Lucky Moles: ಹುಡುಗಿಯರ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ತನ್ನ ಪತಿಯ ಮನೆಗೆ ಅದೃಷ್ಟ ತರುತ್ತಾಳಂತೆ!

Lucky Moles: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಭವಿಷ್ಯವನ್ನು(Future) ತಿಳಿಯುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದರ ನಡುವೆ ಕೆಲವರು ಅಂಗೈ ನೋಡಿ ಇಲ್ಲವೇ ಹಸ್ತರೇಖೆಗಳನ್ನು ಗಮನಿಸಿ ವ್ಯಕ್ತಿಯ ಗುಣ, ವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡುವುದನ್ನು ಕೇಳಿರಬಹುದು. ಅಷ್ಟೇ ಅಲ್ಲದೇ ನಮ್ಮ ದೇಹದಲ್ಲಿ ಮಚ್ಚೆಗಳನ್ನು(Birth Marks) ನೋಡಿ ಕೂಡ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಬಹುದು. ಮಾನವ ದೇಹದ ಮೇಲೆ ಕಂಡು ಬರುವ ಈ ವಿಶಿಷ್ಟ ಗುರುತಿನ ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವರ ಭವಿಷ್ಯದ ಬಗ್ಗೆ ಒಳನೋಟವನ್ನು ನೀಡುತ್ತವೆ.

ಮಚ್ಚೆಗಳು(Moles) ಸಾಮಾನ್ಯವಾಗಿ ಚರ್ಮದ ಮೇಲೆ ಕಾಣುವ ಕಂದು(Brown) ಮತ್ತು ಕಪ್ಪು(Black) ಬಣ್ಣದ ಸಣ್ಣ ಕಲೆಗಳಾಗಿದ್ದು,ಮಚ್ಚೆಯ ಆಕಾರ, ಗಾತ್ರ ಮತ್ತು ಬಣ್ಣವನ್ನು ಆಧರಿಸಿ ವ್ಯಕ್ತಿಯ ಅದೃಷ್ಟದ ಬಗ್ಗೆ ತಿಳಿದುಕೊಳ್ಳಬಹುದು. ಅದರಲ್ಲಿಯೂ ಕೆಲ ಭಾಗದಲ್ಲಿ (Lucky Moles)ಮಚ್ಚೆ ಇರುವ ಮಹಿಳೆಯರು ಪತಿಯ ಮನೆಗೆ ಅದೃಷ್ಟವನ್ನು ಒಯ್ಯುತ್ತಾರಂತೆ. ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳ ಅರ್ಥವನ್ನು ವಿವರಿಸಲಾಗಿದ್ದು, ಮಚ್ಚೆಗಳ ಮೂಲಕ ಶುಭ ಹಾಗೂ ಅಶುಭ ಎರಡೂ ಸಂಕೇತಗಳನ್ನು ತಿಳಿಯಬಹುದು.

ಮಹಿಳೆಯ ಗಲ್ಲದ ಮೇಲೆ ಮಚ್ಚೆ ಇರುವುದನ್ನು ಮಂಗಳಕರವೆಂದು ಹೇಳಲಾಗಿದೆ. ಈ ಮಹಿಳೆಯರು ಸುಂದರವಾಗಿದ್ದು, ಇವರು ಎಲ್ಲರನ್ನು ಬೇಗ ಮೋಡಿ ಮಾಡುವ ಸಾಮರ್ಥ್ಯ ಹೊಂದಿದ್ದು, ತಮ್ಮ ಜೀವನ ಸಂಗಾತಿಯಿಂದ ಸಾಕಷ್ಟು ಪ್ರೀತಿಯನ್ನು ಸಂಪಾದಿಸುತ್ತಾರೆ. ಇವರಿಗೆ ಯಾವುದೇ ಕೊರತೆಯಿಲ್ಲದೆ ಜೀವನ ನಡೆಸಬಹುದಾಗಿದೆ.

ಸಾಮುದ್ರಿಕ ಶಾಸ್ತ್ರದ ಅನುಸಾರ, ಹಣೆಯ ಮೇಲೆ ಮಚ್ಚೆ ಇರುವ ಮಹಿಳೆಯರು ತುಂಬಾ ಅದೃಷ್ಟವಂತರಾಗಿದ್ದು, ನಾಯಕತ್ವದ ಗುಣ ಹೊಂದಿರುತ್ತಾರೆ. ಮಹಿಳೆಯರು ತಮ್ಮದೇ ಆದ ಉನ್ನತ ಸ್ಥಾನಕ್ಕೇರುತ್ತಾರೆ. ಈ ಮಹಿಳೆಯರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದು, ಅವರು ಹೆಚ್ಚು ಹಣವನ್ನು ಗಳಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ಕುತ್ತಿಗೆಯಲ್ಲಿ ಮಚ್ಚೆ ಇರುವ ಹುಡುಗಿಯರು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಈ ಹುಡುಗಿಯರು ಅಂದುಕೊಂಡಿದ್ದನ್ನು ಮಾಡದೇ ಬಿಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಬಿಟ್ಟುಕೊಡುವುದಿಲ್ಲ ಮತ್ತು ಮುನ್ನುಗ್ಗುವುದಿಲ್ಲ. ಅಂತಹ ಹುಡುಗಿಯರು ನಿರ್ಭೀತರು ಮತ್ತು ಯಾರಿಗೂ ತಲೆಬಾಗುವುದಿಲ್ಲ. ಬಡ ಕುಟುಂಬದಲ್ಲಿ ಹುಟ್ಟಿದ ಮೇಲೂ ಅಪಾರ ಸಂಪತ್ತಿನ ಒಡತಿಯಾಗಿ ಇಡೀ ಕುಟುಂಬದ ಭಾಗ್ಯವನ್ನು ಬೆಳಗುತ್ತಾಳೆ.

ಹುಡುಗಿಯ ಭುಜದ ಮೇಲೆ ಮಚ್ಚೆಯಿದ್ದಲ್ಲಿ ಅವರು ಜೀವನದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಗಳಿಸುತ್ತಾರೆ. ಅಷ್ಟೇ ಅಲ್ಲದೆ, ಈ ಮಹಿಳೆಯರು ಹೆಚ್ಚು ದಯೆ ಸಹನೆ ಹೊಂದಿದ್ದು, ಇತರರ ಕಷ್ಟಗಳಿಗೆ ಮರುಗುವ ಗುಣ ಹೊಂದಿರುತ್ತಾರೆ. ಹೀಗಾಗಿ ಇತರರಿಗೆ ಸಹಾಯ ಮಾಡುವ ಜೊತೆಗೆ ಸಮಾಜದಲ್ಲಿ ಈ ಮಹಿಳೆಯರಿಗೆ ಹೆಚ್ಚಿನ ಗೌರವ ಲಭ್ಯವಾಗುತ್ತದೆ.

ಮಹಿಳೆಯ ಸೊಂಟದ ಮೇಲಿನ ಮಚ್ಚೆಯು ಅವಳು ಶ್ರೀಮಂತಳು ಎಂಬುದನ್ನು ಸೂಚಿಸುತ್ತದೆ. ಈ ಸ್ತ್ರೀಯರು ಅಪಾರವಾದ ಸಂಪತ್ತು-ವೈಭವ-ಐಶ್ವರ್ಯಗಳನ್ನು ಪಡೆದು ರಾಣಿಯರ ರೀತಿ ಐಶಾರಾಮಿ ಜೀವನ ನಡೆಸುತ್ತಾರೆ. ಅಷ್ಟೇ ಅಲ್ಲದೆ, ಯಾವುದೇ ಕ್ಷೇತ್ರಕ್ಕೆ ಹೋದರೂ ಈ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೀರ್ತಿ ಲಭ್ಯವಾಗುತ್ತದೆ.

ಮಚ್ಚೆ ಪುರುಷರ ಮತ್ತು ಮಹಿಳೆಯರಿಗೆ ತಂದುಕೊಡುವ ಅದೃಷ್ಟ ವಿಭಿನ್ನವಾಗಿರುತ್ತದೆ. ಹಣೆಯ ಬಲಭಾಗದಲ್ಲಿ ಮಚ್ಚೆಯಿದ್ದರೆ, ನೀವು ವಯಸ್ಸಾದಂತೆ ಹೆಚ್ಚಿನ ಆದಾಯ ಗಳಿಸುವ ಸಾಮರ್ಥ್ಯ ಹೊಂದುತ್ತೀರಿ. ನೀವು ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಕೂಡ ಬಂದು ಒದಗಬಹುದು. ಒಂದು ವೇಳೆ, ಮಚ್ಚೆಯು ನಿಮ್ಮ ಹಣೆಯ ಎಡಬದಿಯಲ್ಲಿದ್ದರೆ, ನೀವು ಸಾಕಷ್ಟು ಸಂಪತ್ತನ್ನು ಸಂಗ್ರಹಿಸಿದರೂ ಕೂಡ, ಇತರರಿಗೆ ಸಹಾಯ ಮಾಡುವತ್ತ ಗಮನ ಹರಿಸುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

ನಿಮ್ಮ ತುಟಿಗಳ ಮೇಲ್ಭಾಗದ ಹೊರ ಅಂಚಿನಲ್ಲಿರುವ ಮಚ್ಚೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ ಆದರೆ, ನಿಮ್ಮ ಕೆಳಗಿನ ತುಟಿಯ ಮೇಲೆ ಮಚ್ಚೆ ಇದ್ದಲ್ಲಿ ಅದು ಜೂಜಾಡುವ ಪ್ರವೃತ್ತಿಯನ್ನು ಸಂಕೇತಿಸುತ್ತದೆ. ಒಂದು ವೇಳೆ, ನಿಮ್ಮ ಎದೆಯ ಮೇಲೆ ಕಪ್ಪು-ಕಂದು ಬಣ್ಣದ ಮಚ್ಚೆ ಇದ್ದರೆ, ನಿಮ್ಮನ್ನು ಅದೃಷ್ಟವಂತರು ಎನ್ನಲಾಗುತ್ತದೆ. ನಿಮ್ಮ ಎದೆಯ ಮೇಲಿರುವ ಮಚ್ಚೆಯು ಹೆಚ್ಚಿನ ಮಹತ್ವಾಕಾಂಕ್ಷೆಯ ಪ್ರವೃತ್ತಿಯವರು ಎಂಬುದನ್ನು ಸೂಚಿಸುತ್ತದೆ. ಜೀವನದಲ್ಲಿ ಹೆಚ್ಚಿನ ವಿಷಯಗಳತ್ತ ನೀವು ಗಮನ ನೀಡುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: Body fat : ದೇಹದಲ್ಲಿರುವ ಕೊಬ್ಬನ್ನು ಈಸಿಯಾಗಿ ಕರಗಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

Leave A Reply

Your email address will not be published.