Crime News : ಪಾಪಿ ತಂದೆಯ ಕಾಮಪುರಾಣ, ಮಕ್ಕಳ ಬಾತ್‌ರೂಂನಲ್ಲಿತ್ತು ರಹಸ್ಯ ಕ್ಯಾಮೆರಾ! ಹೆಂಡತಿಗೆ ತಿಳಿದಾಗ ಏನಾಯ್ತು?

Camera : ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಎಲ್ಲಿಲ್ಲದ ಪ್ರೀತಿ. ತಾಯಿಗಿಂತ ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡುವುದು ಅಪ್ಪನ ವಾತ್ಸಲ್ಯವನ್ನು. ಮಕ್ಕಳು ತಂದೆ ತಾಯಿಯನ್ನು (Parents) ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ ಇದು ಅತಿಯಾಗಲೂ ಬಾರದು. ಇಲ್ಲೊಬ್ಬ ತಂದೆ (Father )ತನ್ನ ಸ್ವಾರ್ಥಕ್ಕಾಗಿ ಮಕ್ಕಳನ್ನೇ ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ. ಹೆಣ್ಣು ಮಕ್ಕಳೆಂದರೆ ಮನೆಗೆ ದೀಪ ಎನ್ನುವ ಕಾಲದಲ್ಲಿ ಇಲ್ಲೊಬ್ಬ ಮಕ್ಕಳು ಸ್ನಾನ ಮಾಡುವ ಬಾತ್​ರೂಂನಲ್ಲೇ ಕ್ಯಾಮೆರಾವನ್ನು ( Camera) ಇಟ್ಟಿದ್ದಾನೆ. ಹಾಗಿದ್ರೆ ಅಷ್ಟಕ್ಕೂ ಅವ ಮಾಡಿದ್ದು ಏನು ಎಂಬ ವಿಷಯವನ್ನು ತಿಳಿಯಬೇಕಾದರೆ ಮುಂದೆ ಓದಿ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ(America California) ನಡೆದ ಈ ಘಟನೆಯು, 34 ವರ್ಷದ (age)ವ್ಯಕ್ತಿಯೊಬ್ಬ ತಮ್ಮ ಫೋನ್‌ನಲ್ಲಿ ಆಗಾಗ ಅಶ್ಲೀಲ ವೀಡಿಯೋಗಳನ್ನು ವೀಕ್ಷಿಸುತ್ತಿದ್ದರು. ಈ ವಿಷಯ ಹೆಂಡತಿಗೂ ಗೊತ್ತಿದ್ದರೂ ಅವಳು ಅದನ್ನು ಅಷ್ಟೊಂದು ಗಣನೆಗೆ ತೆಗೆದುಕೊಂಡಿಲ್ಲ. ಮುಂದೆ ಒಂದು ದಿನ ಈ ವಿಷಯ ದೊಡ್ಡದಾಗಬಹುದು ಎಂಬ ವಿಚಾರವನ್ನು ಕೂಡ ಅವಳು ತಿಳಿದುಕೊಂಡಿರಲಿಲ್ಲ.

ದೊಡ್ಡ ಮನೆಯಾಗಿದ್ದರೆ (big house) ಒಂದು ಮನೆಯಲ್ಲಿ ಮನೆಗೆ ಬಂದ ಗೆಸ್ಟ್​​ಗಾಗಿ (guest) ವಿಶೇಷ ಬಾತ್​​ ರೂಂ(bathroom) ಅನ್ನು ರೆಡಿ ಮಾಡಿರುತ್ತಾರೆ. ಈ ಪದ್ಧತಿ ಭಾರತದಲ್ಲಿ ಕಡಿಮೆ ಇದ್ದರೂ ವಿದೇಶದಲ್ಲಂತೂ ಹೆಚ್ಚಾಗಿಯೇ ಇದೆ. ಅದೇ ರೀತಿ ಈ ವ್ಯಕ್ತಿಯ ಮನೆಯಲ್ಲಿಯೂ ಮನೆಗೆ ಬಂದವರಿಗೆ ಸ್ನಾನವನ್ನು ಮಾಡಲು ಗೆಸ್ಟ್ ಬಾತ್​ ರೂಂ(guest bathroom) ಇತ್ತು. ಒಂದು ದಿನ ಹೆಂಡತಿ ಗೆಸ್ಟ್​ ಬಾತ್​ ರೂಂ ಕ್ಲೀನ್​ ಮಾಡುವಾಗ ತನ್ನ ಗಂಡ ಇಟ್ಟಿದ್ದಂತಹ ಸಿಸಿ ಕ್ಯಾಮೆರಾ(cc camera) ಹೆಂಡತಿಯ ಕಣ್ಣಿಗೆ ಬಿದ್ದಿದೆ. ತಕ್ಷಣ ಗಂಡನನ್ನು ಕರೆದು ಕೇಳಿದಾಗ ಮೊದಲು ಒಪ್ಪಲಿಲ್ಲ, ನಾನು ಇಟ್ಟದ್ದು ಅಲ್ಲ ಎಂದೇ ವಾದಿಸಿದ್ದಾನೆ. ಆದರೆ ನಂತರದಲ್ಲಿ ಒಪ್ಪಿಕೊಂಡು, ತೆಗೆಯುತ್ತೇನೆ ಎಂದು ಹೇಳಿದ್ದ. ಇದನ್ನು ಕೇಳಿ ಹೆಂಡತಿ ಇನ್ನು ತೆಗೆಯಬಹುದು ಎಂದು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಮಾಡಲಿಲ್ಲ. ಆದರೆ ಪತಿಯು ಅಶ್ಲೀಲ ವಿಡಿಯೋಗಳನ್ನು ನೋಡುವ ವಿಚಾರ ತಿಳಿದ ಪತ್ನಿ ಹೆಚ್ಚಾಗಿ ತನ್ನ ಗಂಡನನ್ನು(husband) ನಂಬಲು ಮುಂದಾಗಲಿಲ್ಲ.

ಹಾಗಾಗಿ ಗೆಸ್ಟ್​ ಬಾತ್​ ರೂಂ ನಲ್ಲಿ ಕ್ಯಾಮೆರಾ(guest bathroom camera) ನೋಡಿದವಳು ತಕ್ಷಣ ಮನೆಯಿಡೀ ಹುಡುಕಲು ಆರಂಭಿಸಿದಳು. ಆಗ ಈ ವ್ಯಕ್ತಿ ಮಕ್ಕಳ ಬಾತ್​ ರೂಂನಲ್ಲಿಯೂ (children’s bathroom)ಕ್ಯಾಮೆರಾ ಅಳವಡಿಸಿದ್ದಾನೆ ಎನ್ನುವ ವಿಚಾರವನ್ನು ತಿಳಿದಾಗ, ವಿಪರೀತ ಕೋಪಗೊಂಡ ಪತ್ನಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ತನಿಖೆ ನಡೆಸಿದಾಗ ಈ ವ್ಯಕ್ತಿಯು ಎರಡೂ ಸ್ನಾನದ ಕೊಠಡಿಯಲ್ಲಿ ಕ್ಯಾಮೆರಾ ಅಳವಡಿಸಿ ವಿಡಿಯೋ ರೆಕಾರ್ಡ್(video record) ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಮೂಲಕ ಅವನು ತನ್ನ ಸ್ವಂತ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಹ ಮಾಡಿದ್ದಾನೆ . ಇನ್ನು ಆ ರೆಕಾರ್ಡೆಡ್​ ವಿಡಿಯೋಗಳನ್ನು ಆತ ನೋಡುತ್ತಿದ್ದ. ಆದರೆ ಬೇರೆ ಅವರಿಗೆ ಈ ವಿಡಿಯೋಗಳನ್ನು ಶೇರ್​ ಮಾಡಿದ್ದಾನೆಯೋ, ಇಲ್ಲವೋ? ಎಂಬುದನ್ನು ಪೊಲೀಸರು(police) ತನಿಖೆ ನಡೆಸುತ್ತಿದ್ದಾರೆ.

ಕ್ಯಾಮೆರಾಗಳ ಹಾರ್ಡ್ ಡ್ರೈವ್‌ಗಳನ್ನು(camera hard drive) ಪೊಲೀಸರು ತೆಗೆದುಕೊಂಡ ನಂತರ ತನಿಖೆಯನ್ನು ಪ್ರಾರಂಭಿಸಿದಾಗ. ಹೆಂಡತಿ ಅದರಲ್ಲಿರುವ ವಿಡಿಯೋಗಳನ್ನು ನೋಡಿ ಇನ್ನಷ್ಟು ಆಶ್ಚರ್ಯಚಕಿತಳಾದಳು . ಈ ವ್ಯಕ್ತಿ ತನ್ನ ಸ್ವಂತ ಮಕ್ಕಳ 900 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಮತ್ತು ಚಿತ್ರಗಳನ್ನು ಮಾಡಿದ್ದಾನೆ ಎಂಬ ವಿಷಯವನ್ನು ತಿಳಿದು ಇನ್ನಷ್ಟು ಕೋಪಗೊಂಡಿದ್ದಾರೆ.

ಫೋರೆನ್ಸಿಕ್(forensic) ತನಿಖೆಯ ವರದಿ ಪ್ರಕಾರ ಈತ ಎಲ್ಲಾ ವಿಡಿಯೋಗಳನ್ನು ಸ್ನಾನಗೃಹದಲ್ಲೇ ಮಾಡಲಾಗಿದೆ ಹಾಗೆಯೇ ಅನೇಕ ವಿಡಿಯೋಗಳಲ್ಲಿ ಮಕ್ಕಳ ಜೊತೆಗೆ ದೊಡ್ಡವರೂ ಇದ್ದರು. ಅಷ್ಟು ಮಾತ್ರವಲ್ಲದೇ, ಮನೆಗೆ ಬರುವ ಅತಿಥಿಗಳು ಗೆಸ್ಟ್ ಹೌಸ್ ನ ಬಾತ್ ರೂಂಮ್‌ನಲ್ಲಿ(guest house bathroom) ಸ್ನಾನ ಮಾಡುವ ಅಶ್ಲೀಲ ಚಿತ್ರಗಳೂ ಮತ್ತು ವಿಡಿಯೋಗಳು ಇದ್ದವು. ಪೊಲೀಸರು ಮಾಡಿದ ತನಿಖೆಯ ಪ್ರಕಾರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.