣವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಆ.19ರಂದು ನರಿಮೊಗರು(Narimogaru) ಐಟಿಐ ಮೈದಾನದ ಪಕ್ಕದಲ್ಲಿ ನಡೆದಿದೆ (Dakshina Kannada). ಪ್ರಕಾಶ್ ಎಂಬುವರ ಜಾಗದಲ್ಲಿರುವ ಬಾವಿಯಲ್ಲಿ ಬೆಳಗ್ಗಿನ ಹೊತ್ತು ಕಾಡುಕೋಣವೊಂದು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಕ್ರೇನ್ ಮುಖಾಂತರ ಕಾಡುಕೋಣವನ್ನು ಬಾವಿಯಿಂದ ಮೇಲಕೆತ್ತಿದ್ದಾರೆ.

ಮೃತಪಟ್ಟ ಕಾಡುಕೋಣಕ್ಕೆ ಅಂದಾಜು 4 ರಿಂದ 5 ವರ್ಷ ಪ್ರಾಯವಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಎಸಿಎಫ್ ಸುಬ್ಬಯ್ಯ ನಾಯ್ಕ, ಆರ್‌ಎಫ್ ಕಿರಣ್, ಡಿವೈಆರ್ ಎಫ್ ಕುಮಾರಸ್ವಾಮಿ ಹಾಗೂ ಪ್ರಸಾದ್ ಕೆ.ಜೆ, ಬೀಟ್ ಫಾರೆಸ್ಟ್ ಸತ್ಯನ್ ಡಿ.ಜಿ, ದೀಪಕ್, ಚಿದಾನಂದ, ಅರಣ್ಯ ವೀಕ್ಷಕ ಶೀನಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಊರವರು ಸಹಕಾರ ನೀಡಿದರು.

ಇದನ್ನೂ ಓದಿ: Tomato Price Down: ಪಾತಾಳಕ್ಕೆ ಇಳಿಯುತ್ತಿರುವ ಟೊಮ್ಯಾಟೋ ಬೆಲೆ: ಕೆಜಿಗೆ 10 ಕನಿಷ್ಠಕ್ಕೆ ಇಳಿಯೋ ಹೊತ್ತು…

Comments are closed.