Fridge Door: ನಿಮ್ಮ ಮನೆಯ ಫ್ರಿಡ್ಜ್ ಡೋರ್ ಸೈಡ್‌ನಲ್ಲಿ ಕೊಳೆ ಅಂಟಿಕೊಂಡಿದೆಯೇ? ಇಲ್ಲಿದೆ ನೋಡಿ ಕೊಳೆ ಹೋಗಲಾಡಿಸುವ ಸೂಪರ್ ಐಡಿಯಾ!
Fridge door: ಸಾಮಾನ್ಯವಾಗಿ ಇಂದು ಪ್ರತಿಯೊಬ್ಬರ ಮನೆಯಲ್ಲಿ ರೆಫ್ರಿಜರೇಟರ್ ಇದ್ದೇ ಇರುತ್ತದೆ. ಪಟ್ಟಣಗಳಿಂದ ಹಿಡಿದು ಹಳ್ಳಿ ಪ್ರದೇಶಗಳ ಪ್ರತಿ ಮನೆಯಲ್ಲೂ ಇದು ಕಾಣಸಿಗುತ್ತದೆ. ತಮಗಿಷ್ಟವಾದ ಆಹಾರ, ತಿಂಡಿ ತಿನಿಸುಗಳು, ತರಕಾರಿ – ಹಣ್ಣು ಹಂಪಲುಗಳು ಬೇಗ ಹಾಳಾಗದಂತೆ ತಡೆಯಲು ಫ್ರಿಡ್ಜ್’ನಲ್ಲಿ ಸಂಗ್ರಹಿಸುತ್ತಾರೆ.
ಆಹಾರ ವಿಷವಾಗುವುದನ್ನು ತಡೆಯಲು ಫ್ರಿಡ್ಜ್ ಅನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಶುಚಿಯಾಗಿರದ ಫ್ರಿಡ್ಜ್ ಕೀಟಾಣುಗಳಿಗೆ ವಾಸಸ್ಥಾನವಾಗುತ್ತದೆ. ಮುಖ್ಯವಾಗಿ ಫ್ರಿಡ್ಜ್ ಬಾಗಿಲಿನ ಮೇಲೆ ಹಾಕಲಾಗಿರುವ ರಬ್ಬರ್ ನಲ್ಲಿ ಅತಿ ಹೆಚ್ಚು ಕೊಳೆ ಆಗಿರುತ್ತದೆ. ಇದನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಅನೇಕ ಮಂದಿ ಈ ಕೊಳಕು ರಬ್ಬರ್ ಅನ್ನು ಸ್ವಚ್ಛಗೊಳಿಸುವುದೇ ಇಲ್ಲ. ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಮನೆಯ ಫ್ರಿಡ್ಜ್ ಡೋರ್ (Fridge Door) ಸೈಡ್‌ನಲ್ಲಿ ಕೊಳೆ ಅಂಟಿಕೊಂಡಿದೆಯೇ? ಹಾಗಾದರೆ ಚಿಂತೆ ಬೇಡ ಸುಲಭವಾಗಿ ಕ್ಲೀನ್ ಮಾಡುವ ಸೂಪರ್ ಐಡಿಯಾ ಇಲ್ಲಿದೆ.
ವಿನೆಗರ್ ಮತ್ತು ನೀರು:
ಫ್ರಿಡ್ಜ್ ಬಾಗಿಲಿನ ರಬ್ಬರ್ ನಲ್ಲಿ ಅಂಟಿರುವ ಕೊಳೆಯನ್ನು ಸ್ವಚ್ಛಗೊಳಿಸಲು ವಿನೆಗರ್ ಮತ್ತು ನೀರನ್ನು ಬಳಸಬಹುದು. ಕೆಲವರು ಬ್ಲೀಚ್ ಮತ್ತು ಅಮೋನಿಯದಂತಹ ವಸ್ತುಗಳನ್ನು ಉಪಯೋಗಿಸಿ ಸ್ವಚ್ಛಗೊಳಿಸುತ್ತಾರೆ. ಆದರೆ ಇವುಗಳನ್ನು ಸರಿಯಾಗಿ ಉಪಯೋಗಿಸದಿದ್ದರೆ ಗ್ಯಾಸ್ಕೆಟ್ ವಸ್ತುಗಳನ್ನು ಗಟ್ಟಿಯಾಗಿಸುತ್ತದೆ. ಇದರಿಂದ ಫ್ರಿಡ್ಜ್ ನ ಬಾಗಿಲಲ್ಲಿರುವ ರಬ್ಬರ್ ಗೆ ಹಾನಿ ಆಗುತ್ತದೆ. ಹಾಗಾಗಿ ಬ್ಲೀಚ್ ನ ಬದಲು ವಿನೆಗರ್ ದ್ರಾವಣವನ್ನು ಬಳಸಿರಿ.
ಫ್ರಿಡ್ಜ್ ಡೋರ್ ಸೈಡ್ ನಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಲು ನೀವು ಒಂದು ಪಾತ್ರೆಗೆ ನೀರು ಮತ್ತು ಐದರಿಂದ ಆರು ಹನಿ ವಿನೆಗರ್ ಅನ್ನು ಸೇರಿಸಿ. ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿದ ನಂತರ ಸ್ಪ್ರೇ ಮಾಡಿ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಅದು ತಕ್ಷಣವೇ ಸ್ವಚ್ಛ ಆಗುತ್ತದೆ.
ಅಡುಗೆ ಸೋಡಾ ಮತ್ತು ನಿಂಬೆರಸ:
ಗ್ಯಾಸ್ಕೆಟ್ ಅನ್ನು ನಿಂಬೆರಸ ಮತ್ತು ಅಡಿಗೆ ಸೋಡದಿಂದಲೂ ಸ್ವಚ್ಛಗೊಳಿಸಬಹುದು. ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾವನ್ನು ನಿಂಬೆ ರಸದೊಂದಿಗೆ ಮಿಕ್ಸ್ ಮಾಡಿ, ಬಟ್ಟೆಯ ಸಹಾಯದಿಂದ ಫ್ರಿಡ್ಜ್ ನಲ್ಲಿರುವ ರಬ್ಬರ್ ಮೇಲೆ ಐದು ನಿಮಿಷ ಉಜ್ಜಿರಿ ನಂತರ ಶುಚಿಯಾದ ನೀರಿನಿಂದ ತೊಳೆಯಿರಿ, ಹೀಗೆ ಮಾಡುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.
ಟೂತ್ ಪೇಸ್ಟ್: ಫ್ರಿಡ್ಜ್ ನಲ್ಲಿರುವ ಅಂಟಿರುವ ಕೊಳೆಯನ್ನು ತೆಗೆಯಲು ಟೂತ್ಪೇಸ್ಟ್ ಅನ್ನು ಬಳಸಬಹುದು. ಇದಕ್ಕಾಗಿ ಹಳೆಯ ಟೂತ್ ಬ್ರಷ್ ಅನ್ನು ಬಳಸಬಹುದು. ಟೂತ್ ಬ್ರಷ್ ಮೇಲೆ ಪೇಸ್ಟ್ ಅನ್ವಯಿಸಿ ರಬ್ಬರ್ಗಳ ಮೇಲೆ ಉಜ್ಜಿದರೆ ಸಾಕು, ಕ್ಷಣಮಾತ್ರದಲ್ಲಿ ಕೊಳೆ ಮಾಯವಾಗುತ್ತದೆ.