V Somanna: ನನ್ನ ಸೋಲಿಗೆ ಅವರೇ ಕಾರಣ, ಅವರಿಗೆ ಚಪ್ಪಲಿಯಲ್ಲಿ ಹೊಡಿಯಿರಿ; ಯಡಿಯೂರಪ್ಪ ಆಪ್ತರ ವಿರುದ್ಧ ಸೋಮಣ್ಣ ಕಿಡಿ!!
V Somanna is angry against Yeddyurappa aides
V Somanna: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಚಿವ ವಿ.ಸೋಮಣ್ಣ (V Somanna) ಹೀನಾಯ ಸೋಲನ್ನು ಕಂಡಿದ್ದಾರೆ. ಈ ಬಗ್ಗೆ ಸೋಮಣ್ಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆಯೂ ಸೋಲಿನ ಹಿನ್ನೆಲೆ ಹೈಕಮಾಂಡ್ (High Command) ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇದೀಗ ಯಡಿಯೂರಪ್ಪ ಆಪ್ತರ ವಿರುದ್ಧ ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಏರ್ಪಡಿಸಲಾಗಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು,“ ನಾನೇನು ದಡ್ಡ ಅಲ್ಲ, 45 ವರ್ಷ ರಾಜಕೀಯ ಮಾಡಿದ್ದೇನೆ. ಇಲ್ಲಿರುವ ಒಬ್ಬೊಬ್ಬರು 10 ಮತಗಳನ್ನು ಹಾಕಿಸಿದ್ದರೂ ನಾನು ಗೆಲ್ಲುತ್ತಿದ್ದೆ. ಆ ಒಬ್ಬ ಲೋಫರ್‌ಗಾಗಿ ನನ್ನ ಸೋಲಿಸಿದಿರಿ. ನಾನು ಸೋಲಲು ನನ್ನದೇ ಸಮುದಾಯ ಕಾರಣವಾಯಿತು. ಪಕ್ಷದ್ರೋಹ ಮಾಡಿದವರಿಗೆ ಚಪ್ಪಲಿ ತಗೊಂಡು ಹೊಡಿಯಿರಿ” ಎಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ (B. S Yediyurappa) ಆಪ್ತ ರುದ್ರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುರಿಯುವ ಮಳೆಯಲ್ಲಿ ಪ್ರಚಾರ ಮಾಡಿದ್ದೆ. ಆಗ ನಮಗೋಸ್ಕರ ಹಲವರು ಹೊಡೆದಾಡಿದ್ದಾರೆ. ಈಗ ಅವರ ಗತಿ ಏನು?. 12 ಚುನಾವಣೆ ಎದುರಿಸಿರುವ ನನಗೆ ಯಾವತ್ತೂ ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ. ನನ್ನ ಸೋಲಿಗೆ ಯಾರು ಕಾರಣ ಅಂತ ಗೊತ್ತಿದೆ. ಆ ಬಗ್ಗೆ ನನ್ನಲ್ಲಿ ಬೇಕಾದಷ್ಟು ಮಾಹಿತಿ ಇದೆ ಎಂದು ಹೇಳಿದರು.
ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಪಕ್ಷದ ಆದೇಶದ ಮೇರೆಗೆ ಇಲ್ಲಿಗೆ ಬಂದೆ. ಆದರೆ, ಒಬ್ಬನಿಗೋಸ್ಕರ ಇಡೀ ಜಿಲ್ಲೆಯನ್ನು ಹಾಳು ಮಾಡಿದರು. ಎಂಟು, ಹತ್ತು ಜನರ ಪಾಪದ ಕೆಲಸದಿಂದ ಮನೆ ಹಾಳಾಗಿದೆ. ಮನೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಜೊತೆಯಲ್ಲಿ ಇದ್ದುಕೊಂಡು ಕತ್ತು ಕೊಯ್ದಿದ್ದಾರೆ. ಮುಂಚೂಣಿ ನಾಯಕರೇ ಇದಕ್ಕೆ ಕಾರಣ ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: Rashmika Mandanna – yash: ಯಶ್ ಬಗ್ಗೆ ಒಂದೇ ಪದದಲ್ಲಿ ವಿವರಿಸಿದ ರಶ್ಮಿಕಾ ಮಂದಣ್ಣ! ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೆ