Anjanadri Hill: 105 ಕೆಜಿ ತೂಕದ ಚೀಲ ಬೆನ್ನಿಗೆ ಹೇರಿಕೊಂಡು 570 ಮೆಟ್ಟಿಲು ಏರಿದ ಹನುಮ ಭಕ್ತ!

Anjanadri Hill: ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ 105 ಕೆಜಿ ತೂಕದ ( man climbed 570 steps of Anjanadri Hill 105 Kg rice bag )ಚೀಲ ಹೊತ್ತು ಅಸಾಧ್ಯವಾದ 570 ಮೆಟ್ಟಿಲು ಹತ್ತಿ ಹಠ ಯೋಗ ಮೆರೆದಿದ್ದಾರೆ. (Hanuma bhakt Hamumantappa)

ತನ್ನ ಭೀಮ ಭುಜದಲ್ಲಿ 105 ಕೆ.ಜಿಯ ಭಾರವನ್ನೂ, ತಲೆಯಲ್ಲಿ ಹನುಮನ ಭಕ್ತಿಯನ್ನೂ ತುಂಬಿಕೊಂಡು ಯಲಬುರ್ಗಾದ ತಾಲೂಕಿನ ಹಿರೇಮ್ಯಾಗೇರಿಯ ಯುವಕ ಹನುಮಂತಪ್ಪ ಬೆಟ್ಟಕ್ಕೆ ಪಾದ ಮಡಗಿದ್ದಾನೆ. ಹನುಮಂತಪ್ಪ ಪೂಜಾರ ಬರೋಬ್ಬರಿ 105 ಕೆಜಿ ತೂಕದ ಈ ಚೀಲ ಏರಿ ಅಂಜನಾದ್ರಿ ಬೆಟ್ಟ (Anjanadri Temple) ಏರಿ ಸಾಹಸ ಮೆರೆದಿದ್ದಾನೆ. ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು 570 ಮೆಟ್ಟಿಲು ಹತ್ತಿದ್ದಾರೆ. ಈ ಮೂಲಕ ಅಸಾಧ್ಯ ಅನ್ನಿಸುವ ಶಕ್ತಿ ಸಾಹಸ ಮೆರೆದಿದ್ದಾರೆ.

34 ವರ್ಷದ ಹನುಮಂತಪ್ಪ ಪೂಜಾರ  ಭಾನುವಾರ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಬೆಟ್ಟ ಏರುವುದನ್ನು ಆರಂಭಿಸಿ ಕೇವಲ 50 ನಿಮಿಷಗಳಲ್ಲಿ ಸರಸರನೆ 575 ಮೆಟ್ಟಿಲುಗಳನ್ನು ಹತ್ತಿ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮನ್ಯವಾಗಿ ಅಂಜನಾದ್ರಿ ಬೆಟ್ಟ ಹತ್ತುವುದಕ್ಕೆ ಜನ ಕಷ್ಟ ಪಡುತ್ತಾರೆ. ಸುಮಾರು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟ ಹತ್ತುವುದು, ಅದೂ ಈ ಬಿರು ಬೇಸಿಗೆಯಲ್ಲಿ ಸಾಮಾನ್ಯದ ಮಾತಲ್ಲ. ಆದ್ರೇ ಈ ಯುವಕ ಒಂದು ಕ್ವಿಂಟಾಲ್ ಗೂ ಮಿಗಿಲ ಭಾರದ ಚೀಲವನ್ನ ಬೆನ್ನ ಮೇಲೆ ಹೊತ್ತುಕೊಂಡು ಹತ್ತಿ ಎಲ್ಲರ ಹಣೆಯಲ್ಲಿ ಬೆವರು ಹರಿಸಿದ್ದಾನೆ. ಜನ ನಿಬ್ಬೆರಗಾಗಿ ನೋಡುತ್ತಿದ್ದಂತೆ ಹನುಮನ ಥರ ಹನುಮಂತಪ್ಪ ಪೂಜಾರ ಭಾರ ಎತ್ತಿ ಸಾಗಿದ್ದಾನೆ. ಕೈ ಬೀಸಿಕೊಂಡು ಹೋದರೂ ಬೆಟ್ಟ ಹತ್ತಲು ಕಷ್ಟ ಆಗುತ್ತದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ರಾಮ ನವಮಿಯ ದಿನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬುವರು 101 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿ(Anjanadri Temple) ತನ್ನ ಸಾಹಸ ಮೆರೆದಿದ್ದರು.

ಇದೀಗ ಆ ದಾಖಲೆಯನ್ನು 105 ಕೆಜಿಯ ಅಕ್ಕಿ ಚೀಲ ಹೊರುವ ಮೂಲಕ, 570 ಮೆಟ್ಟಿಲು ಏರಿ ಹನುಮಂತ ದಾಖಲೆ ಮುರಿದಿದ್ದಾರೆ. ಇದೀಗ ಹನುಮಂತಪ್ಪ ಪೂಜಾರ, ರಾಯಪ್ಪ ಅವರಿಗಿಂತ 4 ಕೆಜಿ ಹೆಚ್ಚಿರುವ ಅಕ್ಕಿ ಚೀಲ ಹೊತ್ತುಕೊಂಡು ಹೋಗಿದ್ದಾರೆ.

Leave A Reply

Your email address will not be published.