Nita Ambani Saree: ಆನೆ ದಂತ, ಬಂಗಾರದಿಂದ ಮಾಡಿದ ರೇಷ್ಮೆ ಸೀರೆಯುಟ್ಟ ನೀತಾ ಅಂಬಾನಿ ; ಈ ಸೀರೆಯನ್ನು ತಯಾರಿಸಲು ಎಷ್ಟು ಸಮಯ ಬೇಕಾಯಿತು ಗೊತ್ತಾ?!

Nita Ambani wearing a silk saree made of elephant ivory and gold

Nita Ambani saree: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಅಮೆರಿಕಾ ಭೇಟಿಯ ಸಂದರ್ಭದಲ್ಲಿ ಅಮೆರಿಕಾ (American) ಅಧ್ಯಕ್ಷ ಜೋ ಬೈಡೆನ್ (President Joe Biden) ಜೊತೆ ಔತಣಕೂಟದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ವಿಶ್ವದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಡಿಸೈನರ್ ರಾಲ್ಫ್ ಲಾರೆನ್, ಟೆನಿಸ್ ದಂತಕಥೆ ಬಿಲ್ಲಿ ಜೀನ್ ಕಿಂಗ್, ಹಾಗೆಯೇ ಸುಂದರ್ ಪಿಚೈ ಮತ್ತು ಅವರ ಪತ್ನಿ ಅಂಜಲಿ ಪಿಚೈ, ರಿಲಯನ್ಸ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಮುಕೇಶ್ ಅಂಬಾನಿ ( Mukesh Ambani) ಮತ್ತು ಅವರ ಪತ್ನಿ ನೀತಾ ಅಂಬಾನಿ (Nita Ambani saree) ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ಅತಿಥಿಗಳಾಗಿ ಭಾಗವಹಿದ್ದರು.

ಭಾರತದ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಪತ್ನಿ ನೀತಾ ಅಂಬಾನಿ ಔತಣಕೂಟದಲ್ಲಿ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ನೀತಾ ಅಂಬಾನಿ ಆಕರ್ಷಣೀಯವಾದ ತುಂಬಾ ಸುಂದರವಾದ ಸೀರೆಯನ್ನು ಧರಿಸಿದ್ದರು. ಸದ್ಯ ಈ ಸೀರೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸೀರೆ ಯಾವುದರಿಂದ ಮಾಡಿದ್ದು? ಎಷ್ಟು ಸಮಯ ತೆಗೆದುಕೊಂಡಿತು? ಎಂಬುದರ ಬಗ್ಗೆ ತಿಳಿಸಿದ್ರೆ ನೀವು ಶಾಕ್ ಆಗ್ತಿರಾ!!

ಪ್ರತಿ ಕಾರ್ಯಕ್ರಮದಲ್ಲೂ ನೀತಾ ಅಂಬಾನಿ ತನ್ನ 60ನೇ ವಯಸ್ಸಿಗೆ ಸುಂದರಿ ಯುವತಿಯಂತೆ ಕಾಣುತ್ತಾರೆ. ಅವರ ಮುಖ ಹೊಳೆಯುತ್ತಿರುತ್ತದೆ‌. ಧರಿಸುವ ಸೀರೆಗಳು ಕೋಟಿ ಬೆಳೆಬಾಳುತ್ತವೆ. ಸದ್ಯ ಔತಣಕೂಟದಲ್ಲಿ ಭಾಗಿಯಾದ ವೇಳೆ ನೀತಾ ಅಂಬಾನಿ ಆನೆ ದಂತ ಮತ್ತು ಚಿನ್ನದಿಂದ ಮಾಡಿದ ಬನಾರಸಿ ರೇಷ್ಮೆ ಸೀರೆಯನ್ನು ಧರಿಸಿದ್ದರು.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಈ ಸೀರೆಯನ್ನು ತಯಾರಿಸಲು ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಭಾರತೀಯ ಜವಳಿ ಮತ್ತು ಕರಕುಶಲತೆಯನ್ನು ಉತ್ತೇಜಿಸುವ ರಿಲಯನ್ಸ್ ಫೌಂಡೇಶನ್‌ನಿಂದ ಸ್ಥಳೀಯವಾಗಿ ಈ ಸೀರೆ ತಯಾರಿಸಲ್ಪಟ್ಟಿದೆ. ಈ ಬನಾರಸಿ ಬ್ರೋಕೇಡ್ ಸಿಲ್ಕ್ ಸೀರೆಯನ್ನು ಕೈಯಿಂದ ತಯಾರಿಸಲಾಗಿದೆ.
ಸಂಪೂರ್ಣ ಸೀರೆಯು ಗೋಲ್ಡನ್ ಥ್ರೆಡ್‌ಗಳೊಂದಿಗೆ ಬ್ರೋಕೇಡ್ ಕೆಲಸವನ್ನು ಹೊಂದಿದೆ. ಸೀರೆಗೆ ಹೊಂದುವ ಡಬಲ್ ಲೇಯರ್ ಮುತ್ತಿನ ಹಾರ ನೀತಾ ಅಂಬಾನಿಯ ಸೌಂದರ್ಯವನ್ನು ದುಪ್ಪಟ್ಟು ಮಾಡಿದೆ.

ನೀತಾ ಅಂಬಾನಿ ಪ್ರಪಂಚದ ಅತ್ಯಂತ ದುಬಾರಿ ಸೀರೆಗಳನ್ನು (Nita ambani saree collections) ಧರಿಸುತ್ತಾರೆ. 100 ಕೋಟಿ ರೂಪಾಯಿ ಮೌಲ್ಯದ ನೈಜ ಡೈಮಂಡ್ ನೆಕ್ಲೇಸ್ ಗಳನ್ನು ಧರಿಸುತ್ತಾರೆ. ನೀತಾ ಅಂಬಾನಿ ಅವರು ವಿಶ್ವದ ಅತ್ಯುತ್ತಮ ಬ್ರ್ಯಾಂಡ್ ಶೂಗಳನ್ನು ಧರಿಸುತ್ತಾರೆ. ನೀತಾ ಅವರು ಒಮ್ಮೆ ಒಂದು ಪಾದರಕ್ಷೆ ಧರಿಸಿದರೆ ಮತ್ತೆ ಅದನ್ನು ಧರಿಸುವುದಿಲ್ಲ ಎಂದು ಹೇಳಲಾಗಿದೆ. ಅವರ ಶೂ ಸಂಗ್ರಹವು ಪೆಡ್ರೊ, ಜಿಮ್ಮಿ ಚೂ, ಗಾರ್ಸಿಯಾ ಮತ್ತು ಮಾರ್ಲಿನ್‌ನಂತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.

Leave A Reply

Your email address will not be published.