Interesting Fact : ನಿಮಗಿದು ಗೊತ್ತೇ? ಸೂರ್ಯನ ಸುತ್ತ ಒಂದು ರೌಂಡ್‌ ಹಾಕಲು ಈ ಗ್ರಹಕ್ಕೆ ಬೇಕು ಹತ್ತು ಸಾವಿರ ವರ್ಷ!

Interesting Fact : ಬ್ರಹ್ಮಾಂಡದಲ್ಲಿ ಹಲವಾರು ಗ್ರಹಗಳಿವೆ. ಅವುಗಳ ಸೂರ್ಯನ ಸುತ್ತ ಸುತ್ತುತ್ತಲೇ ಇರುತ್ತವೆ. ಒಂದೊಂದು ಗ್ರಹ ಕೂಡ ಒಂದೊಂದು ಗುಣಲಕ್ಷಣಗಳನ್ನು(Interesting Fact) ಹೊಂದಿವೆ. ಈ ಗ್ರಹಗಳಲ್ಲಿ ಇದುವರೆಗೆ ಜೀವಸಂಕುಲನ ಹೊಂದಿರುವ ಗ್ರಹ ಎಂದರೆ ಅದು ಭೂಮಿ. ಭೂಮಿಯು ಸೂರ್ಯನಿಂದ ನಿರ್ದಿಷ್ಟ ದೂರದಲ್ಲಿದೆ.

ಗ್ರಹಗಳು ವಿಭಿನ್ನ ಗಾತ್ರ, ರಚನೆ, ಆಕಾರಗಳನ್ನು ಹೊಂದಿರುತ್ತವೆ. ಸೂರ್ಯನಿಗೂ ಹಾಗೂ ಗ್ರಹಗಳಿಗೂ ಒಂದು ಅವಿನಾಭಾವ ಸಂಬಂಧವನ್ನು ಹೊಂದಿದೆ. ಭೂಮಿಯು ಸೂರ್ಯನ (Sun) ಸುತ್ತ ಸುತ್ತಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಮತ್ತು ಬೇರೆ ಬೇರೆ ಗ್ರಹಗಳು ಅವುಗಳದ್ದೇ ನಿರ್ದಿಷ್ಟ ಸಮಯವನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ ಸೂರ್ಯನ ಸುತ್ತ ಒಂದು ಸುತ್ತು ಸುತ್ತಲೂ ಇಲ್ಲೊಂದು ಗ್ರಹ ಬರೋಬ್ಬರಿ 10,000 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಭೂಮಿಯಿಂದ ಸುಮಾರು 40 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ಗ್ರಹದ ಹೆಸರು VHS 1256 b. ಜೇಮ್ಸ್ ಸ್ಪೇಸ್ ಟೆಲಿಸ್ಕೋಪ್ ನಿಂದ ತಿಳಿದು ಬಂದ ಮಾಹಿತಿ ಪ್ರಕಾರ ಈ ಗ್ರಹವು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸಲು 10,000 ವರ್ಷಗಳನ್ನು ತೆಗೆದುಕೊಳ್ಳುತ್ತದೆ.

ಈ VHS 1256 b 150 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಯುವ ಗ್ರಹವಾಗಿದೆ. ಮತ್ತು ಸಂಶೋಧಕರು ತಿಳಿಸಿರುವ ಪ್ರಕಾರ ಈ ಗ್ರಹವು ಶತಕೋಟಿ ವರ್ಷಗಳವರೆಗೆ ಬದಲಾಗುತ್ತಲೇ ಇರುತ್ತದೆ ಮತ್ತು ತಂಪಾಗಿರುತ್ತದೆ ಎಂದು ತಿಳಿಸಿದ್ದಾರೆ.

ಗ್ರಹಗಳಿಗೆ ಹೋಲಿಸಿದರೆ ಬೃಹತ್ ಕಂದು ಕುಬ್ಜಗಳು ಹೆಚ್ಚು ಗುರುತ್ವಾರ್ಷಣೆಯನ್ನು ಹೊಂದಿರುತ್ತವೆ. ಗೃಹಗಳಿಗೆ ಹೆಚ್ಚು ಗುರುತ್ವಾರ್ಷಣೆ ಬಲ ಇರುವುದಿಲ್ಲ. ಮತ್ತು ಇದರಿಂದ ಸಿಲಿಕೇಟ್ ಮೋಡಗಳು ಕಾಣಿಸಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಸಿಲಿಕೇಟ್ ಧಾನ್ಯಗಳು ಹೊಗೆಯಲ್ಲಿರುವ ಸಣ್ಣ ಸಣ್ಣ ಮರಳಿನ ಕಣಗಳಂತೆ ಇರಬಹುದು ಎಂದು ಬೆತ್ ಬಿಲ್ಲರ್ ತಿಳಿಸಿದ್ದಾರೆ.

ಈ ಎಲ್ಲಾ ಮಾಹಿತಿಯನ್ನು ಬಾಹ್ಯಾಕಾಶ ದೂರದರ್ಶಕದ ಮೂಲಕ ಖಗೋಳ ಶಾಸ್ತ್ರಜ್ಞರರಾದ ಜೇಮ್ಸ್ ವೆಬ್ ಕಲೆ ಹಾಕಿದ್ದಾರೆ. ಖಗೋಳಾಶಾಸ್ತ್ರಜ್ಞರು ವೆಬ್ ನಲ್ಲಿ ಇರುವ ಮಿಡ್ ಇನ್ಫ್ರಾರೆಡ್ ಸ್ಪೆಕ್ರೋಗ್ರಾಫ್ ಮತ್ತು ನಿಯರ್-ಇನ್‌ಫ್ರಾರೆಡ್ ಸ್ಪೆಕ್ಟ್ರೋಗ್ರಾಫ್ ಎಂಬ ಎರಡು ಉಪಕರಣಗಳ ಮೂಲಕ ಸಂಗ್ರಹಿಸಲಾದ ಸ್ಪೆಕ್ಟ್ರಾ ಎಂದು ಕರೆಯಲ್ಪಡುವ ಡೇಟಾದ ಬಗ್ಗೆ ತಿಳಿಸಿದ್ದಾರೆ. ಗ್ರಹಗಳನ್ನು ಸುಲಭವಾಗಿ ವೀಕ್ಷಿಸಬಹುದು. ಯಾಕೆಂದರೆ ಗೃಹಗಳು ನಕ್ಷತ್ರಗಳಿಂದ ಅಧಿಕ ದೂರದಲ್ಲಿ ಪರಿಭ್ರಮಿಸುತ್ತದೆ ಇದ್ದರಿಂದ ನೇರವಾಗಿ ಗ್ರಹವನ್ನು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಜೇಮ್ಸ್ ವೆಬ್ ಸ್ಪೇಸ್ ಒಂದು ಆಧುನಿಕ ಖಗೋಳಶಾಸ್ತ್ರದ ಪರಿಣಾಮಕಾರಿ ಬಾಹ್ಯಾಕಾಶ ದೂರದರ್ಶಕ ಯಂತ್ರ ಎಂದೇ ಕರೆಯುತ್ತಿದ್ದರು. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಅನ್ನು ತಯರಿಸಿದ್ದು ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಯುವ ಉದ್ದೇಶಗಾಗಿ, ಇದನ್ನು ಕಳೆದ ಡಿಸೆಂಬರ್ 25, 2021 ರಂದು ನಾಸಾವು ಹತ್ತು ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ತಯಾರಿಸಿ ನಭಕ್ಕೆ ಕಳುಹಿಸಿದ್ದರು. ಅಲ್ಲಿಂದ ಈ ಟೆಲಿಸ್ಕೋಪ್‌ ಹಲವು ಮಾಹಿತಿ, ಚಿತ್ರಗಳನ್ನು ವಿಶ್ವಕ್ಕೆ ರವಾನಿಸುತ್ತಲೇ ಇದೆ. ಇದು ವಿಶ್ವಕ್ಕೆ ಪ್ರಮುಖ ಪಾತ್ರವಾಗಿ ಮಾಹಿತಿ ನೀಡುತ್ತಿದೆ.

Leave A Reply

Your email address will not be published.