Fart Secret : ಮನುಷ್ಯರು ಬಿಡುವ ಹೂಸು ಯಾಕೆ ಬಿಸಿಯಾಗಿರುತ್ತೆ? ಇದಕ್ಕೂ ಇದೆ ಒಂದು ಕಾರಣ!

Fart Secret: ಫಾರ್ಟಿಂಗ್ (Farting) ಅಥವಾ ಹೂಸು ಬಿಡುವುದು ಎಂದರೆ ಹೆಚ್ಚಿನ ಜನರಿಗೆ ಮುಜುಗರದ ವಿಚಾರ. ಹೊಟ್ಟೆಯಿಂದ ಹೊರಬರುವ ಗ್ಯಾಸ್‌ (Gas) ಆರೋಗ್ಯಕ್ಕೆ ಉತ್ತಮವಾದರೂ (Healthy), ಇದರ ಶಬ್ದ, ವಾಸನೆ ಮುಜುಗರ ಮತ್ತು ಅಸಹ್ಯವಾಗಿರುವಂತದ್ದು. ಫಾರ್ಟಿಂಗ್ ಆರೋಗ್ಯಕರವಾಗಿದೆ, ಏಕೆಂದರೆ ಇದು ದೇಹದಲ್ಲಿನ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಸ್‌ ಹೊರಬರದೇ ಇದ್ದರೆ ಹೊಟ್ಟೆಯುಬ್ಬರ, ನೋವಿನಂತಹ (Pain) ಲಕ್ಷಣಗಳನ್ನು ಅನುಭವಿಸಬೇಕಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಫಾರ್ಟ್ (Fart Secret) ಅನ್ನು ಹಿಡಿದಿಟ್ಟುಕೊಳ್ಳಬಾರದು ಏಕೆಂದರೆ ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಜೀರ್ಣಕಾರಿ ಕಾರ್ಯಗಳನ್ನು ಅಡ್ಡಿಪಡಿಸಬಹುದು. ಇದು ಫಾರ್ಟಿಂಗ್ ಸಹಜ ಆಗಿದ್ದರಿಂದ ಮುಜುಗರ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಈ ಊಸು​ ಬಿಸಿಯಾಗಿರುತ್ತದೆ. ಇದು ಹೆಚ್ಚಿನವರಿಗೆ ಗೊತ್ತಿಲ್ಲ. ಇದೀಗ ಈ ಬಗ್ಗೆ ಪ್ರಾಧ್ಯಾಪಕರೊಬ್ಬರು ಅಧ್ಯಯನ ನಡೆಸಿದ್ದು, ಮನುಷ್ಯರು ಬಿಡುವ ಹೂಸು ಬಿಸಿ ಬಿಸಿಯಾಗಿರುವುದೇಕೆ? ಇದಕ್ಕೂ ಒಂದು ಬಲವಾದ ಕಾರಣವಿದೆ ಎಂದಿದ್ದಾರೆ.

ಎನ್‌ವೈಯು ಲ್ಯಾಂಗೋನ್ ಹೆಲ್ತ್‌ನ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಪ್ರೊಫೆಸರ್ ಲಿಸಾ ಗನ್ಝು ಫಾರ್ಟ್‌ ಅಥವಾ ಹೂಸು ಏಕೆ ಬಿಸಿಯಾಗಿರುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಈ ಕೆಟ್ಟ ಗಾಳಿಯು ದೇಹದಿಂದ ಹಲವಾರು ಬಾರಿ ಹೊರಬರುತ್ತದೆ. ಪ್ರತಿ ಬಾರಿ ಅದರ ಉಷ್ಣತೆಯು ವಿಭಿನ್ನವಾಗಿರುತ್ತದೆ ಎಂದು ಪ್ರಾಧ್ಯಾಪಕರು ಹೇಳಿದರು.

ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ಐದರಿಂದ ಹದಿನೈದು ಬಾರಿ ಫಾರ್ಟ್​ ಮಾಡುತ್ತಾನೆ. ಆದರೆ ಅದರ ಧ್ವನಿ ಮತ್ತು ತಾಪಮಾನವು ಪ್ರತಿ ಬಾರಿಯೂ ವಿಭಿನ್ನವಾಗಿರುತ್ತದೆ. ಮನುಷ್ಯನ ದೇಹದ ಉಷ್ಣತೆಯು ಅವನ ಫಾರ್ಟ್​​ನ ತಾಪಮಾನವನ್ನು ನಿಯಂತ್ರಿಸುತ್ತದೆ ಎಂದು ಪ್ರೊಫೆಸರ್ ಲಿಸಾ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಅಲ್ಲದೆ, ಮನುಷ್ಯನ ದೇಹದ ತಾಪಮಾನದ ಬದಲಾವಣೆಯಿಂದ ಅದರ ಧ್ವನಿಯೂ ಭಿನ್ನವಾಗಿರುತ್ತದೆ ಹಾಗೂ ಉಷ್ಣತೆಯನ್ನು ಅವಲಂಬಿಸಿ ಹೂಸುಗಳು ಸಹ ಬಿಸಿಯಾಗುತ್ತವೆ ಎನ್ನಲಾಗಿದೆ.

ಕೆಲವೊಮ್ಮೆ ಆಹಾರದ (food) ಪದ್ಧತಿಯಲ್ಲಿ ಬದಲಾವಣೆ ಕಂಡು, ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗ್ಯಾಸ್​, ಹೊಟ್ಟೆಉರಿಯಂತಹ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಈ
ವೇಳೆ ದೇಹವು ಉಷ್ಣತೆಯಿಂದಿರುತ್ತದೆ. ಹೂಸು ಸಹ ಬಿಸಿಯಾಗುತ್ತದೆ ಎಮದು ಸಂಶೋಧಕರು ಹೇಳಿದ್ದಾರೆ.

Leave A Reply

Your email address will not be published.