CBSE Model Paper : CBSE ವಿದ್ಯಾರ್ಥಿಗಳೇ ಇತ್ತ ಗಮನಿಸಿ! 10, 12 ತರಗತಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ!

CBSE Model Paper : ಈಗಾಗಲೇ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿಗಳಿಗೆ ಎಲ್ಲಾ ವಿಷಯಗಳ ಮಾದರಿ ಪತ್ರಿಕೆಗಳನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು 2023-24 ರ ಸಿಬಿಎಸ್‌ಇ (CBSE MOdel Paper )ಮಾದರಿ ಪತ್ರಿಕೆಗಳು ಅಧಿಕೃತ ವೆಬ್‌ಸೈಟ್ – cbseacademic.nic.in ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

CBSE ಮಂಡಳಿಯು ಮಾದರಿ ಪತ್ರಿಕೆಗಳನ್ನು pdf ರೂಪದಲ್ಲಿ ಬಿಡುಗಡೆ ಮಾಡಿದ್ದು, ಸಿಬಿಎಸ್‌ಇ ಮಾದರಿ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಯ ಮಾದರಿ ಮತ್ತು ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಬಗ್ಗೆ ಸಂಕ್ಷಿಪ್ತ ಕಲ್ಪನೆಯನ್ನು ನೀಡುತ್ತದೆ ಎಂದು ಮಂಡಳಿ ತಿಳಿಸಿದೆ.

ಮಂಡಳಿಯು ಸಾಮಾನ್ಯವಾಗಿ ಮಾದರಿ ಪತ್ರಿಕೆಯ ಆಧಾರದ ಮೇಲೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬೋರ್ಡ್‌ಗಳಿಗೆ ತಯಾರಿ ಮಾಡುವಾಗ ಇದನ್ನು ಮೊದಲು ಪರಿಶೀಲಿಸುವುದು ಉತ್ತಮ.

CBSE 10, 12 ಮಾದರಿ ಪೇಪರ್ಸ್ 2023-24 ನೋಟಿಕ್ PDF ಅನ್ನು ಪರಿಶೀಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

CBSE ಮಾದರಿ ಪೇಪರ್ಸ್ 2023- 24ರ 10 ನೇ ತರಗತಿಗಾಗಿ ಡೌನ್‌ಲೋಡ್ ಲಿಂಕ್;
ವಿದ್ಯಾರ್ಥಿಗಳು ಕೆಲವು ವಿಷಯಗಳಿಗೆ 10 ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಲು ಇಲ್ಲಿ ಪರಿಶೀಲಿಸಬಹುದು:

ವಿಜ್ಞಾನ- ಇಲ್ಲಿ ಡೌನ್‌ಲೋಡ್ ಮಾಡಿ
ಇಂಗ್ಲಿಷ್ (ಭಾಷೆ ಮತ್ತು ಸಾಹಿತ್ಯ)- ಇಲ್ಲಿ ಡೌನ್‌ಲೋಡ್ ಮಾಡಿ
ಗಣಿತ (ಮೂಲ)- ಇಲ್ಲಿ ಡೌನ್‌ಲೋಡ್ ಮಾಡಿ
ಗಣಿತ (ಪ್ರಮಾಣಿತ)- ಇಲ್ಲಿ ಡೌನ್‌ಲೋಡ್ ಮಾಡಿ
ಸಂಸ್ಕೃತ- ಇಲ್ಲಿ ಡೌನ್‌ಲೋಡ್ ಮಾಡಿ

CBSE ಮಾದರಿ ಪೇಪರ್ಸ್ 2023- 24ರ 12 ನೇ ತರಗತಿಗಾಗಿ ಡೌನ್‌ಲೋಡ್ ಲಿಂಕ್;
ಎಲ್ಲಾ ಮೂರು ಸ್ಟ್ರೀಮ್‌ಗಳ ಕೆಲವು ವಿಷಯಗಳಿಗಾಗಿ CBSE 12 ನೇ ತರಗತಿಯ ಮಾದರಿ ಪೇಪರ್‌ಗಳನ್ನು ಕೆಳಗೆ ಪರಿಶೀಲಿಸಿ :

ಗಣಕ ಯಂತ್ರ ವಿಜ್ಞಾನ- ಇಲ್ಲಿ ಡೌನ್‌ಲೋಡ್ ಮಾಡಿ
ಇಂಗ್ಲೀಷ್ ಕೋರ್- ಇಲ್ಲಿ ಡೌನ್‌ಲೋಡ್ ಮಾಡಿ
ಇಂಗ್ಲೀಷ್ ಎಲೆಕ್ಟಿವ್- ಇಲ್ಲಿ ಡೌನ್‌ಲೋಡ್ ಮಾಡಿ
ಇನ್ಫರ್ಮ್ಯಾಟಿಕ್ಸ್ ಅಭ್ಯಾಸಗಳು- ಇಲ್ಲಿ ಡೌನ್‌ಲೋಡ್ ಮಾಡಿ
ಸಮಾಜಶಾಸ್ತ್ರ- ಇಲ್ಲಿ ಡೌನ್‌ಲೋಡ್ ಮಾಡಿ

ಜೀವಶಾಸ್ತ್ರ- ಇಲ್ಲಿ ಡೌನ್‌ಲೋಡ್ ಮಾಡಿ

CBSE ಮಾದರಿ ಪೇಪರ್ಸ್ 2024 ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡುವ ವಿಧಾನ :
CBSE ಎಲ್ಲಾ ವಿಷಯಗಳ ಮಾದರಿ ಪತ್ರಿಕೆಗಳನ್ನು pdf ರೂಪದಲ್ಲಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೋಡ್‌ನಲ್ಲಿ ಡೌನ್‌ಲೋಡ್ ಮಾಡಬಹುದು. CBSE ಮಾದರಿ ಪತ್ರಿಕೆಗಳನ್ನು 2023- 24 ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಈ ಹಂತಗಳನ್ನೂ ಅನುಸರಿಸಬಹುದು-

ಹಂತ 1 – CBSE ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ – cbseacademic.nic.in.
ಹಂತ 2 – ಮುಖಪುಟದಲ್ಲಿ, 10ನೇ 12ನೇ ತರಗತಿಗಳಿಗೆ CBSE ಮಾದರಿ ಪತ್ರಿಕೆಗಳನ್ನು ಪರಿಶೀಲಿಸಿ.
ಹಂತ 3 – ಪಿಡಿಎಫ್ ಫೈಲ್ ಪರದೆಯ ಮೇಲೆ ಕಾಣಿಸುತ್ತದೆ.
ಹಂತ 4 – ಈಗ ಕ್ಲಿಕ್ ಮಾಡಿ – ಕ್ಲಾಸ್ X ಅಥವಾ XII qಮಾದರಿ ಪೇಪರ್.
ಹಂತ 5 – ಹೊಸ ಪುಟವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 6 – ಈಗ, ಆಯಾ ವಿಷಯವಾರು ಪಿಡಿಎಫ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಡೌನ್‌ಲೋಡ್ ಮಾಡಿ.

ಸದ್ಯ CBSE ಬೋರ್ಡ್ ಫಲಿತಾಂಶ ಬಗ್ಗೆ ಯಾವುದೇ ಅಧಿಕೃತ ಅಪ್‌ಡೇಟ್ ಮಾಹಿತಿ ಇರುವುದಿಲ್ಲ . ಆದರೆ ಅಂದಾಜು ಪ್ರಕಾರ ಮೇ/ಜೂನ್ ವೇಳೆಗೆ ಘೋಷಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು CBSE ಬೋರ್ಡ್ ಫಲಿತಾಂಶ 2023 – 24 ಅನ್ನು CBSE ಬೋರ್ಡ್ ಅಧಿಕೃತ ಮತ್ತು ಶೈಕ್ಷಣಿಕ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದಾಗಿದೆ.

 

 

 

 

Leave A Reply

Your email address will not be published.