Smriti Irani : ಅಂದು ಸ್ನೇಹಿತೆಯ ಪತಿಯ ಹೃದಯ ಕದ್ದಿದ್ರು ಸ್ಮೃತಿ ಇರಾನಿ! ಇಲ್ಲಿದೆ ನೋಡಿ ಸಚಿವೆಯ ಬದುಕಿನ ಸ್ವಾರಸ್ಯಕರ ಕಥೆ!

Smriti Irani :ಪ್ರಧಾನಿ ಮೋದಿಯವರ ಸಂಪುಟದಲ್ಲಿ ಕೆಲವು ನಾರೀ ಶಕ್ತಿಗಳೂ ಇದ್ದಾರೆ. ಅದರಲ್ಲಿ ಪ್ರಮುಖರಾದವರೆಂದರೆ ನಟಿ ಕಮ್ ರಾಜಕಾರಣಿಯಾಗಿ, ನೇರಾ ನೇರಾ ಮಾತುಗಳ ಮೂಲಕ, ಪ್ರಬುದ್ಧವಾದ, ಪ್ರೌಡವಾದ ನುಡಿಗಳ ಮೂಲಕ ಎಲ್ಲರನ್ನೂ ಬೆರಗಾಗುವಂತೆ ಮಾಡಿರುವ, ದೇಶವೇ ಹೆಮ್ಮೆ ಪಡುವಂತಹ ನಾಯಕಿ ಎಂದ್ರೆ ಸ್ಮೃತಿ ಇರಾನಿ (Smriti Irani) ಅವರು. ಈ ದಿಟ್ಟ ಮಹಿಳೆ ನಿನ್ನೆ ತಾನೆ( ಮಾರ್ಚ್ 23) 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದುವರೆಗೂ ನಾವು ಇವರನ್ನು ರಾಜಕಾರಣಿಯಾಗಿ, ನಟಿಯಾಗಿ ನೋಡಿದ್ದೇವೆ. ಆದರೆ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ನಿಮಗೆ ಗೊತ್ತಾ?

ಹೌದು, ಸ್ಮೃತಿ ಅವರ ವೈಯಕ್ತಿಕ ಬದುಕಿನ ಕೆಲವು ವಿಚಾರಗಳು, ಅದರಲ್ಲೂ ಆ ಒಂದು ಕುತೂಹಲದ ಕಥೆ ಕೆಲವೇ ಕೆಲವರಿಗೆ ಗೊತ್ತಿದ್ದು, ಹಲವರಿಗೆ ತಿಳಿಯದಾಗಿದೆ. ಅಂದಹಾಗೆ ಪ್ರೀತಿ, ಪ್ರೇಮ ಎಂಬುದು ಎಲ್ಲರ ಜೀವನದಲ್ಲೂ ಆಗುವಂತದ್ದು. ಅಂತೆಯೇ ಸ್ಮೃತಿ ಇರಾನಿ ಅವರ ಜೀವನದಲ್ಲೂ ಈ ಪ್ರೀತಿ ಲಗ್ಗೆ ಇಟ್ಟಿತ್ತು. ಆದರೆ ಅದು ಯಾರ ಮೇಲೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಇವರು ತಮ್ಮ ಹೃದಯವನ್ನು ತಮ್ಮ ಸ್ನೇಹಿತೆಯ ಪತಿಗೆ ನೀಡಿಬಿಟ್ಟಿದ್ದರು, ಅಂದರೆ ಗೆಳತಿಯ ಪತಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ!

ಹೌದು! ಇವರ ಬದುಕಿನ ಘಟನೆ ಸ್ವಾರಸ್ಯಕರವಾಗಿದೆ. ತಮ್ಮ ಸ್ನೇಹಿತೆಯ ಪತಿ ಪಾರ್ಸಿ ಉದ್ಯಮಿ ಜುಬಿನ್ ಇರಾನಿ (Jubin Irani) ಅವರನ್ನೇ ಮೋಹಿಸಿದ್ದ ಸ್ಮೃತಿ ಕೊನೆಗೆ 2001 ರಲ್ಲಿ ಅವರನ್ನು ವಿವಾಹವಾದರು. ಸ್ಮೃತಿಯ ಪತಿ ಜುಬಿನ್ ಮೊದಲು ಆಕೆಯ ಆತ್ಮೀಯ ಸ್ನೇಹಿತೆ ಮೋನಾಳ ಪತಿಯಾಗಿದ್ದರು. ಜುಬಿನ್ ನಂತರದಲ್ಲಿ ಮೋನಾಗೆ ವಿಚ್ಛೇದನ ನೀಡಿ ಸ್ಮೃತಿ ಅವರನ್ನು ವರಿಸಿದರು. ಸ್ಮೃತಿ ಇರಾನಿ ತಮ್ಮ ಹುಟ್ಟುಹಬ್ಬದ ಒಂದು ವಾರದ ಮೊದಲು ಅಂದರೆ ಮಾರ್ಚ್ 23 ರ ಮೊದಲು ಜುಬಿನ್ ಇರಾನಿ ಅವರನ್ನು ವಿವಾಹವಾಗಿದ್ದು, ಎರಡು ವರ್ಷಗಳ ಹಿಂದೆ ತಮ್ಮ ವಿವಾಹ ವಾರ್ಷಿಕೋತ್ಸವದಂದು ಮದುವೆಯ ಫೋಟೋಗಳನ್ನು ವೀಡಿಯೊ ಮಾಡಿ, ಅದನ್ನು ಹಂಚಿಕೊಂಡಿದ್ದರು.

ಅಂದಹಾಗೆ ಮಾರ್ಚ್​ 23ರ 1976ರಂದು ಸ್ಮೃತಿ ಇರಾನಿಯವರು ಜನಿಸುತ್ತಾರೆ. ಸ್ಮೃತಿ ಇರಾನಿಯವರ ತಂದೆ ಪಂಜಾಬಿಯವರು ಮತ್ತು ತಾಯಿ ಅಸ್ಸಾಮಿ (Assamee) ಮೂಲದವರು. ಅವರ ತಂದೆ ಕೊರಿಯರ್ ಕಂಪನಿ ನಡೆಸುತ್ತಿದ್ದರು. ಮನೆಯ ಆರ್ಥಿಕ ಸ್ಥಿತಿಯು ತುಂಬಾ ವಿಶೇಷವಾಗಿರಲಿಲ್ಲ, ಇದರಿಂದಾಗಿ ಸ್ಮೃತಿ ದೆಹಲಿಯಲ್ಲಿ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಯಾರೋ ಟಿವಿ ಧಾರಾವಾಹಿಯಲ್ಲಿ ಕೆಲಸ ಮಾಡುವಂತೆ ಕೇಳಿದರು. ಅದರ ನಂತರ ಅವರು ಮುಂಬೈಗೆ ಬಂದರು. 1998 ರಲ್ಲಿ, ಅವರು ಮಿಸ್ ಇಂಡಿಯಾಗಾಗಿ ಆಡಿಷನ್ ಮಾಡಿದರು ಮತ್ತು ಆಯ್ಕೆಯಾದರು. ಆದರೆ, ಆಕೆಗೆ ಅದರ ಫೈನಲ್ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ಸಾಕಷ್ಟು ಹೋರಾಟದ ನಂತರ, ಅವರು ಅಂತಿಮವಾಗಿ 2000 ರಲ್ಲಿ ‘ಆತೀಶ್’ ಮತ್ತು ‘ಹಮ್ ಹೇ ಕಲ್ ಆಜ್ ಔರ್ ಕಲ್’ ಧಾರಾವಾಹಿಗಳಲ್ಲಿ (Serial) ಕೆಲಸ ಪಡೆದರು.

ಈ ನಡುವೆ ಏಕ್ತಾ ಕಪೂರ್ ಸ್ಮೃತಿಯನ್ನು ನೋಡಿದರು ಮತ್ತು ತಮ್ಮ ಧಾರಾವಾಹಿ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ (Kyunki Saas Bhi Kabhi Bahu Thi) ನಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. 2000-2008ರ ವರೆಗೆ ಅಂದರೆ ಎಂಟು ವರ್ಷ ನಡೆದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯಲ್ಲಿ ಕೆಲಸ ಮಾಡಿದ ನಂತರ ಸ್ಮೃತಿ ಹಿಂತಿರುಗಿ ನೋಡಲಿಲ್ಲ. ಈ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ ತುಳಸಿ ಪಾತ್ರ ಪ್ರತಿಯೊಬ್ಬರ ಮನ ಗೆದ್ದು, ಮನೆಮಾತಾಯಿತು.

ಇಂದು ಸ್ಮೃತಿ 47 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಟಿಯಾಗಿ ಮನೆ ಮಾತಾಗಿದ್ದ ಸ್ಮೃತಿ ಅವರು ಇಂದು ಇಡೀ ದೇಶವೇ ಹೆಮ್ಮೆ ಪಡುವಂಥ ರಾಜಕಾರಣಿಯಾಗಿ ಬೆಳೆದಿದ್ದಾರೆ. ಅವರ ನೇರಾನೇರ ಮಾತುಗಳು, ಹಲವು ವಿಷಯಗಳಲ್ಲಿ ಅವರ ಪ್ರೌಢಿಮೆಗೆ ಜನರು ಬೆಕ್ಕಬೆರಗಾಗುವುದೂ ಇದೆ. ದೆಹಲಿ ಮೂಲದ ಮಧ್ಯಮ ವರ್ಗದ ಪಂಜಾಬಿ ಕುಟುಂಬದಲ್ಲಿ ಜನಿಸಿದ ಸ್ಮೃತಿ ಅವರು ಭಾರತೀಯ ರಾಜಕೀಯ ರಂಗದ ಪ್ರಗತಿಪರ ರಾಜಕಾರಣಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ಬಿಜೆಪಿಯ ಮಹಿಳಾ ಘಟಕದಲ್ಲಿ ಕೆಲಸ ಮಾಡಿದ ಅವರು ನಂತರ ಗುಜರಾತಿನಿಂದ ರಾಜ್ಯಸಭೆಗೆ (Rajya Sabha) ಆಯ್ಕೆಯಾದರು. 2014 ರಿಂದ 2016ರ ಅವಧಿಯಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು. ಪ್ರಸ್ತುತ ಕೇಂದ್ರ ಸರ್ಕಾರದ ಜವಳಿ ಖಾತೆ ಸಚಿವರಾಗಿದ್ದಾರೆ.

ಇದನ್ನೂ ಓದಿ: Aishwarya Rai: ಸಲ್ಮಾನ್ ಖಾನ್ ಜೊತೆಗಿನ ಪ್ರೀತಿಯ ದಿನಗಳು ಕೆಟ್ಟ ಕನಸಿದ್ದಂತೆ! ಐಶು-ಸಲ್ಲು ಬ್ರೇಕಪ್ ಗೆ ಕಾರಣವೇನು? ಅಷ್ಟಕ್ಕೂ ಐಶ್ವರ್ಯಾ ರೈ ಹೇಳಿದ್ದೇನು?

Leave A Reply

Your email address will not be published.