MLA Facilities: ಒಬ್ಬ ಶಾಸಕನ ತಿಂಗಳ ಸಂಬಳವೆಷ್ಟು? ಅವರಿಗೆ ಫ್ರೀ ಆಗಿ ಸಿಗೋ ಸವಲತ್ತುಗಳೇನು?

MLA Facilities : ನಾಡಿನ ಜನತೆ ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಲಿ, ಜನಪರ ಕಾರ್ಯಗಳು ನಡೆದು ಎಲ್ಲರಿಗೂ ಪ್ರಯೋಜನವಾಗಲಿ ಎಂದೆಲ್ಲ ಯೋಚಿಸಿ ಆಯಾಯ ಕ್ಷೇತ್ರಗಳಿಂದ ಶಾಸಕರನ್ನು(MLA) ಗೆಲ್ಲಿಸಿ ವಿಧಾನಸೌಧ (Vidhanasoudha) ಕ್ಕೆ ಕಳಿಸಿರುತ್ತೇವೆ. ಗೆದ್ದ ಬಳಿಕ ಕೆಲವರು ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿದರೆ, ಇನ್ನು ಕೆಲವರು ತಮ್ಮ ಆಸ್ತಿ ಪಾಸ್ತಿಗಳ ಅಭಿವೃದ್ಧಿಯತ್ತ ಗಮನ ನೀಡುತ್ತಾರೆ. ಹಾಗಿದ್ರೆ ಒಬ್ಬ ಶಾಸಕರಿಗೆ ಸರ್ಕಾರದಿಂದ ಎಷ್ಟೇಲ್ಲಾ, ಏನೆಲ್ಲಾ (MLA Facilities) ಸೌಲಭ್ಯ ಸಿಗುತ್ತೆ? ನಮ್ಮ ಮಂತ್ರಿ (Minister) ಮಹೋದಯರ ಸ್ಯಾಲರಿ ಎಷ್ಟಿರುತ್ತದೆ? ಜನಸೇವೆ ಮಾಡುತ್ತೇವೆ ಎನ್ನುವ ಅವರು ಯಾವ್ಯಾವ ಸೌಲಭ್ಯ ಪಡೆದುಕೊಳ್ಳುತ್ತಾರೆ? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಅಂದಹಾಗೆ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಒಬ್ಬ ಶಾಸಕರಿಗೆ ತಿಂಗಳಿಗೆ ಬೇಸಿಕ್ ಸ್ಯಾಲರಿ 40,000 ದಷ್ಟಿದೆ. ಅಂದರೆ ವರ್ಷಕ್ಕೆ 4.80 ಲಕ್ಷ ರೂಪಾಯಿಗಳು. ಇಷ್ಟೇನಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಬರೀ ಸ್ಯಾಂಪಲ್. ಯಾಕೆಂದರೆ ಅವರಿಗೆ ಸಿಗುವಂತಹ ಇತರ ಸೌಲಭ್ಯಗಳ ಬಗ್ಗೆ ನೋಡಿದ್ರೆ ನಿಮಗೇ ಅಚ್ಚರಿ ಆಗುತ್ತದೆ.

ಯಾಕೆಂದರೆ ಪ್ರತಿಯೊಬ್ಬ ಶಾಸಕರಿಗೂ ತಿಂಗಳಿಗೆ 60,000 ಕ್ಷೇತ್ರ ಪ್ರಯಾಣ ಭತ್ಯೆ ನೀಡಲಾಗುತ್ತೆ, ಜೊತೆಗೆ 60,000 ರೂ. ಕ್ಷೇತ್ರ ಭತ್ಯೆ ಕೂಡ ಸಿಗುತ್ತೆ. ಇನ್ನು ತಿಂಗಳಿಗೆ 20,000 ರೂ. ದೂರವಾಣಿ ಭತ್ಯೆ, 5,000 ರೂ. ಅಂಚೆ ಭತ್ಯೆ ಕೂಡ ಸಿಗುತ್ತೆ. ಅಲ್ಲದೆ ಆಪ್ತ ಸಹಾಯಕರನ ನೇಮಿಸಿಕೊಳ್ಳಲು ಅಂದರೆ ಪಿಎ ನೇಮಿಸಿಕೊಳ್ಳಲು 20,000 ರೂ. ಭತ್ಯೆಯನ್ನು ಸರ್ಕಾರ ನೀಡುತ್ತದೆ. ಒಂದು ಕಿಲೋಮೀಟರ್ ಗೆ 35 ರೂಪಾಯಿಗಳಂತೆ ಪ್ರಯಾಣ ಭತ್ಯೆಯನ್ನು ಕೂಡ ನೀಡಲಾಗುತ್ತದೆ. ಪ್ರಯಾಣ ಮಾಡುತ್ತಾ ಎಲ್ಲಾದರೂ ಉಳಿದುಕೊಂಡರೆ ಕರ್ನಾಟಕದ ಒಳಗಡೆ ಆದ್ರೆ 2500ರೂ. ದಿನಭತ್ಯೆ ಸಿಗುತ್ತೆ ಹೊರ ರಾಜ್ಯದಲ್ಲಾದ್ರೆ ಉಳಿದುಕೊಳ್ಳಲು 3500 ದಿನಕ್ಕೆ ನೀಡಲಾಗುತ್ತೆ. ಅದೇ ರೀತಿ ಹೊರ ರಾಜ್ಯದ ಹೋಟೆಲಿನಲ್ಲಿ ಉಳಿದುಕೊಂಡರೆ ರೂ.7000 ದಿನ ಭತ್ಯೆ ಸಿಗುತ್ತದೆ. ಅಂದರೆ ತತಿಂಗಳಿಗೆ ಸುಮಾರು 2.5 ಲಕ್ಷ ಒಬ್ಬ ಶಾಸಕರಿಗೆ ಖರ್ಚಾಗುತ್ತೆ ಎಂದಾಯಿತು.

ಹೌದು ಸ್ನೇಹಿತರೆ, ಸಿಎಂ, ವಿಧಾನ ಸಭೆ ಸ್ಪೀಕರ್, ವಿಧಾನ ಪರಿಷತ್ ಸ್ಪೀಕರ್, ವಿಪಕ್ಷ ನಾಯಕ, ಸಚಿವರು, ಶಾಸಕರು ಸಂಬಳದ ಜೊತೆ ಹಲವು ರೀತಿಯ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಾರೆ. ಕ್ಷೇತ್ರ ಭತ್ಯೆ, ಕಚೇರಿ ಭತ್ಯೆ, ದೂರವಾಣಿ ಭತ್ಯೆ, ಪ್ರಯಾಣ ಭತ್ಯೆ, ಆರೋಗ್ಯ ವಿಮೆ, ನಿವೃತ್ತಿ ವೇತನ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರ ಜೊತೆಗೆ ಇತರೇ ಪ್ರಮುಖ ಸೌಲಭ್ಯಗಳು ಇವೆ, ವೇತನ, ಭತ್ಯೆ ಎಲ್ಲಾ ಸೇರಿದಂತೆ ಅವರು ತಿಂಜಳಿಗೆ ಸುಮಾರು 2.05 ಲಕ್ಷ ರೂಪಾಯಿ ಪಡೆಯುತ್ತಾರೆ.

ಇನ್ನು ಹೀಗೆ ಪ್ರಯಾಣ ಮಾಡುವಾಗ ಶಾಸಕರು ತಮ್ಮ ಜೊತೆಗೆ ಒಬ್ಬ ಸದಸ್ಯನನ್ನು ಕೂಡ ಕರೆದುಕೊಂಡು ಹೋಗಬಹುದು ಅವರ ಚಾರ್ಜ್ ಕೂಡ ಸರ್ಕಾರವೇ ಭರಿಸುತ್ತೆ. ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳು ಮತ್ತು ಡಿಸ್ಪೆನ್ಸರಿಗಳಲ್ಲಿ ಶಾಸಕರು ಉಚಿತ ವೈದ್ಯಕೀಯ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಅವರಿಗೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮಾ ರಕ್ಷಣೆಯನ್ನು ಸಹ ಒದಗಿಸಲಾಗಿದೆ. ಶಾಸಕರು ತಮ್ಮ ಕ್ಷೇತ್ರ ಮತ್ತು ಬೆಂಗಳೂರು ನಡುವಿನ ಪ್ರಯಾಣದ ವೆಚ್ಚವನ್ನು ಭರಿಸಲು ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.

ಶಾಸಕರು ರಾಜ್ಯ ಸಾರಿಗೆ ಬಸ್ ಮತ್ತು ರೈಲುಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಕಾರು ಬೈಕ್ ಮೊದಲಾದ ವಾಹನ ಖರೀದಿಗೆ ಅಡ್ವಾನ್ಸ್ ಆಗಿ ಹಣ ಕೂಡ ನೀಡಲಾಗುತ್ತದೆ. ರಾಜ್ಯ ಸರ್ಕಾರ ಎಂ ಎಲ್ ಎ ಗಳಿಗೆ ಓಡಾಡುವುದಕ್ಕೆ ವಾಹನವನ್ನು ನೀಡುವುದಿಲ್ಲ. ಆದರೆ ಅವರು ವಾಹನ ಖರೀದಿ ಮಾಡಿದರೆ ಸಾಲದ ರೂಪದಲ್ಲಿ ಅಡ್ವಾನ್ಸ್ ಹಣವನ್ನು ನೀಡುತ್ತದೆ.

ಇನ್ನು ಎಂಎಲ್ಎ ಅವರ ಅವಧಿ ಮುಗಿದ ನಂತರ ಪೆನ್ಷನ್ ಸಮಯದಲ್ಲಿ 50,000 ದಿಂದ ಒಂದು ಲಕ್ಷದ ವರೆಗೂ ಪಿಂಚಣಿ ಸಿಗುವ ಸಾಧ್ಯತೆ ಇದೆ. ಎಂಎಲ್ಎ ಅಧಿಕಾರ ಅವಧಿ ಐದು ವರ್ಷ ಆದರೆ ಅವರು ಐದು ವರ್ಷಗಳು ಕೂಡ ಎಂಎಲ್ಎ ಆಗಿದ್ರೆ ಮಾತ್ರ ಪಿಂಚಣಿ ಸಿಗುತ್ತೆ ಎಂದೇನು ಇಲ್ಲ ಕೇವಲ ಒಂದೆರಡು ವರ್ಷ ಎಂಎಲ್ಎ ಆಗಿದ್ರು ಅವರಿಗೆ ಪಿಂಚಣಿ ಸೌಲಭ್ಯ ದೊರೆಯುತ್ತದೆ. ಇನ್ನು ಹೆಚ್ಚು ಹೆಚ್ಚು ಬಾರಿ ಎಂಎಲ್ಎ ಆಗುತ್ತಾ ಹೋದರೆ ಅವರಿಗೆ ಸಿಗುವ ಪಿಂಚಣಿ ಹಣದ ಮೊತ್ತ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ.

ಅಂದಹಾಗೆ ಕರ್ನಾಟಕ ಸೇರಿದಂತೆ ಭಾರತದಲ್ಲಿನ ಶಾಸಕರ ವೇತನವನ್ನು ಭಾರತದ ಸಂವಿಧಾನದ 164 (1) ವಿಧಿಯ ಪ್ರಕಾರ ರಾಜ್ಯ ಶಾಸಕಾಂಗವು ಕಾನೂನು ಅಥವಾ ಸುಗ್ರೀವಾಜ್ಞೆಯ ಅಂಗೀಕಾರದ ಮೂಲಕ ಹೆಚ್ಚಿಸಲಾಗುತ್ತದೆ. ಮುಖ್ಯಮಂತ್ರಿ ಮತ್ತು ಇತರ ಸಚಿವರು, ಶಾಸಕರು ಸೇರಿದಂತೆ, ರಾಜ್ಯ ಶಾಸಕಾಂಗವು ನಿರ್ಧರಿಸಿದಂತೆ ಸಂಬಳ ಮತ್ತು ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ನಿರ್ಧರಿಸಲು ರಾಜ್ಯ ಶಾಸಕಾಂಗವು ಕಾನೂನನ್ನು ಅಂಗೀಕರಿಸಬಹುದು ಅಥವಾ ಆ ನಿಟ್ಟಿನಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಬಹುದು.

ಶಾಸಕರ ವೇತನ ಪರಿಷ್ಕರಣೆ ಯಾವಾಗ?: ಕರ್ನಾಟಕದಲ್ಲಿ ಶಾಸಕರ ವೇತನ ಪರಿಷ್ಕರಣೆಯನ್ನು ರಾಜ್ಯ ಸರ್ಕಾರವು ಆವರ್ತಕ ಪರಿಶೀಲನೆ ಮತ್ತು ಪರಿಷ್ಕರಣೆ ಪ್ರಕ್ರಿಯೆಯ ಮೂಲಕ ನಿರ್ಧರಿಸುತ್ತದೆ. ಹಣದುಬ್ಬರ, ಜೀವನ ವೆಚ್ಚ ಮತ್ತು ತಜ್ಞರ ಸಮಿತಿಗಳ ಶಿಫಾರಸುಗಳಂತಹ ವಿವಿಧ ಅಂಶಗಳ ಆಧಾರದ ಮೇಲೆ ಸಾಮಾನ್ಯವಾಗಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗುತ್ತದೆ.

ರಾಜಕಾರಣಿಗಳ ಸಂಬಳ, ಸೌಲಭ್ಯ ಕಡಿತವಾಗುವುದು ಯಾವಾಗ?: ಕರ್ನಾಟಕದಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ಭಾರತದ ಸಂವಿಧಾನದ 164 (1) ವಿಧಿಯಂತೆ ರಾಜ್ಯ ಶಾಸಕಾಂಗವು ಕಾನೂನು ಅಥವಾ ಸುಗ್ರೀವಾಜ್ಞೆಯ ಅಂಗೀಕಾರದ ಮೂಲಕ ಕಡಿಮೆ ಮಾಡಬಹುದು. ಈ ಹಿಂದೆಯೂ ಕರ್ನಾಟಕದಲ್ಲಿ ಶಾಸಕರ ವೇತನ ಕಡಿತಗೊಳಿಸಿದ ನಿದರ್ಶನಗಳಿವೆ. ಉದಾಹರಣೆಗೆ, 2020 ರಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಒತ್ತಡವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಗೆ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳ ಸಂಬಳ ಮತ್ತು ಭತ್ಯೆಗಳಲ್ಲಿ 30% ಕಡಿತವನ್ನು ಘೋಷಿಸಿತು.

ಇದನ್ನೂ ಓದಿ: Coronavirus New Wave: ದೇಶದಲ್ಲಿ ಮತ್ತೆ ಕೋರೋನಾ ಹೊಸ ಅಲೆಯ ಅಬ್ಬರ !!

Leave A Reply

Your email address will not be published.