Mohammad Shami: ವಿಶ್ವಕಪ್ ಕ್ರಿಕೆಟ್ ಮುನ್ನವೇ ಕ್ರಿಕೆಟರ್ ಬಂಧನ ಸಾಧ್ಯತೆ !

latest news Mohammad Shami Cricketer may be arrested before the World Cup

Mohammad Shami: ಏಕದಿನ ವಿಶ್ವಕಪ್‌ಗೆ (ICC World Cup 2023) ಇನ್ನು ಮೂರು ತಿಂಗಳು ಬಾಕಿ ಅಷ್ಟೇ. ಹೀಗಿರುವಾಗಲೇ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ (Mohammad Shami) ಸಂಕಷ್ಟ ಎದುರಾಗಿದೆ.

 

ಹೌದು, ಪತ್ನಿ ಹಸಿನ್ ಜಹಾನ್(Hasin Jahan), ಶಮಿ ವಿರುದ್ಧ ನ್ಯಾಯಲಯದಲ್ಲಿ ಹೂಡಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಮಿಯನ್ನು ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋಲ್ಕತಾ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಶಮಿ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಜಹಾನ್ ಮೇ ತಿಂಗಳಲ್ಲಿ ಶಮಿ ಮಡದಿ ಹಸಿನ್ ಜಹಾನ್ ಅವರು ಸುಪ್ರೀಂ ಕೋರ್ಟ್ (Supreme Court) ಮೆಟಿಲೇರಿದ್ದು ಸವೋರ್ಚ ನ್ಯಾಯಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.

ಟೀಂ ಇಂಡಿಯಾ(team India) ವೇಗಿ ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ಹಸೀನ್ ಜಹಾನ್ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯ ಪ್ರಕರಣವು ನಾಲ್ಕು ವರ್ಷಗಳಿಂದ ವಿಚಾರಣೆ ನಡೆದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಒಂದು ತಿಂಗಳೊಳಗೆ ನಿರ್ಧರಿಸುವಂತೆ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್(supreme court) ಗುರುವಾರ ಆದೇಶ ನೀಡಿದೆ. ಅಲ್ಲದೆ ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥವಾಗದಿದ್ದರೆ ಬಂಧನ ಅಮಾನತುಗೊಳಿಸುವ ಬಗ್ಗೆ ಚಿಂತನೆ ನಡೆಸುವಂತೆ ಆದೇಶಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆಯ ಮಧ್ಯಂತರ ತಡೆಯಾಜ್ಞೆ 2019 ರ ನವೆಂಬರ್ 2 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಗಮನಿಸಿದ ನಂತರ ಈ ತೀರ್ಪನ್ನು ನೀಡಿತು.

ಮೊಹಮ್ಮದ್ ಶಮಿ ಪತ್ನಿ ಹಸೀನ್‌ ಜಹಾನ್, 2018ರಲ್ಲಿ ತಮ್ಮ ಪತಿ ಶಮಿ ತಮ್ಮ ಮೇಲೆ ಕ್ರೂರವಾಗಿ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ (police station) ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಅಲಿಪುರ ಸೆಷನ್ಸ್ ನ್ಯಾಯಾಲಯ ಆಗಸ್ಟ್ 29, 2019 ರಂದು, ಶಮಿಯನ್ನು ಬಂಧಿಸುವಂತೆ ಆದೇಶಿಸಿತು.

ಈ ತೀರ್ಪನ್ನು ಪ್ರಶ್ನಿಸಿ ಶಮಿ ಅವರು ಕೆಳ ನ್ಯಾಯಾಲಯದಲ್ಲಿ ಪ್ರತಿ-ಅಪೀಲು ಸಲ್ಲಿಸಿದ್ದರಿಂದಾಗಿ, ನ್ಯಾಯಾಲಯವು ನವೆಂಬರ್ 2, 2019 ರವರೆಗೆ ಶಮಿಯವರ ಬಂಧನವನ್ನು ತಡೆಹಿಡಿಯಿತು. ಅಂದಿನಿಂದ ಈ ಪ್ರಕರಣವು ಬಹಳ ದಿನಗಳಿಂದ ವಿಚಾರಣೆಯಲ್ಲಿದೆ. ಈ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಹಸಿನ್ ಸುಪ್ರೀಂ ನ್ಯಾಯಾಲಯದ ಮೊರೆ ಹೋಗಿದ್ದರು.

 

ಇದನ್ನು ಓದಿ: Old Pension: ಹಳೆ ಪಿಂಚಣಿ ಬಗ್ಗೆ ಹೊಸ ಅಪ್ಡೇಟ್, ಯಾವಾಗ ಜಾರಿ ನಿರೀಕ್ಷೆ?! 

Leave A Reply

Your email address will not be published.