Chicken : ಕೋಳಿ ಪ್ರಾಣಿಯೋ, ಪಕ್ಷಿಯೋ? ಹೈಕೋರ್ಟ್ ಪ್ರಶ್ನೆಗೆ ಈ ರಾಜ್ಯ ನೀಡಿದ ಉತ್ತರ ಏನು ನೋಡಿ!

chicken : ಇವರೆಗೂ ಇಲ್ಲದ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಅದೇನೆಂದರೆ, ಕೋಳಿ ಪ್ರಾಣಿಯೋ? ಅಥವಾ ಪಕ್ಷಿಯೋ? ಎಂಬುದಾಗಿದೆ. ಯಾರನ್ನಾದರೂ ಕೇಳಿದರೆ ಕೋಳಿ (chicken) ಪಕ್ಷಿ ಎಂದೇ ಹೇಳುತ್ತಾರೆ. ವಾಸ್ತವ ಕೂಡ ಅದೇ ಆಗಿದೆ. ಆದರೆ, ಈ ಪ್ರಶ್ನೆಗೆ ಗುಜರಾತ್ ಸರ್ಕಾರ ಏನು ಉತ್ತರ ನೀಡಿದೆ ಗೊತ್ತಾ?

ಈ ಬಗ್ಗೆ ಗುಜರಾತ್ (Gujarat) ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಇದಕ್ಕೆ ಗುಜರಾತ್ ಸರ್ಕಾರ ಉತ್ತರ ನೀಡಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಡಿಯಲ್ಲಿ ಕೋಳಿಯನ್ನು ಒಂದು ಪ್ರಾಣಿಯನ್ನಾಗಿ ಪರಿಗಣಿಸುತ್ತೇವೆ ಎಂದು ಸರ್ಕಾರ ಹೇಳಿದೆ.

ಕೋಳಿಗಳನ್ನು ಕೊಲ್ಲುವುದು ಸಾಮಾನ್ಯ. ಎಲ್ಲರೂ ಕಡಿದ ಕೋಳಿಯನ್ನು ಅಂಗಡಿಯಿಂದ ತಂದು ಸಾಂಬಾರು ಮಾಡಿ ತಿನ್ನುತ್ತಾರೆ. ಪ್ರಾಣಿ ದಯಾ ಸಂಘ ಮತ್ತು ಅಹಿಂಸಾ ಮಹಾಸಂಘವು ಅಂಗಡಿಗಳಲ್ಲಿ ಕೋಳಿಗಳನ್ನು ಕೊಲ್ಲುವುದನ್ನು ನಿಷೇಧಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಹಾಗೇ ಕಸಾಯಿಖಾನೆಗಳಲ್ಲಿ ಮಾತ್ರ ಕೋಳಿಗಳನ್ನು ಕಡಿಯಬೇಕು ಎಂದು ಮನವಿ ಮಾಡಿತ್ತು.

ಸರ್ಕಾರ (government) ಕೂಡ ಸಂಘಟನೆಯ ಮನವಿ ಸ್ವೀಕರಿಸಿ, ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳು ಮಾಂಸದ ಅಂಗಡಿಗಳ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ್ದವು. ಇದು ಕೋಳಿ ಅಂಗಡಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದು, ಕೋಳಿ ವರ್ತಕರ ಸಂಘವು ಸರ್ಕಾರದ ಈ ನಿಲುವಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಮನೀಶ ಲವಕುಮಾರ್ ಮಾತನಾಡಿ, ಕೋಳಿಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಪ್ರಕಾರ ಪ್ರಾಣಿಗಳ ವರ್ಗಕ್ಕೆ ಸೇರುತ್ತದೆ. ಆದರೆ, ಮೀನನ್ನು ಈ ವರ್ಗಕ್ಕೆ ಸೇರಿಸಿಲ್ಲ ಎಂದು ಹೇಳಿದರು. ಕೋಳಿ ಅಂಗಡಿಗಳ ಪರ ವಕೀಲೆ ಕವಿನಾ ಅವರು, ಕಸಾಯಿಖಾನೆಗಳಲ್ಲಿ ಕೋಳಿಗಳನ್ನು ವಧೆ ಮಾಡುವುದು ಪ್ರಾಯೋಗಿಕವಲ್ಲ ಎಂದು ಹೇಳಿದ್ದಾರೆ. ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಪಶುವೈದ್ಯರ ಪ್ರಮಾಣಪತ್ರ ಬೇಕು ಎಂದಿದ್ದಾರೆ.

ಒಟ್ಟಾರೆ ಕೋಳಿ ಪ್ರಾಣಿಯೋ, ಪಕ್ಷಿಯೋ? ಎಂಬ ಚರ್ಚೆ ಕುತೂಹಲ ಮೂಡಿಸಿದ್ದಲ್ಲದೆ, ಹೊಸ ಕ್ರಾಂತಿ ಹುಟ್ಟಿಸುತ್ತಿದೆ. ಒಂದು ವೇಳೆ ಕೋಳಿ ಪ್ರಾಣಿ ಎಂದು ಸಾಬೀತಾದರೆ, ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಅಂಗಡಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

Leave A Reply

Your email address will not be published.